ಆ್ಯಪ್ನಗರ

ನಾಸ್ತಿಕ ಕರುಣಾನಿಧಿಗೆ ದೇವಾಲಯ

ನಾಸ್ತಿಕರೆಂದೇ ಗುರುತಿಸಿಕೊಂಡಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಕರುಣಾನಿಧಿಯವರಿಗೆ ದೇವಾಲಯವೊಂದು ನಿರ್ಮಾಣವಾಗುತ್ತಿದೆ.

Vijaya Karnataka 30 Aug 2019, 2:58 pm
ಚೆನ್ನೈ: ನಾಸ್ತಿಕರೆಂದೇ ಗುರುತಿಸಿಕೊಂಡಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಕರುಣಾನಿಧಿಯವರಿಗೆ ದೇವಾಲಯವೊಂದು ನಿರ್ಮಾಣವಾಗುತ್ತಿದೆ. ನಮಕ್ಕಲ್‌ ಜಿಲ್ಲೆಯ ಕುಚ್ಚಿಕಾಡ್‌ ಗ್ರಾಮದಲ್ಲಿ ದೇವಾಲಯಕ್ಕೆ ಪಗುತವಾರಿವು ಆಲಯಂ (ವೈಚಾರಿಕ ದೇಗುಲ) ಎಂದು ಹೆಸರಿಡಲಾಗಿದೆ. ಅರುನ್‌ಥಿಯಾರ್‌ ಎಂದು ಕರೆಯಲ್ಪಡುವ ಸಮುದಾಯ ಈ ದೇಗುಲವನ್ನು ಸುಮಾರು 30 ಲಕ್ಷ ರೂ. ವೆಚ್ಚದಲ್ಲಿನಿರ್ಮಿಸುತ್ತಿದೆ.
Vijaya Karnataka Web Karunanidhi


ದೇವರ ರೀತಿಯಲ್ಲಿಅತೀಂದ್ರಯ ಶಕ್ತಿ ಇಲ್ಲ. ಹೀಗಾಗಿ ದೇವರು ನೀಡಿದ್ದನ್ನು ಸಾಮಾನ್ಯ ಮನುಷ್ಯರು ನೀಡಲು ಸಾಧ್ಯವಿಲ್ಲ. ಆದರೆ ಕರುಣಾನಿಧಿಯವರು ದೇವರು ಮಾತ್ರ ನೀಡಲು ಸಾಧ್ಯವಾದ್ದನ್ನು ನಮಗೆ ನೀಡಿದ್ದಾರೆ ಎಂದು ಸಮುದಾಯದ ಮುಖ್ಯಸ್ಥ ಚಿನ್ನಸ್ವಾಮಿ ಹೇಳಿದರು.

ಸಾಮಾಜಿಕವಾಗಿ ತೀರಾ ಕೆಳಸ್ತರದಲ್ಲಿರುವ ನಮ್ಮ ಸಮುದಾಯಕ್ಕೆ ಉದ್ಯೋಗ, ಶಿಕ್ಷಣದಲ್ಲಿಮೀಸಲಾತಿ ಒದಗಿಸುವ ದಿಟ್ಟ ನಿರ್ಧಾರವನ್ನು ಅವರು ಕೈಗೊಂಡಿದ್ದರು. ಅವರು ನಿಧನರಾದ ದಿನವೇ ದೇವಾಲಯ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿತ್ತು. ಆ ದಿನದಿಂದ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿದ್ದೆವು. ಇದುವರೆಗೆ ಸುಮಾರು 30 ಲಕ್ಷ ರೂ. ಸಂಗ್ರಹವಾಗಿದೆ. ಅದರಲ್ಲಿಎಷ್ಟು ಸಾಧ್ಯವೋ ಅಷ್ಟು ದೊಡ್ಡ ದೇವಾಲಯ ನಿರ್ಮಿಸುವುದು ನಮ್ಮ ಗುರಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ