ಆ್ಯಪ್ನಗರ

ದೇಶದಲ್ಲಿ 5ಜಿ ನೆಟ್‌ವರ್ಕ್‌ ಅಭಿವೃದ್ಧಿಗೆ ಏರ್‌ಟೆಲ್‌, ಕ್ವಾಲ್ಕಂ ಸಹಯೋಗ

ದೇಶದ ಬಹುದೊಡ್ಡ ದೂರಸಂಪರ್ಕ ಸಂಸ್ಥೆಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್‌ ತನ್ನ 5ಜಿ ನೆಟ್ವರ್ಕ್‌ ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿದೆ. ಇದಕ್ಕಾಗಿ ಅಮೆರಿಕದ ಚಿಪ್‌ ತಯಾರಿಕಾ ಕಂಪನಿ ಕ್ವಾಲ್ಕಂ ಜತೆಗೆ ಒಪ್ಪಂದ ಮಾಡಿಕೊಂಡಿದೆ.

Vijaya Karnataka Web 23 Feb 2021, 8:55 pm
ಹೊಸದಿಲ್ಲಿ: ದೇಶದ ಬಹುದೊಡ್ಡ ದೂರಸಂಪರ್ಕ ಸಂಸ್ಥೆಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್‌ ತನ್ನ 5ಜಿ ನೆಟ್ವರ್ಕ್‌ ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿದೆ. ಇದಕ್ಕಾಗಿ ಅಮೆರಿಕದ ಚಿಪ್‌ ತಯಾರಿಕಾ ಕಂಪನಿ ಕ್ವಾಲ್ಕಂ ಜತೆಗೆ ಏರ್‌ಟೆಲ್‌ ಒಪ್ಪಂದ ಮಾಡಿಕೊಂಡಿದೆ.
Vijaya Karnataka Web Bharti Airtel
(File photo)


ದೇಶದಲ್ಲಿ 5ಜಿ ತಂತ್ರಜ್ಞಾನ ಅಭಿವೃದ್ಧಿಗೆ ವೇಗ ನೀಡಲು ಭಾರ್ತಿ ಏರ್‌ಟೆಲ್‌ ಮತ್ತು ಅಮೆರಿಕದ ಕ್ವಾಲ್ಕಂ ಕಂಪನಿಗಳು ಜತೆಯಾಗಿ ಕಾರ್ಯನಿರ್ವಹಿಸಲಿವೆ.

ಮೊಬೈಲ್‌ಗೆ ಬಳಕೆಗೆ ಆದ್ಯತೆ ನೀಡುತ್ತಿರುವ ಇಂದಿನ ಸಮಾಜದಲ್ಲಿ ಎಲ್ಲೆಡೆಯೂ ಸಂಪರ್ಕ ಕಲ್ಪಿಸುವುದು ಸವಾಲಾಗಿದೆ. ಹೀಗಾಗಿ ದೇಶಾದ್ಯಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಅತ್ಯಂತ ವೇಗವಾಗಿ ಒದಗಿಸಲು ಈ ಸಹಯೋಗವು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಿಸೆಂಬರ್‌ನಲ್ಲೂ ಜಿಯೋ ಹಿಂದಿಕ್ಕಿದ ಏರ್‌ಟೆಲ್‌, ಸಕ್ರಿಯ ಬಳಕೆದಾರರಲ್ಲಿ ಈಗ ದೇಶಕ್ಕೇ ನಂ. 1

ಏರ್‌ಟೆಲ್‌ನ 5ಜಿ ಸಂಪರ್ಕವು ಗಿಗಾಬೈಟ್‌ ವೇಗದ ಇಂಟರ್‌ನೆಟ್‌ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಿದೆ. 'ಭಾರತದಲ್ಲಿ ವಿಶ್ವ ದರ್ಜೆಯ 5ಜಿ ಸೌಲಭ್ಯವನ್ನು ಜಾರಿಗೊಳಿಸುವ ನಮ್ಮ ಪ್ರಯಾಣದಲ್ಲಿ ಕ್ವಾಲ್ಕಂ ಟೆಕ್ನಾಲಜೀಸ್ ಪ್ರಮುಖ ತಂತ್ರಜ್ಞಾನ ಪೂರೈಕೆದಾರರಾಗಿರುವುದಕ್ಕೆ ನಾವು ಸಂತೋಷಪಡುತ್ತೇವೆ' ಎಂದು ಭಾರ್ತಿ ಏರ್‌ಟೆಲ್‌ನ ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ) ರಣ್‌ದೀಪ್‌ ಸೇಖನ್‌ ಹೇಳಿದ್ದಾರೆ.

'ಈ ಸಹಯೋಗವು 5ಜಿ ನೆಟ್‌ವರ್ಕ್ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ವೃದ್ಧಿಸುವ ಏರ್‌ಟೆಲ್‌ನ ಯೋಜನೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ' ಎಂದು ಕ್ವಾಲ್ಕಂ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಉಪಾಧ್ಯಕ್ಷ ರಾಜನ್‌ ವಗಾಡಿಯಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ