ಆ್ಯಪ್ನಗರ

ಭಗವಂತನು ಸರ್ವವ್ಯಾಪಿ: ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ

ಮಾನವನಾಗಿ ಹುಟ್ಟಿದ ಮೇಲೆ ಆತ್ಮರಹಸ್ಯವನ್ನು ತಿಳಿದುಕೊಳ್ಳಬೇಕು. ಸತ್ಯ, ಜ್ಞಾನ, ಚಿತ್ತ ಶುದ್ಧಿಯ ಪ್ರಾಪ್ತಿಗಾಗಿ ಆತ್ಮಬೋಧೆಯ ಅವಶ್ಯಕತೆ ಇದೆ. ಗಾಳಿಯನ್ನು ಕಣ್ಣುಗಳಿಂದ ಕಾಣಲು ಸಾಧ್ಯವಿಲ್ಲ. ಆದರೆ ನಮ್ಮ ಪ್ರಾಣದ ಮೂಲಾಧಾರ ವಾಯುವೇ ಆಗಿದೆ.

Vijaya Karnataka 17 Sep 2019, 2:30 pm
ಬೆಂಗಳೂರು: ಭಾರತ ದೇಶದ ಸನಾತನ ಸಂಸ್ಕೃತಿ ಶ್ರೇಷ್ಠವಾದುದು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಬೇಡ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಪತಿಗಳಾದ ಶ್ರೀ ಗುರುಸಿದ್ದರಾಜ ಯೋಗೀಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.
Vijaya Karnataka Web kaivara

ನಗರದಲ್ಲಿರುವ ರಾಜಾಜಿನಗರದ ಕೆ.ಎಲ್‌.ಇ. ಸೊಸೈಟಿ ಶಾಲೆಯ ಸಭಾಂಗಣದಲ್ಲಿ ಕೈವಾರದ ಶ್ರೀ ಯೋಗಿನಾರೇಯಣ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರ್ಮ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನಾಗಿ ಹುಟ್ಟಿದಮೇಲೆ ಆತ್ಮ ರಹಸ್ಯವನ್ನು ತಿಳಿದುಕೊಳ್ಳಬೇಕು. ಸತ್ಯ, ಜ್ಞಾನ, ಚಿತ್ತ ಶುದ್ಧಿಯ ಪ್ರಾಪ್ತಿಗಾಗಿ ಆತ್ಮಬೋಧೆಯ ಅವಶ್ಯಕತೆ ಇದೆ. ಗಾಳಿಯನ್ನು ಕಣ್ಣುಗಳಿಂದ ಕಾಣಲು ಸಾಧ್ಯವಿಲ್ಲ. ಆದರೆ ನಮ್ಮ ಪ್ರಾಣದ ಮೂಲಾಧಾರ ವಾಯುವೇ ಆಗಿದೆ. ಹಾಗೆಯೇ ಭಗವಂತನು ಸರ್ವವ್ಯಾಪಿಯಾಗಿದ್ದಾನೆ. ಅವನನ್ನು ನಂಬಬೇಕು. ಆಗಮಾತ್ರ ಆ ಸತ್ಯವು ಗೋಚರವಾಗುತ್ತದೆ. ಆತ್ಮನು ಕಣ್ಣಿಗೆ ಕಾಣುವುದಿಲ್ಲ. ಆತ್ಮವನ್ನು ಗ್ರಹಿಸುವುದೂ ಸಾಧ್ಯವಿಲ್ಲ. ಅದು ವಿಕಾರವನ್ನು ಹೊಂದುವುದಿಲ್ಲ. ನಾವು ಒಂದು ವಸ್ತ್ರವನ್ನು ತೆಗೆದು ಹಾಕಿ ಹೊಸ ವಸ್ತ್ರವನ್ನು ಹಾಕಿಕೊಂಡಂತೆ ದೇಹವು ನಾಶವಾದ ನಂತರ ಆತ್ಮವು ಇನ್ನೊಂದು ದೇಹವನ್ನು ಸೇರುತ್ತದೆ. ಇದು ಸಹಜ. ಈ ಸತ್ಯವನ್ನು ತಿಳಿದುಕೊಂಡು, ದೇಹಕ್ಕೊಸ್ಕರ ದುಃಖಿಸಬಾರದು ಎಂದರು.
ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳು ಹಾಗೂ ಗೋಕುಲ ಶಿಕ್ಷ ಣ ಸಂಸ್ಥೆಗಳ ಅಧ್ಯಕ್ಷ ರಾದ ಡಾ.ಎಂ.ಆರ್‌.ಜಯರಾಮ್‌ ಅವರು ಮಾತನಾಡಿ, ಋುಷಿಮುನಿಗಳು ನುಡಿದಿರುವ ವಾಕ್ಯಗಳು ಸತ್ಯವಾದವುಗಳು. ವೇದಾಂತದ ಉಪನಿಷತ್‌ಗಳೂ ಕೂಡ ಗುರುವಾಕ್ಯವೇ ಆಗಿದೆ. ಮಾನವಜನ್ಮದ ಸಾರ್ಥಕತೆಯಿಂದ ಹುಟ್ಟುಸಾವುಗಳಿಂದ ಮುಕ್ತರಾಗಲು ಸಾಧ್ಯವಿದೆ. ನಾನಾ ಜೀವಿಗಳಲ್ಲಿ ಜನ್ಮವೆತ್ತಿದ ನಂತರ ಈಗ ಮಾನವಜನ್ಮ ದೊರೆತಿದೆ. ಈ ಸಮಯದಲ್ಲಿ ನಾವು ಮತಿಗೆಟ್ಟು ವರ್ತಿಸಿ ಹಾನಿಮಾಡಿಕೊಂಡರೆ ಮುಂದೆ ಜೀವಾತ್ಮನು ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಗುರುತತ್ವ ಬಹಳ ಮುಖ್ಯವಾದುದು. ಗುರು ಮತ್ತು ದೇವರು ಬೇರೆಯಲ್ಲ ಒಬ್ಬನೇ ಆಗಿದ್ದಾರೆ. ಗುರು ನೀಡುವ ಬೋಧನೆ ಅಮೃತವಿದ್ದಂತೆ. ಈ ಅಮೃತವನ್ನು ಸವಿದವನು ಭವಸಾಗರವನ್ನು ದಾಟಿ ಮೋಕ್ಷ ಹೊಂದುತ್ತಾನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ