ಆ್ಯಪ್ನಗರ

ಚಿನ್ನದ ದರದಲ್ಲಿ ಭಾರೀ ಏರಿಕೆ, 15 ದಿನದಲ್ಲಿ ₹4,000 ಹೆಚ್ಚಳ, ಹಲವು ಮದುವೆಗಳು ಮುಂದೂಡಿಕೆ!

ಕಳೆದ ಹದಿನೈದು ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 49,938 ರೂ.ನಿಂದ 53,595 ರೂ.ಗೆ ಏರಿಕೆಯಾಗಿದೆ. ಚಿನ್ನದ ದರ ಒಂದೇ ಸಮನೆ ಏರಿಕೆಯಾಗುತ್ತಿರುವುದರಿಂದ ಸಣ್ಣ ಬಜೆಟ್‌ನ ಮದುವೆಗಳು ಮುಂದೂಡಿಕೆಯಾಗುತ್ತಿವೆ. ಜನರು ಆಭರಣ ತಯಾರಕರಿಗೆ ನೀಡಿರುವ ಆರ್ಡರ್‌ಗಳನ್ನು ರದ್ದುಗೊಳಿಸುತ್ತಿದ್ದಾರೆ ಎಂದು ಪ್ರಮುಖ ವ್ಯಾಪಾರಿ ಸಂಸ್ಥೆಗಳು ಹೇಳಿವೆ.

ET Bureau 9 Mar 2022, 9:45 am
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇದೀಗ ಭಾರತೀಯ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ. ಅದರಲ್ಲೂ ಮದುವೆ ಸೀಸನ್‌ನಲ್ಲೇ ಚಿನ್ನದ ದರ 10 ಗ್ರಾಂಗೆ 53,000 ರೂ. ದಾಟುವಂತಾಗಿದ್ದು, ಜನರು ಆಭರಣ ತಯಾರಕರಿಗೆ ನೀಡಿರುವ ಆರ್ಡರ್‌ಗಳನ್ನು ರದ್ದುಗೊಳಿಸುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳ ಮದುವೆಗೆ ಮಾಡಬೇಕಾಗಿದ್ದ ಚಿನ್ನದ ಖರೀದಿಗಳನ್ನು ಮುಂದೂಡುತ್ತಿದ್ದಾರೆ. ಹೀಗೆ ಚಿನ್ನದ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರುಪೇರು, ಮದುವೆ ಮಾರ್ಕೆಟ್‌ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ.
Vijaya Karnataka Web gold price


ಸಣ್ಣ ಬಜೆಟ್‌ನ ಮದುವೆಗಳನ್ನು ಮುಂದೂಡಲಾಗುತ್ತಿದೆ ಎಂದು ಪ್ರಮುಖ ವ್ಯಾಪಾರ ಸಂಸ್ಥೆಗಳು ತಿಳಿಸಿದ್ದು, ಕುಟುಂಬಗಳು ಚಿನ್ನದ ಬೆಲೆ ಇಳಿಯುವುದನ್ನೇ ಕಾಯುತ್ತಿವೆ ಎಂದು ಹೇಳಿವೆ. ಅದರಲ್ಲೂ ದಕ್ಷಿಣ ಭಾರತದ ಮದುವೆಗಳಲ್ಲಿ ಚಿನ್ನ ಅವಿಭಾಜ್ಯ ಅಂಗವೇ ಆಗಿದ್ದು, ಇಲ್ಲಿ ಈ ಪರಿಸ್ಥಿತಿ ಹೆಚ್ಚು ತೀವ್ರವಾಗಿದೆ ಎಂದು ಸಂಸ್ಥೆಗಳು ಅಂದಾಜಿಸಿವೆ.

"ದೇಶದ ಅತಿದೊಡ್ಡ ಚಿನ್ನದ ಹಬ್‌ ಆಗಿರುವ ಜವೇರಿ ಬಜಾರ್‌ನಲ್ಲಿ ಹಳದಿ ಲೋಹದ ಬೆಲೆ ತೀವ್ರವಾಗಿ ಏರಿಕೆಯಾಗಿರುವುದರಿಂದ ಚಿನ್ನದ ವ್ಯಾಪಾರವು ಸ್ಥಗಿತಗೊಂಡಿದೆ. ಜನರು ಆರ್ಡರ್‌ಗಳನ್ನು ರದ್ದುಗೊಳಿಸುತ್ತಿದ್ದು, ಚಿಲ್ಲರೆ ವ್ಯಾಪಾರಿಗಳು ಆಭರಣ ತಯಾರಕರು ಮತ್ತು ಸಗಟು ವ್ಯಾಪಾರಿಗಳಿಗೆ ನೀಡಿದ ಆರ್ಡರ್‌ಗಳನ್ನು ಅನಿವಾರ್ಯವಾಗಿ ರದ್ದುಗೊಳಿಸುತ್ತಿದ್ದಾರೆ,” ಎಂದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ (ಐಬಿಜಿಎ) ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಪರಿಸ್ಥಿತಿಯ್ನು ವಿವರಿಸಿದ್ದಾರೆ.

ಕೇಳೋದೆ ಬೇಡ ಮತ್ತೆ ಏರಿಕೆಯಾಯ್ತು ಗೋಲ್ಡ್ ರೇಟ್​! ಮಾ.8ರ ದರ ವಿವರ ನೋಡಿದ್ರೆ ಶಾಕ್ ಆಗ್ತೀರಾ!
ಕಳೆದ ಹದಿನೈದು ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 49,938 ರೂ.ನಿಂದ 53,595 ರೂ.ಗೆ ಏರಿಕೆಯಾಗಿದ್ದು, ಶೇ. 7.38ರಷ್ಟು ಏರಿಕೆ ಕಂಡಿದೆ. ಈ ಮೂಲಕ ಸರಿ ಸುಮಾರು 4 ಸಾವಿರ ರೂ.ನಷ್ಟು ಏರಿಕೆಯಾಗಿದ್ದು ಚಿನ್ನ ಗ್ರಾಹಕರ ಜೇಬಿಗೆ ಭಾರವಾಗಿ ಪರಿಣಮಿಸಿದೆ.

ಕೊಯಮತ್ತೂರು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ ಶಬರಿನಾಥ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಮಿಳುನಾಡು ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಅನೇಕ ಕುಟುಂಬಗಳು ತಮ್ಮ ಬಜೆಟ್‌ ಕೈ ಮೀರುತ್ತಿರುವ ಹಿನ್ನೆಲೆಯಲ್ಲಿ ಮದುವೆಯನ್ನು ಎರಡು ತಿಂಗಳ ಕಾಲ ಮುಂದೂಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಚಿನ್ನದ ಬೆಲೆಯಿಂದಾಗಿ ಸುಮಾರು ಶೇ. 15-20 ಮದುವೆಗಳು ಮುಂದೂಡಿಕೆಯಾಗಿವೆ ಎಂದು ಸ್ವರ್ಣ ವ್ಯಾಪಾರಿ ಸಂಸ್ಥೆಗಳು ಹೇಳಿವೆ. "ಸಣ್ಣ-ಬಜೆಟ್ ಮದುವೆಗಳು ಎರಡು ತಿಂಗಳವರೆಗೆ ಮುಂದೂಡಿಕೆಯಾಗಿವೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಏನಾಗುತ್ತದೆ ಎಂಬುದನ್ನು ಕುಟುಂಬಗಳು ಕಾದು ನೋಡುತ್ತಿವೆ. ಈ ಕುಟುಂಬಗಳು ಯುದ್ಧವು ಶೀಘ್ರವಾಗಿ ಕೊನೆಗೊಳ್ಳಲಿ ಎಂದು ಆಶಿಸುತ್ತಿದ್ದು, ಇದರಿಂದಾಗಿ ಚಿನ್ನದ ಬೆಲೆಗಳು ಕಡಿಮೆಯಾಗುತ್ತವೆ ಮತ್ತು ಸ್ಥಿರಗೊಳ್ಳುತ್ತವೆ ಎಂದು ನಂಬಿಕೊಂಡಿವೆ. ಈ ಮೂಲಕ ಚಿನ್ನವನ್ನು ಖರೀದಿಸಲು ಅವಕಾಶ ಸಿಗುತ್ತದೆ ಎಂದು ನಂಬಿಕೊಂಡಿವೆ. ದಕ್ಷಿಣ ಭಾರತದ ಮದುವೆಗಳಲ್ಲಿ ಚಿನ್ನದ ಬಳಕೆ ಸಾಮಾನ್ಯ," ಎಂದು ಬಿ ಶಬರಿನಾಥ್‌ ವಿವರಿಸಿದ್ದಾರೆ.

ದೇಶದಲ್ಲಿ ದಕ್ಷಿಣ ಭಾರತವು ಚಿನ್ನದ ಅತಿದೊಡ್ಡ ಗ್ರಾಹಕನಾಗಿ ಮುಂದುವರಿದಿದ್ದು, ದಕ್ಷಿಣದ ನಾಲ್ಕು ರಾಜ್ಯಗಳು ಭಾರತದ ಒಟ್ಟಾರೆ ವಾರ್ಷಿಕ 800-850 ಟನ್‌ಗಳ ಚಿನ್ನದ ಬಳಕೆಯಲ್ಲಿ ಶೇ. 40ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ. ಚಿನ್ನದ ಬಳಕೆಯಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದ್ದರೆ, ಕೇರಳ ನಂತರದ ಸ್ಥಾನದಲ್ಲಿದೆ.

ಮಹಾಲಕ್ಷ್ಮಿ ಜ್ಯುವೆಲ್ಲರಿ ಮಾಲೀಕ ಮತ್ತು ದಕ್ಷಿಣ ಭಾರತ ಮೂಲದ ಪ್ರಮುಖ ಚಿನ್ನ ತಯಾರಕರಾದ ಬಿ ಮುತ್ತು ವೆಂಕಟರಾಮನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬೆಲೆಗಳು ಏರಲು ಪ್ರಾರಂಭಿಸಿದ ನಂತರ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳಿಂದ ಆರ್ಡರ್‌ಗಳು ಬರಿದಾಗಿವೆ ಎಂದು ಹೇಳಿದ್ದಾರೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ