ಆ್ಯಪ್ನಗರ

mantralaya: ತುಂಗಾ ತೀರ ವಿಹಾರಿ

Vijaya Karnataka 14 Dec 2022, 11:49 am
ಆಂಧ್ರಪ್ರದೇಶ ರಾಜ್ಯದ ಕರ್ನೂಲ್‌ ಜಿಲ್ಲೆಯಲ್ಲಿರುವ ಮಂತ್ರಾಲಯ ರಾಯರು ನೆಲೆಸಿಹ ಪುಣ್ಯಕ್ಷೇತ್ರ. ಕರ್ನಾಟಕದ ರಾಯಚೂರಿನಿಂದ ಕೇವಲ 42 ಕಿ.ಮೀ. ದೂರದಲ್ಲಿದೆ. ತಮ್ಮ ಭಕ್ತರಿಗೆ ನೀಡಿರುವ ಮಾತಿನಂತೆ ಇಂದಿಗೂ ಸಮಾಧಿಧಿ ಸ್ಥಿತಿಯಲ್ಲಿ ಜೀವಂತವಾಗಿದ್ದು ಅವರನ್ನು ನಂಬಿ ಬರುವ ಸಕಲ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಿದ್ದಾರೆನ್ನಲಾಗಿದೆ. ಹೀಗಾಗಿ ಅವರು ನೆಲೆಸಿರುವ ಬೃಂದಾವನ ಅಪಾರ ಮಹಿಮೆಯುಳ್ಳ ಸಾನ್ನಿಧ್ಯ. ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರು ಮೊದಲು ತುಂಗಭದ್ರಾ ನದಿಯಲ್ಲಿ ಮಿಂದು ದೇವತೆ ಮಂಚಾಲಮ್ಮನ ದರ್ಶನ ಮಾಡಿ, ನಂತರ ಶ್ರೀ ಗುರುರಾಯರ ದರ್ಶನ ಮಾಡುವುದು ವಾಡಿಕೆ.
Vijaya Karnataka Web Mantralaya
ಮಂತ್ರಾಲಯ

* ಬಿಚ್ಚಾಲೆ : ಮಂತ್ರಾಲಯದಿಂದ 22 ಕಿಮೀ ದೂರದಲ್ಲಿದೆ. ರಾಘವೇಂದ್ರ ಸ್ವಾಮಿಗಳ ಪ್ರಿಯ ಶಿಷ್ಯ ಅಪ್ಪಣಾಚಾರ್ಯ ನೆಲೆಸಿದ ತಾಣವಿದು. ರಾಯರು ವೃಂದಾವನ ಪ್ರವೇಶಿಸುವುದಕ್ಕೂ ಮೊದಲು ಇದೇ ಸ್ಥಳದಲ್ಲಿ ನೆಲೆಸಿದ್ದರು.
*ಪಂಚಮುಖಿ : ಶ್ರೀ ಗುರುರಾಘವೇಂದೆ ಸ್ವಾಮಿಗಳಿಗೆ ಆಂಜನೇಯ ಸ್ವಾಮಿ ಪಂಚಮುಖಿ ರೂಪದಲ್ಲಿ ಗೋಚರಿಸಿದ ಸ್ಥಳ. ತಮಗೆ ಕಂಡ ರೂಪವನ್ನೇ ಗುರು ರಾಯರು ತಾವು ಧ್ಯಾನ ಮಾಡುತ್ತಿದ್ದ ಬಂಡೆಯ ಮೇಲೆ ಚಿತ್ರಿಸಿದರು. ಮಂತ್ರಾಲಯದಿಂದ ಇಲ್ಲಿಗ 30 ನಿಮಿಷ ದಾರಿ.
* ಕಲ್ಲೂರು ಮಹಾಲಕ್ಷ್ಮೀ : ವೆಂಕಟೇಶ್ವರನ ಸಮೇತನಾಗಿ ಲಕ್ಷ್ಮೀ ನೆಲೆಸಿರುವ ಅಪರೂಪದ ಸ್ಥಳ. ಈ ಸ್ಥಳದಲ್ಲಿ ಮಹಾಲಕ್ಷ್ಮೀ ಸಾಣೆ ಕಲ್ಲಿನಲ್ಲಿ ಗೋಚರಳಾಗಿದ್ದಾಳೆ. ಇದೊಂದು ಜಾಗೃತ ಸ್ಥಳ ಆಗಿದೆ.
* ಮಾನವಿ : ಇದು ಜಗನ್ನಾಥದಾಸರ ಹುಟ್ಟೂರು. ಅವರ ಪೂರ್ವನಾಮ ಶ್ರೀನಿವಾಸಾಚಾರ್ಯ. ವಿಜಯದಾಸರಿಂದ ಪ್ರೇರಣೆಗೊಂಡು ಹರಿದಾಸ ಪರಂಪರೆಯಲ್ಲಿ ಶ್ರೇಷ್ಠರು. ರಾಯಚೂರಿನಿಂದ 50 ಕಿ.ಮೀ. ದೂರದಲ್ಲಿದೆ. ಮಂತ್ರಾಲಯದಿಂದ 20ಕಿ.ಮೀ. ದೂರದಲ್ಲಿದ್ದು ಸಾಕಷ್ಟು ಬಸ್‌ ಸೌಲಭ್ಯವಿದೆ.

ದಕ್ಷಿಣ ಮಂತ್ರಾಲಯ, ಪಪ್ಪಾರಪಟ್ಟಿ
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಪ್ಪಾರಪಟ್ಟಿಯಲ್ಲಿರುವ ಶ್ರೀಗುರು ರಾಘವೇಂದ್ರ ಸ್ವಾಮಿಯ ಮಠವನ್ನು ದಕ್ಷಿಣ ಮಂತ್ರಾಲಯ ಎಂದು ಕರೆಯಲಾಗುತ್ತದೆ. ಇಲ್ಲಿನ ಸ್ಥಳ ಪುರಾಣದ ಪ್ರಕಾರ, ಹಿಂದೆ ದಂಪತಿಯೊಬ್ಬರು ಸತತವಾಗಿ ಒಬ್ಬರಾದ ಮೇಲೊಬ್ಬರಂತೆ ಮಕ್ಕಳನ್ನು ಕಳೆದುಕೊಂಡು ಅಪಾರವಾದ ದುಃಖದಲ್ಲಿದ್ದರು. ರಾಯರ ಭಕ್ತರಾಗಿದ್ದ ಇವರಿಗೆ ಮತ್ತೆ ಒಂದು ಗಂಡು ಸಂತಾನವಾದರೂ, ಅದೂ ಸಹ ಕಾಯಿಲೆಯಿಂದ ಪ್ರಾಣಾಪಾಯದಲ್ಲಿತ್ತು. ಇದರಿಂದ ದುಖಿತರಾಗಿದ್ದ ಆ ದಂಪತಿಗಳು ಮಗು ಸಮೇತರಾಗಿ ಮಂತ್ರಾಲಯಕ್ಕೆ ತೆರಳಿದ್ದರು. ಹೀಗಿರುವಾಗ ಪಪ್ಪಾರಪಟ್ಟಿಯಲ್ಲಿದ್ದ ಗಂಡನ ಸಹೋದರನಿಗೆ ರಾತ್ರಿಯಲ್ಲಿ ಕನಸೊಂದು ಬಿದ್ದು ರಾಯರು ತಾವು ಅಲ್ಲಿಗೆ ಆಗಮಿಸುವುದಾಗಿ ಹೇಳಿದರಂತೆ. ಇದೇ ಸಂದರ್ಭದಲ್ಲಿ ಇತ್ತ ಹೆಂಡತಿಗೂ ಸಹ ಕನಸಿನಲ್ಲಿ ರಾಯರು ಮಗುವಿಗೆ ಆಶೀರ್ವದಿಸುತ್ತಿರುವ ರೀತಿಯಲ್ಲಿ ಕನಸು ಬಿದ್ದಿತ್ತು. ಮರುದಿನ ಪವಾಡವೆಂಬಂತೆ ಆ ಮಗು ಸಂಪೂರ್ಣವಾಗಿ ಗುಣಮುಖವಾಗಿತ್ತು. ಇದರಿಂದ ಸಂತಸಗೊಂಡು ಆ ದಂಪತಿ ಹಾಗೂ ಗಂಡನ ಸಹೋದರ ಒಟ್ಟಾಗಿ ಇಲ್ಲಿ ರಾಯರ ಮಠವನ್ನು ನಿರ್ಮಿಸಿದರು. ಪಪ್ಪಾರಪಟ್ಟಿಯ ಆ ಮಠ ಇಂದು ರಾಯರು ನೆಲೆಸಿ ಹರಸುತ್ತಿರುವ ದಕ್ಷಿಣ ಮಂತ್ರಾಲಯ ಎಂದೇ ಹೆಸರುವಾಸಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ