ಹೊಸದಿಲ್ಲಿ: ಕ್ರಿಪ್ಟೋಕರೆನ್ಸಿಗಳ ಬೆಲೆ ಏರಿಕೆ ಮಂದುವರಿದಿದೆ. ಅಕ್ಟೋಬರ್ 10 ರಂದು ಬಹುತೇಕ ಕ್ರಿಪ್ಟೋ ನಾಣ್ಯಗಳು ಮೌಲ್ಯ ಹೆಚ್ಚಿಸಿಕೊಂಡಿವೆ. ಕಳೆದ 24 ಗಂಟೆಗಳಲ್ಲಿ ಕ್ರಿಪ್ಟೋ ಮಾರುಕಟ್ಟೆಯ ಒಟ್ಟು ಗಾತ್ರದಲ್ಲಿ $ 96.99 ಬಿಲಿಯನ್ ಹೆಚ್ಚಳ ಕಂಡಿದೆ. ಕ್ರಿಪ್ಟೋ ನಾಣ್ಯಗಳಲ್ಲೇ ಅತಿ ದುಬಾರಿ ಹಾಗೂ ಜನಪ್ರಿಯವಾದ ಬಿಟ್ಕಾಯಿನ್ ಮೌಲ್ಯ ಪ್ರಸ್ತುತ 54,475.28 ಡಾಲರ್ಗೆ ಏರಿಕೆಯಾಗಿದೆ. ಕ್ರಿಪ್ಟೋ ಮಾರುಕಟ್ಟೆಯಲ್ಲಿ ಬಿಟ್ಕಾಯಿನ್ ಶೇ.44.71ರಷ್ಟು ಪಾಲು ಹೊಂದಿದೆ. ಅಲ್ಲದೆ ಕಳೆದ ಒಂದು ದಿನದಲ್ಲಿ ಶೇ.0.15ರಷ್ಟು ಏರಿಕೆ ಕಂಡಿದೆ.
ಟಾಪ್ 10 ಕ್ರಿಪ್ಟೋ ಕರೆನ್ಸಿಗಳ ಪೈಕಿ 7 ನಾಣ್ಯಗಳು ಅ.10ರಂದು ಮೌಲ್ಯ ಹೆಚ್ಚಿಸಿಕೊಂಡಿವೆ. ಇಥೆರಿಯಂ, ಬಿನಾನ್ಸ್ ಕಾಯಿನ್ ಮತ್ತು ಸೊಲಾನೋಗಳ ಮೌಲ್ಯದಲ್ಲಿ ಇಳಿಕೆಯಾಗಿದೆ. ಉಳಿದಂತೆ ಬಿಟ್ಕಾಯಿನ್, ಕಾರ್ಡಾನೋ, ಟೆಥರ್, ಎಕ್ಸ್ಆರ್ಪಿ, ಪೋಲ್ಕಾಡಾಟ್, ಯುಎಸ್ಟಿ ಕಾಯಿನ್, ಡೋಜೆಕಾಯಿನ್ಗಳು ಮೌಲ್ಯ ಹೆಚ್ಚಿಸಿಕೊಂಡಿವೆ.
ಈ ನಡುವೆ ಕ್ರಿಪ್ಟೋ ವಲಯದಲ್ಲಿನ ಗಂಭೀರ ಸಮಸ್ಯೆಗಳ ಕುರಿತು ಹೆಚ್ಚು ಗಮನಹರಿಸಲಾಗುತ್ತಿದೆ. ಇತ್ತೀಚೆಗೆ ಹ್ಯಾಕರ್ಸ್ ಬೃಹತ್ ಮೊತ್ತದ ಕ್ರಿಪ್ಟೋ ನಾಣ್ಯಗಳನ್ನು ಕಳವು ಮಾಡಿದ್ದು ನೆನಪಿರಬಹದು. ಈ ಹಿನ್ನೆಲೆಯಲ್ಲಿ ರಾನ್ಸಮ್ವೇರ್ ಮತ್ತು ಇತರೆ ಸೈಬರ್ ಅಪರಾಧಗಳ ಅಪಾಯವನ್ನು ಕಿತ್ತೊಗೆಯಲು ಅಮೆರಿಕದ ಶ್ವೇತಭವನ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.
"ರಾನ್ಸಮ್ವೇರ್ ಹ್ಯಾಕರ್ಸ್ ಸೇರಿದಂತೆ ಕೆಟ್ಟ ಚಟುವಟಿಕೆಗಳಿಗೆ ಕ್ರಿಪ್ಟೋಕರೆನ್ಸಿ ಬಳಕೆಯಾಗದಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅಮೆರಿಕ ಕಾರ್ಯಪ್ರವೃತ್ತವಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಹೇಳಿದರು.
ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಎಷ್ಟು
ವಿಶ್ವದ ಟಾಪ್ 10 ವಹಿವಾಟು ನಡೆಸಿದ ಕ್ರಿಪ್ಟೋಕರೆನ್ಸಿಗಳ ಪೈಕಿ ಬಹುತೇಕ ಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮೌಲ್ಯ ಹೆಚ್ಚಿಸಿಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಟೋಬರ್ 10ರಂದು ಅವುಗಳ ಮೌಲ್ಯ ಹೀಗಿದೆ.
ಎಲ್ ಸಾಲ್ವೆಡಾರ್ ರಾಷ್ಟ್ರವು ತನ್ನ ಬಿಟ್ಕಾಯಿನ್ ಕಾನೂನನ್ನು ಸೆಪ್ಟೆಂಬರ್ 7 ರಂದು ಜಾರಿಗೊಳಿಸಿದೆ. ಈ ಮೂಲಕ ಕ್ರಿಪ್ಟೋಕರೆನ್ಸಿಗೆ ಅಧಿಕೃತ ಮಾನ್ಯತೆ ನೀಡಿದ ಮೊದಲ ದೇಶ ಎನಿಸಿಕೊಂಡಿದೆ. ಇದರ ಹಿಂದೆಯೇ ಕೆಲವು ರಾಷ್ಟ್ರಗಳು ಕ್ರಿಪ್ಟೋ ಕರೆನ್ಸಿಗಳಿಗೆ ಮಾನ್ಯತೆ ನೀಡಿವೆ. ಈ ಬೆನ್ನಲ್ಲೇ ಹೂಡಿಕೆದಾರರಿಗೆ ನಿರೀಕ್ಷೆಗಳು ಹೆಚ್ಚಾಗಿವೆ. ತಜ್ಞರ ಪ್ರಕಾರ, ಬಿಟ್ ಕಾಯಿನ್ ಇನ್ನೂ ಪ್ರಬಲವಾಗಿದೆ.

- ಬಿಟ್ಕಾಯಿನ್: $54,475.28
- ಇಥೆರಿಯಂ: $3,514.17
- ಬಿನಾನ್ಸ್ ಕಾಯಿನ್ : $414.10
- ಟೆಥರ್: $1
- ಕಾರ್ಡಾನೋ: $2.24
- ಡೋಜೆಕಾಯಿನ್: $0.24
- ಎಕ್ಸ್ಆರ್ಪಿ: $1.15
- ಪೊಲ್ಕಾಡಾಟ್: $37
- ಯುಎಸ್ಡಿ ಕಾಯಿನ್: $1
- ಸೊಲಾನೋ: $154.05