ಆ್ಯಪ್ನಗರ

ಅಯೋಧ್ಯೆಯಿಂದ ಶಬರಿಮಲೆಗೆ ಪಾದಯಾತ್ರೆ

ನಾಲ್ವರು ಅಯ್ಯಪ್ಪ ವ್ರತಧಾರಿಗಳ ತಂಡವೊಂದು ಅಯೋಧ್ಯೆಯಿಂದ ಶಬರಿಮಲೆಗೆ ಪಾದಯಾತ್ರೆ ನಡೆಸುತ್ತಿದೆ.

Vijaya Karnataka 28 Sep 2019, 12:00 am
ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರ-ಬಾಬರಿ ಮಸೀದಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿಪ್ರತಿನಿತ್ಯ ವಿಚಾರಣೆಯಾಗುತ್ತಿದ್ದು, ದೇಶ ಕಾತರತೆಯಿಂದ ತೀರ್ಪಿಗಾಗಿ ಕಾಯುತ್ತಿದೆ. ಈ ಮಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಯಶಸ್ವಿಯಾಗಲಿ ಹಾಗೂ ಶಬರಿಮಲೆ ಪಾವಿತ್ರ್ಯತೆಗೆ ಧಕ್ಕೆಯಾಗದಿರಲೆಂಬ ಸಂಕಲ್ಪದೊಂದಿಗೆ ನಾಲ್ವರು ಅಯ್ಯಪ್ಪ ವ್ರತಧಾರಿಗಳ ತಂಡವೊಂದು ಅಯೋಧ್ಯೆಯಿಂದ ಶಬರಿಮಲೆಗೆ ಪಾದಯಾತ್ರೆ ನಡೆಸುತ್ತಿದೆ.
Vijaya Karnataka Web Sabarimala1.


ಹಿರಿಯ ಸ್ವಾಮಿ ಕುಪ್ಪೆಪದವಿನ ರಾಜಪ್ಪ ಸಪಲಿಗ ಕುಪ್ಪೆಪದವು, ಚರಣ್‌ರಾಜ್‌ ಕುಲಶೇಖರ, ಮಿಥುನ್‌ ಚಿತ್ರಾಪುರ ಹಾಗೂ ಶಶಿಕುಮಾರ್‌ ಕಕ್ಕಿಂಜೆ ಅವರು ಪಾದಯಾತ್ರೆ ಮಾಡುತ್ತಿರುವ ಅಯ್ಯಪ್ಪ ವ್ರತಧಾರಿಗಳು.

ಸೆ.18ರಂದು ಅಯೋಧ್ಯೆಯಲ್ಲಿ ಗುರುಸ್ವಾಮಿ ರಾಜೇಶ್‌ ಕೊಟ್ಟಾರಿ ನಾರ್ಲ ಇರುಮುಡಿ ಕಟ್ಟಿ ವ್ರತಧಾರಿಗಳನ್ನು ಬೀಳ್ಕೊಟ್ಟಿದ್ದಾರೆ. ಈ ತಂಡ ಉತ್ತರ ಪ್ರದೇಶದಿಂದ ಹೊರಟು ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮುಖೇನ ಕೇರಳ ಪ್ರವೇಶಿಸಲಿದೆ. ವ್ರತಧಾರಿಗಳ ತಂಡ 90 ದಿನಗಳಲ್ಲಿ 2,750 ಕಿ.ಮೀ. ಪಾದಯಾತ್ರೆ ಮಾಡಲಿದೆ. ಈ ತಂಡ ಡಿಸೆಂಬರ್‌ನ ಸಂಕ್ರಮಣ ಬಳಿಕ ಕ್ಷೇತ್ರದಲ್ಲಿ ನಡೆಯುವ ಮಂಡಲ ಪೂಜೆಗೆ ಶಬರಿಮಲೆಗೆ ತಲುಪುವ ಉದ್ದೇಶ ಹೊಂದಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ