ಆ್ಯಪ್ನಗರ

ಬಜೆಟ್‌ 2020: ನಗುಮುಖದೊಂದಿಗೆ ಸಂಸತ್ ಪ್ರವೇಶಿಸಿದ ನಿರ್ಮಲಾ ಸೀತಾರಾಮನ್

ಬಹುನಿರೀಕ್ಷಿತ ಕೇಂದ್ರ ಬಜೆಟ್‌ 2020 ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆಗೆ ಸಂಸತ್‌ಗೆ ಆಗಮಿಸಿದ್ದಾರೆ. ಬಜೆಟ್‌ ಮಂಡನೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.

Vijaya Karnataka Web 1 Feb 2020, 10:31 am
ಹೊಸದಿಲ್ಲಿ: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ಬಜೆಟ್ ಮಂಡನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಒಪ್ಪಿಗೆಯನ್ನು ಪಡೆದ ಬಳಿಕ ಸಂಸತ್‌ಗೆ ಆಗಮಿಸಿದರು.
Vijaya Karnataka Web finance minister nirmala sitharaman and mos finance anurag thakur arrive at the parliament to attend the cabinet meeting
ಬಜೆಟ್‌ 2020: ನಗುಮುಖದೊಂದಿಗೆ ಸಂಸತ್ ಪ್ರವೇಶಿಸಿದ ನಿರ್ಮಲಾ ಸೀತಾರಾಮನ್


ಹಳದಿ ಬಣ್ಣದ ಸೀರೆ ತೊಟ್ಟಿರುವ ವಿತ್ತ ಸಚಿವೆ ಕೆಂಪು ವಸ್ತ್ರದಲ್ಲಿ ಸುತ್ತಿರುವ ಬಜೆಟ್‌ ದಾಖಲೆ (ಬಹಿ ಖಾತಾ) ಕೈಯಲ್ಲಿ ಹಿಡಿದುಕೊಂಡು ನಗುಮುಖದೊಂದಿಗೆ ಸಂಸತ್ತನ್ನು ಪ್ರವೇಶಿಸಿದರು.


Union Budget: ನೂರಾರು ನಿರೀಕ್ಷೆ, ಸೊರಗಿದ ಆರ್ಥಿಕತೆಗೆ ಸಿಗುವುದೇ ಟಾನಿಕ್‌?

ನಿರ್ಮಲಾ ಸೀತಾರಾಮನ್ ಜೊತೆಗೆ ಕೇಂದ್ರ ಸಚಿವ ಅನುರಾಜ್ ಠಾಕೂರ್‌ ಕೂಡ ಉಪಸ್ಥಿತರಿದ್ದರು. 2020 ಬಜೆಟ್‌ ಮಂಡನೆಗೂ ಮುನ್ನ ಕೇಂದ್ರ ಕ್ಯಾಬಿನೆಟ್‌ ಸಭೆ ನಡೆಯಲಿದೆ. ಸಭೆಯ ಬಳಿಕ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ವ್ಯಾಪಕ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.

ದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿನ್ನಡೆಯನ್ನು ತಡೆಯಯವ ನಿಟ್ಟಿನಲ್ಲಿ ಕೇಂದ್ರದ ಬಜೆಟ್‌ನಲ್ಲಿ ಮಹತ್ವದ ಘೋಷಣೆಗಳು ಇರುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ