ಆ್ಯಪ್ನಗರ

ಅ.18ಕ್ಕೆ ಕಾವೇರಿ ತೀರ್ಥೋದ್ಭವ

ತಲಕಾವೇರಿಯಲ್ಲಿಈ ಬಾರಿ ಕಾವೇರಿ ತೀರ್ಥೋದ್ಭವ ಅಕ್ಟೋಬರ್‌ 18ರ ಮುಂಜಾನೆ 12.59ಕ್ಕೆ ಕರ್ಕಾಟಕ ಲಗ್ನದಲ್ಲಿನಡೆಯಲಿದೆ. ಈ ಹಿನ್ನೆಲೆಯಲ್ಲಿನಡೆಯಲಿರುವ ಜಾತ್ರೆಯ ಪ್ರಯುಕ್ತ ಸೆ.27ರಿಂದಲೇ ನಾನಾ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದೆ.

Vijaya Karnataka 20 Sep 2019, 12:32 pm
ಮಡಿಕೇರಿ: ತಲಕಾವೇರಿಯಲ್ಲಿಈ ಬಾರಿ ಕಾವೇರಿ ತೀರ್ಥೋದ್ಭವ ಅಕ್ಟೋಬರ್‌ 18ರ ಮುಂಜಾನೆ 12.59ಕ್ಕೆ ಕರ್ಕಾಟಕ ಲಗ್ನದಲ್ಲಿನಡೆಯಲಿದೆ. ಈ ಹಿನ್ನೆಲೆಯಲ್ಲಿನಡೆಯಲಿರುವ ಜಾತ್ರೆಯ ಪ್ರಯುಕ್ತ ಸೆ.27ರಿಂದಲೇ ನಾನಾ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ಸೆ.27ರಂದು ಶುಕ್ರವಾರ ಬೆಳಗ್ಗೆ 9.15ರ ತುಲಾ ಲಗ್ನದಲ್ಲಿಅಕ್ಕಿ ಹಾಕುವ ಕಾರ್ಯಕ್ರಮದೊಂದಿಗೆ ಜಾತ್ರೆಯ ಆಚರಣೆಗಳು ಶುರುವಾಗಲಿವೆ.
Vijaya Karnataka Web kaveri teertha udbhava


ಅ.10ರಂದು ಶನಿವಾರ ಬೆಳಗ್ಗೆ 8.45ರ ತುಲಾ ಲಗ್ನದಲ್ಲಿಆಜ್ಞಾ ಮುಹೂರ್ತ ನೆರವೇರಲಿದೆ. ಅ.15ರಂದು ಮಧ್ಯಾಹ್ನ 12.05ರ ಧನುರ್‌ ಲಗ್ನದಲ್ಲಿಅಕ್ಷಯ ಪಾತ್ರೆ ಇರಿಸುವ ಕಾರ್ಯಕ್ರಮ ನಡೆಯಲಿದೆ. ಅಂದೇ ಸಂಜೆ 4.31ರ ಕುಂಭ ಲಗ್ನದಲ್ಲಿಕಾಣಿಕೆ ಡಬ್ಬಿಗಳನ್ನು ಇಡಲಾಗುವುದು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆ ತಿಳಿಸಿದೆ.

ಕಾವೇರಿ ನದಿ ಉಗಮವಾಗುವ ಕಾವೇರಿ ತೀರ್ಥಕುಂಡಿಕೆಯಲ್ಲಿತೀರ್ಥೋದ್ಭವದ ವೇಳೆಯಲ್ಲಿಗಂಗೆಯೂ ಬಂದು ಜೊತೆಯಾಗುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಅ.18ರ ನಂತರದ ಒಂದು ತಿಂಗಳು ಜಾತ್ರೆ ನಡೆಯಲಿದ್ದು, ಈ ಸಂದರ್ಭದಲ್ಲಿಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ತಲಕಾವೇರಿಯಲ್ಲಿತೀರ್ಥ ಸ್ನಾನ ಮಾಡಿದರೆ ಗಂಗಾ ನದಿಯಲ್ಲಿಮಿಂದಷ್ಟೇ ಫಲ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಒಂದು ತಿಂಗಳು ಭಾಗಮಂಡಲ ಮತ್ತು ತಲಕಾವೇರಿಗೆ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಆಗಮಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ