ಆ್ಯಪ್ನಗರ

ಐದು ಸಾವಿರ ವರ್ಷ ಪ್ರಾಚೀನ ಅಗ್ನಿ ದೇಗುಲ ಪತ್ತೆ

ಪೆರುವಿನ ಪಾರ್ಸಿಯೋ ಕಾಂಪ್ಲೆಕ್ಸ್‌ನಲ್ಲಿರುವ ದೇವಾಲಯದಲ್ಲಿ ಹಳದಿ ಮತ್ತು ಕೆಂಪುಬಣ್ಣದ ಜೇಡಿ ಮಣ್ಣಿನ ಮಾಡಿದ ರಚನೆಯೊಂದು ಪತ್ತೆಯಾಗಿದ್ದು, ಇದು ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ.

Vijaya Karnataka 6 Sep 2019, 3:47 pm
ಪೆರು: ಭಾರತದಲ್ಲಿ ಮಾತ್ರ ಹೋಮ-ಹವನದಂತಹ ಧಾರ್ಮಿಕ ಕಾರ್ಯಗಳು ನಡೆಯುತ್ತದೆ ಎಂಬ ನಂಬಿಕೆ ಇದೆ. ಆದರೆ ಅದು ನಿಜವಲ್ಲ.
Vijaya Karnataka Web bodhi logo

ಇಲ್ಲಿನ ಪಾರ್ಸಿಯೋ ಕಾಂಪ್ಲೆಕ್ಸ್‌ನಲ್ಲಿರುವ ದೇವಾಲಯದಲ್ಲಿ ಹಳದಿ ಮತ್ತು ಕೆಂಪುಬಣ್ಣದ ಜೇಡಿ ಮಣ್ಣಿನ ಮಾಡಿದ ರಚನೆಯೊಂದು ಪತ್ತೆಯಾಗಿದ್ದು, ಇದು ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಸಂಶೋಧಕರು ಇದಕ್ಕೆ ಅಗ್ನಿ ದೇವಾಲಯ ಎಂದು ಹೆಸರಿಟ್ಟಿದ್ದು, ಇದೊಂದು ಹೋಮ ಕುಂಡ ಹೇಳಿದ್ದಾರೆ. ಮಾರ್ಕೋ ಗೌಲೆನ್‌ ನೇತೃತ್ವದ ತಂಡ ಇದರ ಸಂಶೋಧನೆ ನಡೆಸಿದೆ. ಇದರಲ್ಲಿಅಗ್ನಿಯನ್ನು ಪ್ರತಿಷ್ಠಾಪಿಸಿ ದೇವರಿಗೆ ವಿಶೇಷ ವಸ್ತುಗಳನ್ನು ಅರ್ಪಿಸುತ್ತಿದ್ದರು. ಇದು ಭಾರತದಲ್ಲಿನಡೆಯುವ ಯಜ್ಞದ ರೀತಿಯ ವಿಧಿಯಾಗಿತ್ತು. ಕುಂಡದ ಸುತ್ತ ಪುರೋಹಿತರಿಗೆ ಕುಳಿತುಕೊಳ್ಳಲು ಆಗುವ ರೀತಿಯ ಆಸನ ವ್ಯವಸ್ಥೆ ಕೂಡ ಇದೆ. ಸಂಸ್ಕೃತದಲ್ಲಿ ಪೆರು ಎಂಬ ಶಬ್ದದ ಅರ್ಥ ಬಂಗಾರದ ಪರ್ವತ ಅಥವಾ ಸ್ವರ್ಗ ಎಂದಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ