ಆ್ಯಪ್ನಗರ

ಉಡುಪಿ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಕೋಟಿ ತುಳಸಿ ಅರ್ಚನೆ ವೈಭವದಿಂದ ಸಂಪನ್ನಗೊಂಡಿತು.

Vijaya Karnataka 27 Sep 2019, 4:55 pm
ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಕೋಟಿ ತುಳಸಿ ಅರ್ಚನೆ ವೈಭವದಿಂದ ಸಂಪನ್ನಗೊಂಡಿತು.
Vijaya Karnataka Web palimaru swamiji


ಉಡುಪಿ ಜಿಲ್ಲೆಯ 28 ವಲಯಗಳ ಬ್ರಾಹ್ಮಣ ಸಂಘಗಳ 2,800ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದು, ತಲಾ 4 ಬಾರಿ ವಿಷ್ಣುಸಹಸ್ರನಾಮ ಪಾರಾಯಣ ನಡೆಸಿಕೊಟ್ಟರು. ನೂರಾರು ಭಕ್ತರು ತುಳಸಿ ದಳಗಳನ್ನು ಅರ್ಪಿಸಿದರು.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀ ಪಾದರು ಸಾನ್ನಿಧ್ಯ ವಹಿಸಿದ್ದರು. ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ನಡೆದಂತೆ ರಾಜಾಂಗಣದಲ್ಲಿಯೂ ಶ್ರೀಕೃಷ್ಣನ ಪ್ರತಿಮೆಗೆ ಅರ್ಚನೆ ನೆರವೇರಿತು.

ಪರ್ಯಾಯ ಪಲಿಮಾರು ಶ್ರೀಗಳು ಮಾತನಾಡಿ, 'ತುಳಸಿಯಲ್ಲಿಲಕ್ಷ್ಮೇ ಸನ್ನಿಧಾನವಿದ್ದು, ಈ ತುಳಸಿಗೆ ಸಮನಾದ ಬೇರೊಂದು ವಸ್ತುವಿಲ್ಲ. ತುಳಸಿ ಅರ್ಪಣೆ ನೇರವಾಗಿ ಭಗವಂತನಿಗೆ ತಲುಪುತ್ತದೆ' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ