ಆ್ಯಪ್ನಗರ

76 ಲಕ್ಷ ಭಾರತೀಯರಿಗೆ ಮಾತ್ರ 5 ಲಕ್ಷಕ್ಕೂ ಹೆಚ್ಚು ಆದಾಯ!

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಮಂಡಿಸಿರುವ 2017-18ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ತೆರಿಗೆಗೆ ಸಂಬಂಧಿಸಿದ ಕೆಲವು ಮಹತ್ವಪೂರ್ಣ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇದರಂತೆ ಭಾರತದ ನೇರ ತೆರಿಗೆ ಸಂಗ್ರಹವು ಆದಾಯ ಹಾಗೂ ಖರ್ಚಿನ ಮಾದರಿಗೆ ಹೊಂದಾಣಿಕೆಯಾಗುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 1 Feb 2017, 3:58 pm
ಹೊಸದಿಲ್ಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಮಂಡಿಸಿರುವ 2017-18ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ತೆರಿಗೆಗೆ ಸಂಬಂಧಿಸಿದ ಕೆಲವು ಮಹತ್ವಪೂರ್ಣ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇದರಂತೆ ಭಾರತದ ನೇರ ತೆರಿಗೆ ಸಂಗ್ರಹವು ಆದಾಯ ಹಾಗೂ ಖರ್ಚಿನ ಮಾದರಿಗೆ ಹೊಂದಾಣಿಕೆಯಾಗುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ.
Vijaya Karnataka Web only 76 lakh indians showed income of over rs 5 lakh
76 ಲಕ್ಷ ಭಾರತೀಯರಿಗೆ ಮಾತ್ರ 5 ಲಕ್ಷಕ್ಕೂ ಹೆಚ್ಚು ಆದಾಯ!


2015-16ನೇ ಸಾಲಿನಲ್ಲಿ 3.7 ಕೋಟಿ ವ್ಯಕ್ತಿಗಳು ಆದಾಯ ತೆರಿಗೆ ಪಾವತಿ ವಿವರ ಸಲ್ಲಿಸಿದ್ದಾರೆ. ಈ ಪೈಕಿ 99 ಲಕ್ಷದಷ್ಟು ಮಂದಿ ವಾರ್ಷಿಕವಾಗಿ 2.5 ಲಕ್ಷಕ್ಕೂ ಕಡಿಮೆ ಆದಾಯವನ್ನು ತೋರಿಸಿದ್ದಾರೆ. ಇನ್ನುಳಿದಂತೆ 1.95 ಕೋಟಿ ಮಂದಿ 2.5 ಲಕ್ಷ ಹಾಗೂ 5 ಲಕ್ಷ ನಡುವೆ, 52 ಲಕ್ಷ ಮಂದಿ 5 ಲಕ್ಷದಿಂದ 10 ಲಕ್ಷದ ನಡುವೆ ಹಾಗೂ 24 ಲಕ್ಷದಷ್ಟು ಮಂದಿ 10 ಲಕ್ಷಕ್ಕೂ ಹೆಚ್ಚು ಆದಾಯವನ್ನು ತೋರಿಸಿದ್ದಾರೆ.

76 ಲಕ್ಷದಷ್ಟು ಮಂದಿ ಐದು ಲಕ್ಷಕ್ಕೂ ಹೆಚ್ಚು ವಾರ್ಷಿಕ ಆದಾಯವನ್ನು ತೋರಿಸಿದ್ದಾರೆ. ಈ ಪೈಕಿ 56 ಲಕ್ಷದಷ್ಟು ಮಂದಿ ವೇತನದಾರರ ವಿಭಾಗಕ್ಕೆ ಸೇರಿದ್ದವರಾಗಿದ್ದಾರೆ.

ಕೇವಲ 1.72 ಲಕ್ಷದಷ್ಟು ಮಂದಿ ಮಾತ್ರ 50 ಲಕ್ಷಕ್ಕೂ ಹೆಚ್ಚು ಆದಾಯ ತೋರಿಸಿದ್ದಾರೆ. ಆದರೆ ಇದು ಆದಾಯ ಹಾಗೂ ಖರ್ಚಿನ ಮಾದರಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ವಿತ್ತ ಸಚಿವರು ತಿಳಿಸಿದ್ದಾರೆ.

ಕಳೆದೈದು ವರ್ಷದಲ್ಲಿ 1.25 ಕೋಟಿ ಕಾರುಗಳು ಮಾರಾಟವಾಗಿದೆ. ಹಾಗೆಯೇ 2015ರಲ್ಲಿ ಎರಡು ಕೋಟಿಯಷ್ಟು ಜನವರು ವಿದೇಶಕ್ಕೆ ಪ್ರಯಾಣಿಸಿದ್ದಾರೆ ಎಂದು ಜೇಟ್ಲಿ ವಿವರಿಸಿದ್ದಾರೆ.

ದೇಶದಲ್ಲಿ 4.2 ಕೋಟಿ ಮಂದಿ ಸಂಘಟಿತ ವಲಯದ ಉದ್ಯೋಗದಲ್ಲಿದ್ದು, ಈ ಪೈಕಿ 1.74 ಕೋಟಿ ಮಂದಿ ಆದಾಯ ತೆರಿಗೆ ವಿವರ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ