ಆ್ಯಪ್ನಗರ

ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಬೆಂಗಳೂರಿನಲ್ಲಿ ಗ್ರಾಂ ಚಿನ್ನದ ಬೆಲೆ ಬೆಲೆ ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ ₹ 32427.81ರಷ್ಟಿದೆ. ಹಾಗೆಯೇ ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿ ಬೆಲೆ ₹ 41100ರಷ್ಟಿದೆ.

Vijaya Karnataka Web 11 Mar 2019, 1:23 pm
ಹೊಸದಿಲ್ಲಿ: ಚಿನ್ನಾಭರಣ ವರ್ತಕರಿಂದ ಸ್ಪಾಟ್ ಮಾರುಕಟ್ಟೆಯಲ್ಲಿ (ಸ್ಥಳದಲ್ಲೇ ನಗದು ನೀಡಿ ತಕ್ಷಣವೇ ಚಿನ್ನ ಖರೀದಿಸುವ ಮಾರುಕಟ್ಟೆ) ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ಚಿನ್ನದ ಬೆಲೆ ಇಳಿಕೆಯಾಗಿದೆ. ಈಕ್ವಿಟಿಗಳ ಮೇಲಿನ ಹೂಡಿಕೆಗೆ ಚೇತರಿಕೆ ಕಂಡುಬಂದಿದೆ.
Vijaya Karnataka Web A woman tries on a gold necklace inside a jewellery shop in Hyderabad
A woman tries on a gold necklace inside a jewellery shop in Hyderabad May 14, 2010. REUTERS/Krishnendu/Files


ಅಂತಾರಾಷ್ಟೀಯ ಮಾರುಕಟ್ಟೆಯಲ್ಲೂ ಚಿನ್ನದ ಮೇಲಿನ ಹೂಡಿಕೆ ನಿರಾಶಾದಾಯವಾಗಿದೆ. ಜೊತೆಗೆ ಡಾಲರ್ ಮೌಲ್ಯ ಪ್ರಬಲವಾಗಿದ್ದು ಅದು ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) 10 ಗ್ರಾಂ ಚಿನ್ನದ ಬೆಲೆ ₹ 46ರಷ್ಟು ಇಳಿಕೆಯಾಗಿ ₹ 32,121ರಷ್ಟಾಗಿದೆ. ಕೈಗಾರಿಕಾ ಘಟಕಗಳಿಂದ ಹಾಗೂ ನಾಣ್ಯ ತಯಾರಕರಿಂದ ಅಷ್ಟಾಗಿ ಬೇಡಿಕೆ ಇಲ್ಲದ ಕಾರಣ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ 1 ಕಿಲೊ ಬೆಳ್ಳಿ ಬೆಲೆ ₹ 54ರಷ್ಟು ಇಳಿಕೆಯಾಗಿದ್ದು ₹ 38,674ರಷ್ಟಾಗಿದೆ.

ಬೆಂಗಳೂರಿನಲ್ಲಿ 22 ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ ₹ 30320 ಹಾಗೂ ₹ 32427.81ರಷ್ಟಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ ₹ 32427.81ರಷ್ಟಿದೆ. ಹಾಗೆಯೇ ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿ ಬೆಲೆ ₹ 41100ರಷ್ಟಿದೆ.

Gold Rates - Spot & Futures (.995 purity)(MCX)

DateGold Spot Price Rs/10 Grms (Ahmedabad)Gold Future Price Rs/10 Grms Expiry: 05-Apr-2019
11-03-201932123.032121.0
08-03-201932123.032184.0
07-03-201931982.031939.0
04-03-20190.032380.0
01-03-201932819.032655.0
26-02-201933264.033373.0
25-02-201933326.033320.0
22-02-201933252.033499.0
21-02-201933531.033436.0
20-02-201933730.033853.0
19-02-201933519.033903.0
18-02-201933371.033619.0
15-02-201933193.033398.0

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ