ಆ್ಯಪ್ನಗರ

ಶ್ರೀಲಂಕಾ ಸರಕಾರದಿಂದ ರಾಮಾಯಣ ಟೂರಿಸಂ

ಪ್ರವಾಸೋದ್ಯಮ ಅಭಿವೃದ್ಧಿಯ ಜತೆಜತೆಗೆ ನೆರೆಹೊರೆ ಬಾಂಧವ್ಯವನ್ನು ಮತ್ತೂ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ, ಶ್ರೀಲಂಕಾ ಸರಕಾರ ನಿರ್ಧರಿಸಿವೆ. ಇದೀಗ ಶ್ರೀಲಂಕಾ ಸರಕಾರ ರಾಮಾಯಣ ಟೂರಿಸಂ ಪ್ಯಾಕೇಜ್‌ ಪ್ರಾರಂಭಿಸಲು ನಿರ್ಧರಿಸಿದೆ.

Vijaya Karnataka 24 Aug 2019, 3:29 pm
ಚೆನ್ನೈ : ಪ್ರವಾಸೋದ್ಯಮ ಅಭಿವೃದ್ಧಿಯ ಜತೆಜತೆಗೆ ನೆರೆಹೊರೆ ಬಾಂಧವ್ಯವನ್ನು ಮತ್ತೂ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ, ಶ್ರೀಲಂಕಾ ಸರಕಾರ ನಿರ್ಧರಿಸಿವೆ. ಈ ಸಂಬಂಧ ಕಳೆದ ಜೂನ್‌ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ರಾಷ್ಟ್ರಗಳ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶ್ರೀಲಂಕಾ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಇದೀಗ ಶ್ರೀಲಂಕಾ ಸರಕಾರ ರಾಮಾಯಣ ಟೂರಿಸಂ ಪ್ಯಾಕೇಜ್‌ ಪ್ರಾರಂಭಿಸಲು ನಿರ್ಧರಿಸಿದೆ. ಈ ಸರ್ಕೂಟ್‌ನಲ್ಲಿ ಹಿಂದೂ ಪುರಾಣ ಪ್ರಸಿದ್ಧ ಬಹುತೇಕ ದೇಗುಲ ಹಾಗೂ ಗುಹೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ಶ್ರೀಲಂಕಾದ ಪ್ರವಾಸೋದ್ಯಮ ಸಚಿವ ಜಾನ್‌ ಅಮರತುಂಗ ರಾಮಾಯಣ ಟೂರಿಸಂಗೆ ಕೊಚ್ಚಿಯಲ್ಲಿ ನಡೆದ ರೋಡ್‌ ಶೋನಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಫೆಡರೇಷನ್‌ ಆಫ್‌ ಇಂಡಿಯನ್‌ ಚೇಂಬರ್ಸ್ ಆಫ್‌ ಕಾಮರ್ಸ್‌, ಮತ್ತು ಶ್ರೀಲಂಕಾದ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಭಾಗಿಯಾಗಿದ್ದರು.
Vijaya Karnataka Web rama sita


ರಾಮಾಯಣ ಸರ್ಕೂಟ್‌ ಶ್ರೀಲಂಕಾದ ತಲೈಮನ್ನಾರಿಂದ ಪ್ರಾರಂಭವಾಗಿ ತಮಿಳುನಾಡಿನ ರಾಮೇಶ್ವರದವರೆಗೆ ಸಂಪರ್ಕ ಕಲ್ಪಿಸಲಿದೆ ಎಂದು ಶ್ರೀಲಂಕ ಪ್ರವಾಸೋಧ್ಯಮ ಸಚಿವ ಜಾನ್‌ ಅಮರತುಂಗ ಹೇಳಿದರು. ಶ್ರೀಲಂಕಾ ಸರಕಾರದ ನಿರ್ಧಾರಕ್ಕೆ ತಮಿಳುನಾಡು ಸರ್ಕಾರ ಹಸಿರು ನಿಶಾನೆ ತೋರಿದೆ. ಶ್ರೀಲಂಕಾಕ್ಕೆ ರಾಮಾಯಣ ಸರ್ಕೂಟ್‌ಗೆ ತೆರಳಲು ಬಯಸುವ ಪ್ರವಾಸಿಗರಿಗೆ ಆಗಸ್ಟ್‌ ಒಂದರಿಂದ ಅನ್ವಯವಾಗುವಂತೆ ಉಚಿತ ವೀಸಾಗಳು ದೊರೆಯಲಿವೆ. ಈ ಮಾಸದಲ್ಲಿ ಪ್ರವಾಸಿಗರಿಗೆ ಶೇಕಡ 50ರಷ್ಟು ರಿಯಾಯಿತಿ ದೊರೆಯಲಿದೆ. ಏರ್‌ಪೋರ್ಟ್‌ ಶುಲ್ಕವೂ ಕಡಿಮೆಯಾಗಿದೆ.

ರಾಮಾಯಣ ಸರ್ಕೂಟ್‌ನಲ್ಲಿ ಮಾನವಾರಿ ದೇಗುಲ, ರಾವಣ ಗುಹೆ, ಅಶೋಕ ವಾಟಿಕಾ, ಸೀತಾ ಅಮ್ಮನ್‌ ದೇಗುಲ, ದಿವುರುಂಪೋಲ, ಉಸ್ಸಂಗೋಡ, ತಿರು ಕೋನೇಶ್ವರ ದೇವಾಲಯ ಮತ್ತು ಕಾರ್ತಿರ್‌ಕಮಾಮ್‌ ದೇವಾಲಯಗಳು ಸೇರಿವೆ. ಶ್ರೀಲಂಕಾ ಸರಕಾರದ ನಿರ್ಧಾರ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲಿದೆ. ಸರಕಾದ ಈ ನಿರ್ಧಾರದಿಂದ ಪ್ರವಾಸೋದ್ಯಮ ರೆವಿನ್ಯೂ ಕಳೆದ ವರ್ಷಕ್ಕಿಂತಲೂ ದುಪ್ಪಟ್ಟಾಗುವ ನಿರೀಕ್ಷೆಯಿದೆ ಎಂದು ಸಚಿವ ಅಮರತುಂಗ ತಿಳಿಸಿದರು.

ಭಾರತ ಸರಕಾರ ಈಗಾಗಲೇ ಸ್ವದೇಶ್‌ ದರ್ಶನ್‌ ಯೋಜನೆಯ ಅಡಿಯಲ್ಲಿ ರಾಮಾಯಣ ಸಕ್ರ್ಯೂಟ್‌ ಗುರುತಿಸಿದೆ. ಅದರಲ್ಲಿಅಯೋಧ್ಯೆ, ನಂದಿಗ್ರಾಮ, ನಾಸಿಕ್‌, ನಾಗ್ಪುರ, ಹಂಪಿ ಮತ್ತು ರಾಮೇಶ್ವರ ಸೇರಿದೆ.

ರಾಮಾಯಣವನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಶ್ರೀಲಂಕ ಸರ್ಕಾರ ಎಂಒಯು ಮಾಡಿಕೊಂಡಿತ್ತು.

ಎರಡೂ ರಾಷ್ಟ್ರಗಳು ರಾಮಾಯಣ ಟೂರ್‌ ಪ್ಯಾಕೇಜ್‌ ಪ್ರಾರಂಭಿಸುವುದರೊಂದಿಗೆ ಪ್ರವಾಸೋಧ್ಯಮಕ್ಕೆ ಉತ್ತೇಜನ.

ಮೊದಲ ಎರಡು ಹಂತದ ರಾಮಾಯಣ ಟೂರಿಸಂ ಪ್ರಾಜೆಕ್ಟ್ ವೆಚ್ಚ 244.51 ಕೋಟಿ ರೂಗಳು.

ಭಾರತೀಯ ಪ್ರವಾಸೋದ್ಯಮ ಇಲಾಖೆ ನಾಲ್ಕರಿಂದ ಐದು ಡೆಸ್ಟಿನೇಷನ್‌ಗಳನ್ನು ಗುರುತಿಸಿತ್ತು. ಅದರಲ್ಲಿ ಅಶೋಕ ವಾಟಿಕ (ಸೀತೆಯಿದ್ದ ಅಶೋಕವನ), ನಾಗದೀಪ ಮತ್ತು ಡೋನಾರ (ರಾಮ ರಾವಣನ್ನು ಪ್ರಪ್ರಥಮ ಬಾರಿಗೆ ಎದುರಿಸಿದ ಜಾಗ), ಯುಡಗನ್ನವಾ (ರಾಮ ರಾವಣರ ಯುದ್ಧದ ಸ್ಥಳ) ಸೇರಿತ್ತು.

ಒಡಂಬಡಿಕೆಯ ಪ್ರಕಾರ ಭಾರತದಲ್ಲಿ ರಾಮಾಯಣ ಸರ್ಕೂಟ್‌ ಜತೆಗೆ ಬೌದ್ಧ ಸರ್ಕೂಟ್‌(ಸರಸ್ವತಿ, ಕೌಶಿನಗರ, ಬೋಧ್‌ಗಯಾ, ಸಾರನಾಥ್‌, ನಳಂದ ಮತ್ತು ನೇಪಾಳದ ಲುಂಬಿನಿ) ಪ್ರಯಾಣಕ್ಕೂ ಅವಕಾಶ.

ಶ್ರೀಲಂಕಾದ ರಾಮಾಯಣ ಸರ್ಕೂಟ್‌ ದರ್ಶನಕ್ಕೆ ಈ ತಿಂಗಳಿನಿಂದಲೇ ಉಚಿತ ವೀಸಾ. ಪ್ರವಾಸ ದರದಲ್ಲಿ ಶೇ.50ರಷ್ಟು ರಿಯಾಯಿತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ