ಹೊಸದಿಲ್ಲಿ: ಕಳೆದ ಮಂಗಳವಾರ ಎಲ್ ಸಾಲ್ವೆಡಾರ್ ರಾಷ್ಟ್ರವು ಬಿಟ್ಕಾಯಿನ್ಗೆ ಕಾನೂನುಬದ್ದ ಮಾನ್ಯತೆ ನೀಡಿದ ಬೆನ್ನಲ್ಲೇ ಕ್ರಿಕ್ಟೋ ಕರೆನ್ಸಿ ವಾಹಿವಾಟು ಭಾರೀ ಪ್ರಮಾಣದಲ್ಲಿ ಹೆಚ್ಚಿತ್ತು, ಇದಾದ ಒಂದೇ ದಿನದಲ್ಲಿ ಕ್ರಿಪ್ಟೋ ವಹಿವಾಟು ತಣ್ಣಗಾಗಿದೆ. ಗುರುವಾರ ಬಹುತೇಕ ಡಿಜಿಟಲ್ ಟೋಕನ್ಗಳ ವಹಿವಾಟು ಸ್ಥಿರವಾಗಿದೆ. ಭಾರೀ ಇಳಿಕೆ ಕಂಡಿದ್ದ ಕ್ರಿಪ್ಟೋ ಕರೆನ್ಸಿಗಳು ಸ್ವಲ್ಪ ಚೇತರಿಸಿಕೊಳ್ಳುತ್ತಿವೆ. ಆದರೂ ಕೂಡ, ವಿಶ್ವದ ಟಾಪ್ 10 ಕ್ರಿಪ್ಟೋಕರೆನ್ಸಿಗಳ ಪೈಕಿ 7 ಕರೆನ್ಸಿಗಳ ಮೌಲ್ಯ ಗುರುವಾರವೂ ಇಳಿಕೆಯಾಗಿದೆ. ಈ ಪೈಕಿ ಇಥೆರಿಯಂ ಮತ್ತು ಸೊಲಾನೋ ಕಾಯಿನ್ಗಳು ಮೌಲ್ಯ ಹೆಚ್ಚಿಸಿಕೊಂಡಿವೆ. ಅದರಲ್ಲೂ ಸೊಲೋನಾ ಬರೋಬ್ಬರಿ ಶೇ.22ರಷ್ಟು ಗಳಿಕೆ ಕಂಡಿದೆ.
ವಿಶ್ವದ ಅತಿ ಹೆಚ್ಚು ದುಬಾರಿಯಾದ ಬಿಟ್ಕಾಯಿನ್ ಮೌಲ್ಯ 45000 ಡಾಲರ್ಗಿಂತಲೂ ಕಡಿಮೆಯಾಗಿದೆ. ಕಳೆದ ಮಂಗಳವಾರ ಬಿಟ್ಕಾಯಿನ್ ಮೌಲ್ಯ ನಾಲ್ಕು ತಿಂಗಳ ಗರಿಷ್ಠ ಮಟ್ಟ (52,000 ಡಾಲರ್) ದಲ್ಲಿತ್ತು. ಎಲ್ಸಾಲ್ವೆಡಾರ್ ಕಾನೂನು ಮಾನ್ಯತೆ ದೊರೆತ ಒಂದೇ ಗಂಟೆಯಲ್ಲಿ ಬಿಟ್ಕಾಯಿನ್ ಮೌಲ್ಯ ಪಾತಾಳಕ್ಕೆ ಇಳಿದಿತ್ತು. ಇದಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನ ಒಂದೇ ಒಂದು ಹೇಳಿಕೆಯು ಕ್ರಿಪ್ಟೋ ಕರೆನ್ಸಿ ಹೊಂದಿರುವವರನ್ನು ಭಯಭೀತರನ್ನಾಗಿಸಿತು. ಇದರಿಂದ ಒಮ್ಮೆಲೇ ಕ್ರಿಪ್ಟೋಕರೆನ್ಸಿಗಳನ್ನು ಮಾರಲು ಮುಂದಾದರು. ಇದರಿಂದ ಕ್ರಿಪ್ಟೋ ಮೌಲ್ಯ ಇಳಿಕೆಯಾಯಿತು ಎನ್ನಲಾಗಿದೆ.
ಬಿಟ್ಕಾಯಿನ್ಗೆ ಎಲ್ ಸಾಲ್ವೆಡಾರ್ ಕಾನೂನು ಮಾನ್ಯತೆ ನೀಡಿರುವ ಬೆನ್ನಲ್ಲೇ ಹೊಂಡುರಾಸ್ ಮತ್ತು ಗ್ವಾಟೆಮಾಲಾ ಕೇಂದ್ರ ಬ್ಯಾಂಕುಗಳೂ ಕೂಡ ಬಿಟ್ಕಾಯಿನ್ಗೆ ಕಾನೂನು ಮಾನ್ಯತೆ ನೀಡಲು ಚಿಂತನೆ ನಡೆಸಿವೆ.
ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಎಷ್ಟು
ವಿಶ್ವದ ಟಾಪ್ 10 ವಹಿವಾಟು ನಡೆಸಿದ ಕ್ರಿಪ್ಟೋಕರೆನ್ಸಿಗಳ ಪೈಕಿ ಬಹುತೇಕ ಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮೌಲ್ಯ ಹೆಚ್ಚಿಸಿಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 9ರಂದು ಅವುಗಳ ಮೌಲ್ಯ ಹೀಗಿದೆ.
ಟ್ರ್ಯಾಕರ್ ಕಾಯಿನ್ಜೆಕ್ಕೊ ಪ್ರಕಾರ ಒಟ್ಟಾರೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ ಕಳೆದ 24 ಗಂಟೆಗಳಲ್ಲಿ ಸುಮಾರು 300 ಬಿಲಿಯನ್ ಡಾಲರ್ನಷ್ಟು ಕುಸಿದಿದೆ. ಆದರೆ, ಜುಲೈನಲ್ಲಿದ್ದ ಬೆಲೆಗೆ ಹೋಲಿಸಿದರೆ ಬಿಟ್ಕಾಯಿನ್ ಮೌಲ್ಯದಲ್ಲಿ ಶೇ.75ರಷ್ಟು ಹೆಚ್ಚಳವಾಗಿದೆ.
ಎಲ್ ಸಾಲ್ವೆಡಾರ್ ರಾಷ್ಟ್ರವು ತನ್ನ ಬಿಟ್ಕಾಯಿನ್ ಕಾನೂನನ್ನು ಸೆಪ್ಟೆಂಬರ್ 7 ರಂದು ಜಾರಿಗೊಳಿಸಿದೆ. ಈ ಬೆನ್ನಲ್ಲೇ ಹೂಡಿಕೆದಾರರಿಗೆ ನಿರೀಕ್ಷೆಗಳು ಹೆಚ್ಚಾಗಿವೆ. ತಜ್ಞರ ಪ್ರಕಾರ, ಬಿಟ್ ಕಾಯಿನ್ ಇನ್ನೂ ಪ್ರಬಲವಾಗಿದೆ. ಬೆಲೆ 43,000 ಡಾಲರ್ಗಿಂತಲೂ ಹೆಚ್ಚಿನ ಮಟ್ಟದಲ್ಲೇ ಇದೆ.
ಕಳೆದ ಎಂಟು ವಾರಗಳಲ್ಲಿ ಬಿಟ್ಕಾಯಿನ್ ಪ್ರಬಲವಾಗುತ್ತಿದೆ ಮತ್ತು ಅತಿಯಾದ ಖರೀದಿಯಾಗಿದೆ. ಬೆಲೆ ಜಿಗಿಯುತ್ತಿರುವ ಹಿನ್ನಲೆಯಲ್ಲಿ ವೈಯಕ್ತಿಕ ಹೂಡಿಕೆದಾರರ ಆಸಕ್ತಿಯೂ ಹೆಚ್ಚಾಗಿದೆ ಎಂದು ಗೆಲಾಕ್ಸಿ ಡಿಜಿಟಲ್ ಹೋಲ್ಡಿಂಗ್ಸ್ನ ಚೀಫ್ ಎಗ್ಸಿಕ್ಯುಟೀವ್ ಆಫೀಸರ್ ಮೈಕ್ ನೊವೋಗ್ರೆಟ್ ತಿಳಿಸಿದ್ದಾರೆ.

- ಬಿಟ್ಕಾಯಿನ್: $46,006.32
- ಇಥೆರಿಯಂ: $3,471.33
- ಬಿನಾನ್ಸ್ ಕಾಯಿನ್ : $408.54
- ಟೆಥರ್: $1
- ಕಾರ್ಡಾನೋ: $2.43
- ಡೋಜೆಕಾಯಿನ್: $0.25
- ಎಕ್ಸ್ಆರ್ಪಿ: $1.09
- ಪೊಲ್ಕಾಡಾಟ್: $27.73
- ಯುಎಸ್ಡಿ ಕಾಯಿನ್: $1
- ಸೊಲಾನೋ: $211.55