ಆ್ಯಪ್ನಗರ

ಜ.1ರಂದು ಘಾಟಿ ಸುಬ್ರಹ್ಮಣ್ಯ ರಥೋತ್ಸವ

ದೊಡ್ಡಬಳ್ಳಾಪುರದ ಎಸ್‌ಎಸ್‌ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿಜನವರಿ 1ರಂದು ಮಧ್ಯಾಹ್ನ 12ಗಂಟೆಗೆ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.

Vijaya Karnataka 28 Dec 2019, 5:00 am
ಬೆಂಗಳೂರು
: ದೊಡ್ಡಬಳ್ಳಾಪುರದ ಎಸ್‌ಎಸ್‌ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿಜನವರಿ 1ರಂದು ಮಧ್ಯಾಹ್ನ 12ಗಂಟೆಗೆ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವರ ಬ್ರಹ್ಮರಥೋತ್ಸವ ನಡೆಯಲಿದೆ. ಈ ಪ್ರಯುಕ್ತ ಡಿ.28ರಿಂದ 2020ರ ಜನವರಿ 14ರವರೆಗೆ ರಾಜಬೀದಿ ಉತ್ಸವ ನಡೆಯಲಿವೆ. ಜ.1ರಂದು ಬೆಳಗ್ಗೆಯಿಂದಲೇ ರಂಗಮಂಟಪ ಸೇವೆ, ವಿಶೇಷ ಪೂಜೆ, ಪ್ರಸಾದ ವಿನಿಯೋಗ, ದೇವಾಲಯದಲ್ಲಿಪುಷ್ಪಾಲಂಕಾರ ಸೇವೆ, ಹೆಸರುಬೇಳೆ ಸೇವೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ.
Vijaya Karnataka Web ghati temple ratha
ಜ.1ರಂದು ಘಾಟಿ ಸುಬ್ರಹ್ಮಣ್ಯ ರಥೋತ್ಸವ


ದೇವಸ್ಥಾನದಲ್ಲಿನಡೆಯುವ ಸೇವಾ ವಿವರ:
ಘಾಟಿ ಕ್ಷೇತ್ರದಲ್ಲಿ ಪಂಚಾಮೃತ ಅಭಿಷೇಕ, ಏಕವಾರ ರುದ್ರಾಭಿಷೇಕ, ಪ್ರಾಕಾರೋತ್ಸವ, ಅರ್ಚನೆ, ಕ್ಷೀರಾಭಿಷೇಕ, ಸಹಸ್ರನಾಮ, ತುಲಾಭಾರ ಸೇವೆ, ಸಾಮೂಹಿಕ ಪುಷ್ಪಯಾಗ ಸೇವೆ, ಆಶ್ಲೇಷ ಬಲಿ, ಸರ್ಪಸಂಸ್ಕಾರ (ಪ್ರತಿ ತಿಂಗಳ ಪುಷ್ಯ ಮತ್ತು ಪುನರ್ವಸು ನಕ್ಷತ್ರಗಳ ದಿನದಂದು) ಸೇವೆಯನ್ನು ಮಾಡಿಸಬಹುದು. ಕ್ಷೇತ್ರ ಪರಿಚಯ ಪುಟ-8

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ