ಆ್ಯಪ್ನಗರ

ಆನೆಗುಡ್ಡೆ ದೇವಸ್ಥಾನದಿಂದ 5 ಕೋಟಿಗೂ ಹೆಚ್ಚು ದೇಣಿಗೆ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವತಿಯಿಂದ ಈಗಾಗಲೇ 33 ವರ್ಷಗಳ ಇತಿಹಾಸದಿಂದ ಪ್ರಸ್ತುತ ಇಲ್ಲಿಯವರೆಗೆ 5 ಕೋಟಿ ರೂ.ಗೂ ಹೆಚ್ಚು ದೇಣಿಗೆಯನ್ನು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷ ಣಿಕ ಕೇಂದ್ರಗಳೂ ಸೇರಿದಂತೆ ಅಶಕ್ತರಿಗೆ ವೈದ್ಯಕೀಯ ನೆರವು ನೀಡಿದೆ.

Vijaya Karnataka 11 Jan 2020, 2:43 pm
ಕುಂಭಾಸಿ: ಪುರಾಣ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವತಿಯಿಂದ ಈಗಾಗಲೇ 33 ವರ್ಷಗಳ ಇತಿಹಾಸದಿಂದ ಪ್ರಸ್ತುತ ಇಲ್ಲಿಯವರೆಗೆ 5 ಕೋಟಿ ರೂ.ಗೂ ಹೆಚ್ಚು ದೇಣಿಗೆಯನ್ನು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷ ಣಿಕ ಕೇಂದ್ರಗಳೂ ಸೇರಿದಂತೆ ಅಶಕ್ತರಿಗೆ ವೈದ್ಯಕೀಯ ನೆರವು ನೀಡಿದೆ ಎಂದು ದೇವಾಲಯದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
Vijaya Karnataka Web ಆನೆಗುಡ್ಡೆ ಶ್ರಿ ವಿನಾಯಕ ದೇವಸ್ಥಾನದಲ್ಲಿದೇವಾಲಯಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ಸಹಾಯ ಧನ ವಿತರಿಸಲಾಯಿತು.
ಆನೆಗುಡ್ಡೆ ಶ್ರಿ ವಿನಾಯಕ ದೇವಸ್ಥಾನದಲ್ಲಿದೇವಾಲಯಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ಸಹಾಯ ಧನ ವಿತರಿಸಲಾಯಿತು.


ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ2019-20ನೇ ಸಾಲಿನ ಆರ್ಥಿಕ ನೆರವು ವಿತರಿಸಿ ಮಾತನಾಡಿದರು.

ಅವರು 2019-20ನೇ ಸಾಲಿನಲ್ಲಿ7 ಲಕ್ಷ ವೈದ್ಯಕೀಯ ನೆರವು ಹಾಗೂ 10 ಲಕ್ಷ ರೂ.ಗಳನ್ನು ದೇವಸ್ಥಾನಗಳ ಜೀರ್ಣೋದ್ಧಾರಗಳಿಗೆ ದೇಣಿಗೆಯನ್ನು ನೀಡಿ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ದೇವಾಲಯವು ಸ್ಪಂದಿಸಿದೆ. ಭಕ್ತರಿಂದ ಬಂದದ್ದನ್ನು ಭಕ್ತರಿಗೆ ದೇವರ ಸಹಾಯ ರೂಪದಲ್ಲಿನೀಡುವುದರ ಮೂಲಕ ಸಾರ್ವಜನಿಕ ರಂಗದಲ್ಲಿಆರೋಗ್ಯ, ಶಿಕ್ಷ ಣ, ಧಾರ್ಮಿಕ ಕ್ಷೇತ್ರಗಳಿಗೆ ದೇವಸ್ಥಾನವು ಸ್ಪಂದಿಸುತ್ತಾ ಬರುತ್ತಿದೆ ಎಂದರು.

ಇದೇ ಸಂದರ್ಭದಲ್ಲಿರಾಜ್ಯದ ಅನೇಕ ಜಿಲ್ಲೆಗಳ ದೇವಾಲಯ, ಶಾಲಾ ಕಾಲೇಜುಗಳಿಗೆ ಆರ್ಥಿಕ ನೆರವು ವಿತರಿಸಿ ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಮ್ಯಾನೇಜರ್‌ ನಟೇಶ್‌ ಕಾರಂತ್‌ ತೆಕ್ಕಟ್ಟೆ, ಸಿಬ್ಬಂದಿ, ಆರ್ಚಕ ವೃಂದದವರೂ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ