ಆ್ಯಪ್ನಗರ

ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟಕ್ಕೆ ಬಸ್‌ ಸಮಯ ಬದಲು

ಪ್ರತಿ ವರ್ಷ ಬೆಟ್ಟಕ್ಕೆ ತೆರಳಲು ಶುಕ್ರವಾರ ಬೆಳಗಿನ ಜಾವ 2ಗಂಟೆಯಿಂದಲೇ ಬಸ್‌ ಸಂಚಾರ ವ್ಯವಸ್ಥೆ ಆರಂಭವಾಗುತ್ತಿದ್ದನ್ನು ಮೈಸೂರು ನಗರ ಪೊಲೀಸರು ಎರಡು ಗಂಟೆ ಮುಂದೂಡಿದ್ದು, ಸಂಚಾರದ ಅವಧಿಯನ್ನು ಕಡಿತಗೊಳಿಸಿದ್ದಾರೆ.

Vijaya Karnataka 11 Jul 2019, 2:43 pm
ಮೈಸೂರು: ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ತೆರಳಲಿರುವ ಭಕ್ತರು ಇನ್ನೂ ಎರಡು ಗಂಟೆ ತಡವಾಗಿ ತೆರಳಬೇಕಿದೆ.
Vijaya Karnataka Web chamundi

ಪ್ರತಿ ವರ್ಷ ಬೆಟ್ಟಕ್ಕೆ ತೆರಳಲು ಶುಕ್ರವಾರ ಬೆಳಗಿನ ಜಾವ 2ಗಂಟೆಯಿಂದಲೇ ಬಸ್‌ ಸಂಚಾರ ವ್ಯವಸ್ಥೆ ಆರಂಭವಾಗುತ್ತಿದ್ದನ್ನು ಮೈಸೂರು ನಗರ ಪೊಲೀಸರು ಎರಡು ಗಂಟೆ ಮುಂದೂಡಿದ್ದು, ಸಂಚಾರದ ಅವಧಿಯನ್ನು ಕಡಿತಗೊಳಿಸಿದ್ದಾರೆ. ಜು.12 ಸೇರಿದಂತೆ ಮುಂದಿನ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ತೆರಳಲು ಬೆಳಗ್ಗೆ 4ರಿಂದ ರಾತ್ರಿ 8ರವರೆಗೆ ಮಾತ್ರ ಉಚಿತ ಬಸ್‌ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
‘ಕಳೆದ ವಾರ ಬಸ್‌ ಸಂಚಾರ ಬೆಳಗಿನ ಜಾವ 2ಕ್ಕæ್ಕ ಆರಂಭಗೊಂಡು ರಾತ್ರಿ 8.30ರವರೆಗೆ ಇತ್ತು. ಈ ಸಂಚಾರ ಅವಧಿಯನ್ನು ಕಡಿತಗೊಳಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಲಲಿತ ಮಹಲ್‌ ಹೆಲಿಪ್ಯಾಡ್‌ನಿಂದ ಪ್ರತಿ ಆಷಾಢ ಶುಕ್ರವಾರದಂದು ಬೆಳಗ್ಗೆ 4ರಿಂದ ರಾತ್ರಿ 8ರವರೆಗೆ ಮಾತ್ರ ಸಂಚರಿಸುತ್ತವೆ. ಆದ್ದರಿಂದ ಸಾರ್ವಜನಿಕರು ಚಾಮುಂಡಿ ಬೆಟ್ಟಕ್ಕೆ ತೆರಳಲು ರಾತ್ರಿ 8ರ ಒಳಗಾಗಿ ಹೆಲಿಪ್ಯಾಡ್‌ನಿಂದ ಹೊರಡುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತೆರಳುವುದು. ರಾತ್ರಿ 8ರ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ಚಾಮುಂಡಿ ಬೆಟ್ಟದ ಪಾದದ ಮುಖಾಂತರ ಮೆಟ್ಟಿಲು ಹತ್ತಿ ಚಾಮುಂಡಿ ಬೆಟ್ಟಕ್ಕೆ ತೆರಳುವ ಸಾರ್ವಜನಿಕರಿಗೆ ಮೆಟ್ಟಿಲಿನ ಮುಖಾಂತರ ಬೆಟ್ಟವನ್ನು ಹತ್ತಲು ಬೆಳಗಿನ ಜಾವ 3ರ ನಂತರ ಗೇಟ್‌ ತೆರೆಯಲಾಗುವುದು. ಆದ್ದರಿಂದ ಸಾರ್ವಜನಿಕರು ಬೆಳಗಿನ ಜಾವ 3ಕ್ಕೂ ಮೊದಲು ಚಾಮುಂಡಿಬೆಟ್ಟದ ಪಾದದ ಬಳಿ ಬಂದು ಗುಂಪು ಸೇರಿ ನೂಕು ನುಗ್ಗಲು ಉಂಟಾಗುವ ಬದಲು ಬೆಳಗಿನ ಜಾವ 3ರ ನಂತರ ಬರಬೇಕು’ ಎಂದು ಆಯುಕ್ತರು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ