ಆ್ಯಪ್ನಗರ

ಮಗಳ ಬಜೆಟ್ ಸಾಧನೆ ಕಣ್ತುಂಬಿಕೊಳ್ಳಲು ಸಂಸತ್ತಿಗೆ ಬಂದ ನಿರ್ಮಲಾ ಸೀತಾರಾಮನ್ ತಂದೆ-ತಾಯಿ

ಪೂರ್ಣಪ್ರಮಾಣದ ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳಾ ವಿತ್ತ ಸಚಿವೆ ಎಂಬ ಹೆಗ್ಗಳಿಕೆಗೆ ಭಾಜನರಾಗಿರುವ ನಿರ್ಮಲಾ ಸೀತಾರಾಮನ್ ಅವರ ಸಾಧನೆಯನ್ನು ಕಣ್ತುಂಬಿಕೊಳ್ಳಲು, ಅವರ ಹೆತ್ತವರಾದ ಸಾವಿತ್ರಿ ಹಾಗೂ ನಾರಾಯಣನ್ ಸೀತಾರಾಮನ್ ಅವರು ಸಂಸತ್ತಿಗೆ ಆಗಮಿಸಿದ್ದಾರೆ.

Vijaya Karnataka Web 5 Jul 2019, 11:45 am
ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರ ಹಿಂದಿನಂತೆಯೇ ಹೊಸ ಸರಕಾರದಲ್ಲೂ ಮಹಿಳೆಯರಿಗೆ ಉನ್ನತ ಸ್ಥಾನ ಮಾನ ನೀಡಿದೆ. ಕಳೆದ ಬಾರಿ ರಕ್ಷಣಾ ಸಚಿವರಾಗಿ ಹೆಸರು ಮಾಡಿದ್ದ ನಿರ್ಮಲಾ ಸೀತಾರಾಮನ್, ಈ ಬಾರಿ ದೇಶದ ಆರ್ಥಿಕತೆಯ ರೂವಾರಿಯಾಗಿ, ಹಣಕಾಸು ಸಚಿವಾಲಯದ ಉಸ್ತುವಾರಿ ಪಡೆದಿದ್ದಾರೆ.
Vijaya Karnataka Web Nirmala Parents


ಬಜೆಟ್ 2019 ಮುಖ್ಯಾಂಶಗಳು ಇಲ್ಲಿವೆ

ಈ ರೀತಿಯಾಗಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಕಾರಣವಾಗಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವುದನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಅವರ ತಂದೆ ತಾಯಿ ಕೂಡ ಸಂಸತ್ತಿಗೆ ಆಗಮಿಸಿ ಗಮನ ಸೆಳೆದರು.


ತಮ್ಮ ಮಗಳು ಕೇಂದ್ರದ ಹಣಕಾಸು ಸಚಿವೆಯಾಗಿ ದೇಶದ ಆರ್ಥಿಕತೆಗೆ ಹೊಸ ಹೊಳಪು ನೀಡುವುದನ್ನು ನೋಡಲೆಂದೇ ಸಾವಿತ್ರಿ ಹಾಗೂ ನಾರಾಯಣನ್ ಸೀತಾರಾಮನ್ ಅವರು ತಮಿಳುನಾಡಿನಿಂದ ಹೊಸದಿಲ್ಲಿಗೆ ಆಗಮಿಸಿದ್ದಾರೆ. ಇದು ನಿರ್ಮಲಾ ಅವರಿಗಂತೂ ಅವಿಸ್ಮರಣೀಯ ಸಂಗತಿಯೇ ಸರಿ. ದೇಶದ ಆರ್ಥಿಕತೆಯನ್ನು ಏರುಗತಿಯಲ್ಲಿ ಸಾಗುವಂತೆ ಮಾಡಲಿರುವ ಚೊಚ್ಚಲ ಬಜೆಟನ್ನು ತಂದೆ ತಾಯಿಯ ಎದುರಲ್ಲೇ ಮಂಡಿಸುವುದು ನಿರ್ಮಲಾ ಅವರಿಗೂ ಹೆಮ್ಮೆಯ ಸಂಗತಿ.

ಬಜೆಟ್ 2019 ಲೈವ್ ಅಪ್‌ಡೇಟ್‌ಗಳು ಇಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ