ಆ್ಯಪ್ನಗರ

ಎಡನೀರು ಶ್ರೀಗಳ ಚಾತುರ್ಮಾಸ್ಯ ಸಂಪನ್ನ

ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ 59ನೇ ಚಾತುರ್ಮಾಸ್ಯ ವ್ರತಾನುಷ್ಠಾನದ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳೊಂದಿಗೆ ಸೆ. 14ರಂದು ಸೀಮೋಲ್ಲಂಘನದೊಂದಿಗೆ ಸಂಪನ್ನಗೊಳ್ಳಲಿದೆ.

Vijaya Karnataka 13 Sep 2019, 4:03 pm
ಎಡನೀರು ಶ್ರೀಗಳ ಚಾತುರ್ಮಾಸ್ಯ ಸಂಪನ್ನ
Vijaya Karnataka Web edaneeru


ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ 59ನೇ ಚಾತುರ್ಮಾಸ್ಯ ವ್ರತಾನುಷ್ಠಾನದ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳೊಂದಿಗೆ ಸೆ. 14ರಂದು ಸೀಮೋಲ್ಲಂಘನದೊಂದಿಗೆ ಸಂಪನ್ನಗೊಳ್ಳಲಿದೆ.

ಇದರ ಅಂಗವಾಗಿ ಮಂಗಳವಾರ ಸಂಜೆ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ವಿದ್ವಾನ್‌ ಬಳ್ಳಪದವು ಯೋಗೀಶ ಶರ್ಮ ಅವರ ಹಾಡುಗಾರಿಕೆಯಲ್ಲಿಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ವಿದ್ವಾನ್‌ ವೇಣುಗೋಪಾಲ ಶಾನುಭೋಗ್‌(ವಯಲಿನ್‌), ವಿದ್ವಾನ್‌ ಅನೂರು ದತ್ತಾತ್ರೇಯ ಶರ್ಮ ಬೆಂಗಳೂರು(ಮೃದಂಗ), ವಿದ್ವಾನ್‌ ಅನೂರು ವಿನೋದ್‌ ಶಾಮ್‌ ಬೆಂಗಳೂರು(ತಬ್ಲಾ), ವಿದ್ವಾನ್‌ ರಾಜೀವ ವೆಳ್ಳಿಕ್ಕೋತ್‌(ಮೋರ್ಸಿಂಗ್‌)ನಲ್ಲಿಸಹಕರಿಸಿದರು.

ಸ್ವಾಮೀಜಿ ನಿರ್ದೇಶನದಲ್ಲಿ ಬುಧವಾರ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು. ಗುರುವಾರ ಎಡನೀರು ಶ್ರೀಗಳ ನಿರ್ದೇಶನದಲ್ಲಿಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿಯಕ್ಷಗಾನ ಬಯಲಾಟ ಸುಧನ್ವ-ವೀರವರ್ಮ ಪ್ರದರ್ಶನಗೊಂಡಿತ್ತು. ಎಡನೀರು ಶ್ರೀಗಳಿಂದ ಭಜನ್‌ ಸಂಧ್ಯಾ ಶುಕ್ರವಾರ ಸಂಜೆ ನಡೆಯಿತು.

ಸೆ.14 ರಂದು ಚಾತುರ್ಮಾಸ್ಯ ವ್ರತ ಮಂಗಲೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಅಪರಾಹ್ನ 3.30ಕ್ಕೆ ಸೀಮೋಲ್ಲಂಘನ, ಮಂತ್ರಾಕ್ಷತೆ, ರಾತ್ರಿ 8 ರಿಂದ ಮಹಾಪೂಜೆ, ಭಜನಾ ಮಂಗಲೋತ್ಸವ, ಗುರುವಂದನೆ, ಪ್ರಸಾದ ವಿತರಣೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ