ಆ್ಯಪ್ನಗರ

ಬಂಗಾರದ ದರ 6 ವರ್ಷದಲ್ಲೇ ಗರಿಷ್ಠ

ಜಾಗತಿಕ ಮಟ್ಟದಲ್ಲಿ ಇತ್ತೀಚಿನ ಷೇರು ಮಾರುಕಟ್ಟೆ ಸೂಚ್ಯಂಕಗಳ ಪರಿಣಾಮ ಸ್ವರ್ಣ ದರ ಹೆಚ್ಚಿಸಿದೆ. ರೂಪಾಯಿ ಬಡವಾಗಿರುವುದು ಕೂಡ ಪ್ರಭಾವ ಬೀರಿತು. ಅಕ್ಟೋಬರ್‌ 23ರಿಂದ ಸತತ ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 405 ರೂ. ಜಿಗಿದಿದೆ.

Vijaya Karnataka 26 Oct 2018, 7:54 am
ಹೊಸದಿಲ್ಲಿ: ಬಂಗಾರ ಕೊಳ್ಳಲು ಹೊರಟಿದ್ದೀರಾ, ಹಾಗಾದರೆ ಗಮನಿಸಿ. ಚಿನ್ನದ ದರ ಕಳೆದ 6 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಗುರುವಾರ ಏರಿಕೆಯಾಗಿದೆ.
Vijaya Karnataka Web gold

ದಿಲ್ಲಿಯಲ್ಲಿ ಪ್ರತಿ 10 ಗ್ರಾಂ ಸ್ವರ್ಣ ದರದಲ್ಲಿ 125 ರೂ. ಏರಿದ್ದು, 32,625 ರೂ.ಗೆ ಮುಟ್ಟಿತು. ಹಬ್ಬ ಹಾಗೂ ವೈವಾಹಿಕ ಅಗತ್ಯಗಳಿಗೆ ಆಭರಣಗಳ ಬೇಡಿಕೆ ಏರುಗತಿಯಲ್ಲಿರುವುದು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ದರ ಹೆಚ್ಚಳ ಇದಕ್ಕೆ ಕಾರಣ.

ಹೀಗಿದ್ದರೂ ಬೆಳ್ಳಿಯ ದರ ದುರ್ಬಲವಾಗಿದ್ದು, 130 ರೂ. ಇಳಿದು ಕೆ.ಜಿಗೆ 39,600 ರೂ.ನಷ್ಟಿತ್ತು. ಬೆಳ್ಳಿಯ 100 ನಾಣ್ಯಗಳ ಖರೀದಿ ದರ 76,000 ರೂ. ಹಾಗೂ ಮಾರಾಟ ದರ 77,000 ರೂ. ಇತ್ತು.

ಜಾಗತಿಕ ಮಟ್ಟದಲ್ಲಿ ಇತ್ತೀಚಿನ ಷೇರು ಮಾರುಕಟ್ಟೆ ಸೂಚ್ಯಂಕಗಳ ಪರಿಣಾಮ ಸ್ವರ್ಣ ದರ ಹೆಚ್ಚಿಸಿದೆ. ರೂಪಾಯಿ ಬಡವಾಗಿರುವುದು ಕೂಡ ಪ್ರಭಾವ ಬೀರಿತು. ಅಕ್ಟೋಬರ್‌ 23ರಿಂದ ಸತತ ಮೂರು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 405 ರೂ. ಜಿಗಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ