ಆ್ಯಪ್ನಗರ

ಹೊಸನಗರದಲ್ಲಿ ಮಾ.4ರಂದು ಕೃಷ್ಣಾರ್ಪಣಂ

ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಆವರಣದಲ್ಲಿರುವ ಶ್ರೀ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ'ಕೃಷ್ಣಾರ್ಪಣಂ' ವಿಶಿಷ್ಟ ಕಾರ್ಯಕ್ರಮ ಮಾ.4ರಂದು ಆಯೋಜಿಸಲಾಗಿದೆ.

Vijaya Karnataka 31 Jan 2020, 5:06 pm
ಮಂಗಳೂರು :ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಆವರಣದಲ್ಲಿರುವ ಶ್ರೀ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ'ಕೃಷ್ಣಾರ್ಪಣಂ' ವಿಶಿಷ್ಟ ಕಾರ್ಯಕ್ರಮ ಮಾ.4ರಂದು ಆಯೋಜಿಸಲಾಗಿದೆ.
Vijaya Karnataka Web bodhi logo


ಕಾರ್ಯಕ್ರಮದ ಸಂಯೋಜಕ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಮಠದ 5 ಸಾವಿರಕ್ಕೂ ಹೆಚ್ಚು ಶಿಷ್ಯ ಭಕ್ತರು ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನಧಾರಿ ಸನ್ನಿಧಿಯಲ್ಲಿಅಂದು ಶ್ರೀ ವಿಷ್ಣುಸಹಸ್ರನಾಮ ಪಠಿಸಲಿದ್ದಾರೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿಒಂದೂವರೆ ಲಕ್ಷಕ್ಕೂ ಅಧಿಕ ವಿಷ್ಣು ಸಹಸ್ರನಾಮ ಸಮರ್ಪಿಸಲಾಗುತ್ತಿದೆ ಎಂದು ಹೇಳಿದರು.

ಗೋ ಸಂಪತ್ತಿನ ಉಳಿವಿಗಾಗಿಯೇ ಅವತಾರವೆತ್ತಿದ ಶ್ರೀಕೃಷ್ಣನಿಗೆ ಅಪೂರ್ವ ಗೋವರ್ಧನಗಿರಿ ಗೋಲೋಕದಲ್ಲಿಪ್ರತಿಷ್ಠಾಪನೆಯಾಗಿ ಎರಡು ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿಗುರು, ಗೋವು, ಗೋವರ್ಧನಧಾರಿಗೆ ಸೇವಾ ಸಮರ್ಪಣೆಯ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಈ ಅಪೂರ್ವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕೃಷ್ಣಾರ್ಪಣಂ ವಿಷ್ಣು ಸಹಸ್ರನಾಮ ಸಮರ್ಪಣೆ, ಬೆಟ್ಟವನ್ನೇ ಛತ್ರವಾಗಿಸಿ ಅಭಯ ನೀಡಿದ ಶ್ರೀಕೃಷ್ಣನಿಗೆ ಸಹಸ್ರ ಸಹಸ್ರ ಛತ್ರ ಮೆರವಣಿಗೆ, ಸಮರ್ಪಣೆ, ಜಗಜ್ಜನನಿ ಗೋಮಾತೆಗೆ ಗೋಗ್ರಾಸ ಸಮರ್ಪಣೆ ಕಾರ್ಯಕ್ರಮಗಳು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿಸಂಪನ್ನಗೊಳ್ಳಲಿವೆ ಎಂದರು.

ವಿಷ್ಣು ಸಹಸ್ರನಾಮ ಸಮರ್ಪಣೆಗೆ ಸಂಕಲ್ಪಿಸಿದವರು ತಮ್ಮ ಮನೆಗಳಲ್ಲಿಕನಿಷ್ಠ 33 ಬಾರಿ ವಿಷ್ಣು ಸಹಸ್ರನಾಮ ಪಠಿಸಿ, ಕಾರ್ಯಕ್ರಮದಂದು ಶ್ರೀ ಗೋವರ್ಧನಧಾರಿಯ ಸನ್ನಿಧಿಯಲ್ಲಿಎರಡು ಬಾರಿ ಪಾರಾಯಣ ಕೈಗೊಂಡು ಸಮರ್ಪಿಸಬಹುದು ಎಂದರು.

ಧಾರ್ಮಿಕ ಕಾರ್ಯಕ್ರಮ:ಇದೇ ಸಂದರ್ಭ ಸೋಪಾನಮಾಲೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು. ನೂತನ ಗೋಶಾಲೆ ಲೋಕಾರ್ಪಣೆ, ಗೋ ಆಸ್ಪತ್ರೆ, ಗೋ ಮ್ಯೂಸಿಯಂ ಲೋಕಾರ್ಪಣೆ, ಧರ್ಮಸಭೆ ನಡೆಯಲಿದೆ. ಗೋಬಂಧ ಮುಕ್ತಿ ಯೋಜನೆಯಡಿ ಪ್ರತಿಯೊಂದು ತಳಿಯ ಗೋವುಗಳಿಗೆ ಪ್ರತ್ಯೇಕ ಗೋಶಾಲೆ ನಿರ್ಮಿಸಲಾಗಿದ್ದು, ರಾಘವೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ