ಆ್ಯಪ್ನಗರ

ದೇಶದೆಲ್ಲೆಡೆ ವಾರಂತ್ಯದಲ್ಲಿ ಚಿನ್ನ ಬೆಳ್ಳಿಯ ದರ ಎಷ್ಟಿದೆ? ಇಲ್ಲಿದೆ ಪೂರ್ಣ ವಿವರ

ಕೆಲ ದಿನಗಳಿಂದ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಶನಿವಾರ ತುಸು ಏರಿಕೆ ಕಂಡು ಬಂದಿದೆ. ಆಭರಣಪ್ರಿಯರಲ್ಲಿ ಸಂತಸ ಮೂಡಿಸಿದೆ. ದೇಶಾದ್ಯಂತ ಬೆಳ್ಳಿ ಬೆಲೆಯಲ್ಲಿ ಏಕರೂಪವಿದ್ದು ವಾರಂತ್ಯ ಬೆಲೆಯಲ್ಲಿ ತುಸು ಏರಿಕೆ ಕಂಡರೂ ಆಭರಣದಂಗಡಿಯಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಿದೆ.

Vijaya Karnataka Web 31 Oct 2020, 11:02 am
ಬೆಂಗಳೂರು: ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರೋದು ಆಭರಣಪ್ರಿಯರಲ್ಲಿ ಸಂತಸ ಮೂಡಿಸಿದೆ. ಬೆಲೆ ಇಳಿಕೆ ಆಗ್ತಿದ್ದಂತೆ ಆಭರಣದಂಗಡಿಯಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಚಿನ್ನಾಭರಣ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ನಿನ್ನೆಗೆ ಹೋಲಿಸಿದರೆ ಚಿನ್ನ ಬೆಳ್ಳಿಯ ದರದಲ್ಲಿ ವಾರಂತ್ಯವಾದ ಶನಿವಾರ ತುಸು ಏರಿಕೆ ಕಂಡಿದೆ.
Vijaya Karnataka Web gold rate


ದೈನಂದಿನ ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ಇಂದು (ಶನಿವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಆಭರಣ ಚಿನ್ನದ (22 ಕ್ಯಾರಟ್‌) ಬೆಲೆ ₹47,350 ರೂಪಾಯಿ ನಿಗದಿಯಾಗಿ 10 ರೂಪಾಯಿ ಏರಿಕೆಯಾಗಿದೆ. ಕಳೆದ ಮಂಗಳವಾರ ₹47,870 ರೂ. ಇತ್ತು. ಕಳೆದ ಮೂರು ದಿನದಲ್ಲಿ ₹530 ರೂಪಾಯಿ ಕಡಿಮೆಯಾಗಿದೆ. 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆಯಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ ಇಂದು ₹10 ರೂಪಾಯಿ ಏರಿಕೆಯಾಗಿದ್ದು, ₹51,650 ರೂಪಾಯಿಗೆ ನಿಗದಿಯಾಗಿದೆ.

ಆರೇ ತಿಂಗಳಲ್ಲಿ ಭಾರತದ ವಿತ್ತೀಯ ಕೊರತೆ ಬರೋಬ್ಬರಿ 9.1 ಲಕ್ಷ ಕೋಟಿ ರೂ.ಗೆ ಏರಿಕೆ!

ಬೆಳ್ಳಿ ದರ:
ಬೆಳ್ಳಿ ಬೆಲೆಯಲ್ಲಿ ಶನಿವಾರ ಬರೋಬ್ಬರಿ ₹800 ಏರಿಕೆಯಾಗಿದೆ. ಶುಕ್ರವಾರ ಒಂದು ಕೆ.ಜಿ. ಬೆಳ್ಳಿ ದರ ₹60,200 ರೂಪಾಯಿ ನಿಗದಿಯಾಗಿತ್ತು. ಆದರೆ ಇಂದು ₹61,000 ರೂಪಾಯಿಗೆ ಏರಿಕೆಯಾಗಿದೆ. ದೇಶಾದ್ಯಂತ ಬೆಳ್ಳಿ ಬೆಲೆಯಲ್ಲಿ ಏಕರೂಪವಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡರೂ ಬೆಳ್ಳಿ ಖರೀದಿಸುವವರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ.

ಕೊರೊನಾ ನಡುವೆಯೂ ಕೆನರಾ ಬ್ಯಾಂಕ್‌ಗೆ 444 ಕೋಟಿ ರೂ. ನಿವ್ವಳ ಲಾಭ

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:

ಬೆಂಗಳೂರು: ₹47,350 (22 ಕ್ಯಾರಟ್‌), ₹51,650 (24 ಕ್ಯಾರಟ್‌)

ಮುಂಬಯಿ: ₹49,900 (22 ಕ್ಯಾರಟ್‌), ₹50,900 (24 ಕ್ಯಾರಟ್‌)

ಚೆನ್ನೈ: ₹47,350 (22 ಕ್ಯಾರಟ್‌), ₹51,650 (24 ಕ್ಯಾರಟ್‌)

ದಿಲ್ಲಿ: ₹49,010 (22 ಕ್ಯಾರಟ್‌), ₹52,460 (24 ಕ್ಯಾರಟ್‌)

ಕೋಲ್ಕತ: ₹48,910 (22 ಕ್ಯಾರಟ್‌), ₹52,520 (24 ಕ್ಯಾರಟ್‌)

ಹೈದರಾಬಾದ್‌: ₹47,350 (22 ಕ್ಯಾರಟ್‌). ₹51,650 (24 ಕ್ಯಾರಟ್‌)

ಮಂಗಳೂರು: ₹47,350 (22 ಕ್ಯಾರಟ್‌) ₹51,650 (24 ಕ್ಯಾರಟ್‌)

ಮೈಸೂರು: ₹47,350 (22 ಕ್ಯಾರಟ್‌) ₹51,650 (24 ಕ್ಯಾರಟ್‌)

ಖರೀದಿ ಹುರುಪು ಹೆಚ್ಚಿಸಿದ ಹಬ್ಬದ ಸಂಭ್ರಮ, ಚೇತರಿಕೆ ಹಾದಿಯಲ್ಲಿ ಆರ್ಥಿಕತೆ

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದರೆ, ಬೆಳ್ಳಿ ದರದಲ್ಲಿ ದೇಶಾದ್ಯಂತ ಏಕರೂಪ ಬೆಲೆಯಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ