ಆ್ಯಪ್ನಗರ

ನ.15, 16ಕ್ಕೆ ಶ್ರೀ ಬಲಮುರಿ ಗಣಪತಿ ದೇವಾಲಯದ 16ನೇ ವಾರ್ಷಿಕೋತ್ಸವ

ನ.15ರ ಸಂಜೆ 5 ಘಂಟೆಗೆ ವಿವಿಧ ಪೂಜಾ ಕೈಕಾರ್ಯಗಳು ನಡೆಯಲಿದ್ದು, ನ.16ರಂದು ಶನಿವಾರ ಬೆಳಿಗ್ಗೆ 7.30ಕ್ಕೆ ಸ್ವಾಮಿಗೆ ವಿಶೇಷ ಅಲಂಕಾರ, ಮಹಾದೀಪಾರಾಧನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ.

Vijaya Karnataka 16 Dec 2022, 12:04 pm
ಕುಂದಾಣ: ಹೋಬಳಿಯ ಕಾರಹಳ್ಳಿ ಗ್ರಾಮದಲ್ಲಿರುವ ಶ್ರೀ ಬಲಮುರಿ ಗಣಪತಿ ದೇವಾಲಯದ 16ನೇ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಬಲಮುತಿ ಗಣಪತಿ ಸೇವಾ ಸಮಿತಿ ವತಿಯಿಂದ ಶ್ರೀ ಅಮ್ಮನವರ ಸಾಮೂಹಿಕ ಶ್ರೀ ಲಲಿತಾ ಸಹಸ್ರ ನಾಮ, ಕುಂಕುಮಾರ್ಚನೆ ಕಾರ್ಯಕ್ರಮವನ್ನು ನ.15ರಂದು ಶುಕ್ರವಾರ ಸಂಜೆ ದೇವತಾ ಕಾರ್ಯಕ್ರಮಗಳನ್ನು ಬೆಂಗಳೂರು ಆರ್‌.ಆರ್‌.ನಗರ ಶ್ರೀ ದೇವಿ ಕರುಮಾರಿಯಮ್ಮ ದೇವಾಲಯದ ಮಧುಕರ ಗುರೂಜೀ ಹಾಗೂ ಕಾರಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ಕೆ.ಎಸ್‌.ಚಂದ್ರಶೇಖರ ದೀಕ್ಷಿತ್‌ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
Vijaya Karnataka Web Eco friendly Ganesha idol.
ಸಾಂದರ್ಭಿಕ ಚಿತ್ರ

ನ.15ರ ಸಂಜೆ 5 ಘಂಟೆಗೆ ವಿವಿಧ ಪೂಜಾ ಕೈಕಾರ್ಯಗಳು ನಡೆಯಲಿದ್ದು, ನ.16ರಂದು ಶನಿವಾರ ಬೆಳಿಗ್ಗೆ 7.30ಕ್ಕೆ ಸ್ವಾಮಿಗೆ ವಿಶೇಷ ಅಲಂಕಾರ, ಮಹಾದೀಪಾರಾಧನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರಕ್ಷ ಕ ಅಧೀಕ್ಷ ಕ ರವಿ.ಡಿ.ಚನ್ನಣ್ಣನವರ್‌ ಪಾಲ್ಗೋಳ್ಳಲಿದ್ದಾರೆ ಹಾಗೂ ಅಧ್ಯಕ್ಷ ತೆಯನ್ನು ಬಲಮುರಿ ಗಣಪತಿ ಸೇವಾ ಸಮಿತಿ ಹೆಚ್‌.ಡಿ.ಶಿವಶಂಕರ್‌ ನೆರವೇರಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ಅರ್ಚಕ ವೇ.ಬ್ರ.ಸುಬ್ರಮಣ್ಯ ದೀಕ್ಷಿತ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ