ಆ್ಯಪ್ನಗರ

ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಬೆಂಗಳೂರಿನಲ್ಲಿ ಎಷ್ಟು ಅಗ್ಗ?

ಚಿನ್ನ, ಬೆಳ್ಳಿ ಬೆಲೆ ತುಸು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ ₹ 3140ರಷ್ಟಾಗುತ್ತದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ₹ 43500ರಷ್ಟಿದ್ದು 100 ಗ್ರಾಂ ಬೆಳ್ಳಿ ಬೆಲೆ ₹ 4350ರಷ್ಟಿದೆ.

Vijaya Karnataka Web 19 Feb 2019, 1:27 pm
ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆ ಹಾಗೂ ಸ್ಥಳೀಯ ವರ್ತಕರಿಂದ ಚಿನ್ನಕ್ಕೆ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಬೆಲೆ ಇಳಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಹಾಗೂ ಚಿನ್ನದ ಮೌಲ್ಯಗಳು ಪರಸ್ಪರ ವಿರುದ್ಧವಾಗಿರುವುದನ್ನು ಕಾಣಬಹುದು. ಡಾಲರ್ ಪ್ರಬಲವಾದಾಗಲೆಲ್ಲಾ ಚಿನ್ನದ ಮೌಲ್ಯ ದುರ್ಬಲವಾಗುತ್ತದೆ.
Vijaya Karnataka Web gold-rate


ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) 10 ಗ್ರಾಂ ಚಿನ್ನದ ಬೆಲೆ ₹ 14ರಷ್ಟು ಕಡಿಮೆಯಾಗಿ ₹ 33,594ಗಳಷ್ಟಾಗಿದೆ. ಅದೇ ರೀತಿ ಎಂಸಿಎಕ್ಸ್‌ನಲ್ಲಿ 1 ಕೆಜಿ ಬೆಳ್ಳಿ ಬೆಲೆ ₹ 2 ರಷ್ಟು ಕಡಿಮೆಯಾಗಿ ₹ 40191ರಷ್ಟಾಗಿದೆ. ಈ ಬೆಳವಣಿಗೆ ಮುಂಜಾನೆ ವಾಹಿವಾಟಿನಲ್ಲಿ ಕಂಡುಬಂತು.

ಬೆಂಗಳೂರಿನಲ್ಲಿ 22 ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ ₹ 31400 ಹಾಗೂ ₹ 33582.89ರಷ್ಟಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ ₹ 3140ರಷ್ಟಾಗುತ್ತದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ₹ 43500ರಷ್ಟಿದ್ದು 100 ಗ್ರಾಂ ಬೆಳ್ಳಿ ಬೆಲೆ ₹ 4350ರಷ್ಟಿದೆ.

Gold Rates - Spot & Futures (.995 purity)(MCX)

DateGold Spot Price Rs/10 Grms (Ahmedabad)Gold Future Price Rs/10 Grms Expiry: 05-Apr-2019
19-02-201933371.033620.0
18-02-201933371.033619.0
15-02-201933193.033398.0
12-02-201932891.032840.0
11-02-201932913.033073.0
08-02-201933043.033226.0
07-02-201933000.033089.0
06-02-201933210.033386.0
05-02-201933281.033410.0
01-02-201933262.033426.0
31-01-201933209.033070.0
30-01-201933000.032929.0
29-01-201932862.032961.0
28-01-201932691.032623.0
25-01-201932303.032449.0

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ