ಆ್ಯಪ್ನಗರ

ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ಧಾರಣೆ

ಬೆಳಗಿನ ಚಿನಿವಾರಪೇಟೆ ವಹಿವಾಟಿನಲ್ಲಿ ಅತ್ಯಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂತು. ಚಿನ್ನದ ಬೆಲೆ ಶೇ.0.35ರಷ್ಟು ಏರಿಕೆಯಾಗಿದ್ದರೆ ಬೆಳ್ಳಿ ಬೆಲೆ ಶೇ.0.54ರಷ್ಟು ಏರಿಯಾಗಿದೆ.

Vijaya Karnataka Web 20 Aug 2018, 4:57 pm
ಹೊಸದಿಲ್ಲಿ: ಬೆಳಗಿನ ಚಿನಿವಾರಪೇಟೆ ವಹಿವಾಟಿನಲ್ಲಿ ಅತ್ಯಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂತು. ಚಿನ್ನದ ಬೆಲೆ ಶೇ.0.35ರಷ್ಟು ಏರಿಕೆಯಾಗಿದ್ದರೆ ಬೆಳ್ಳಿ ಬೆಲೆ ಶೇ.0.54ರಷ್ಟು ಏರಿಯಾಗಿದೆ.
Vijaya Karnataka Web gold


ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 102 ರೂ. ಏರಿಕೆಯಾಗಿದ್ದು 29,451ರಷ್ಟಿದೆ. ಹಾಗೆಯೇ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಬೆಳ್ಳಿ 1 ಕೆ.ಜಿಗೆ 198 ರೂ.ಗಳಷ್ಟು ಏರಿಕೆಯಾಗಿ 36,976 ರೂ.ಗಳಷ್ಟಿದೆ.

ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ ಗ್ರಾಂಗೆ 2765 ರೂ.ಗಳಿದ್ದು 24K ಚಿನ್ನದ ಬೆಲೆ ಗ್ರಾಂಗೆ 2957.22 ರೂ.ಗಳಷ್ಟಿದೆ. ಹಾಗೆಯೇ ಕೆ.ಜಿ ಬೆಳ್ಳಿ ಬೆಲೆ 40900 ರೂ.ಗಳಷ್ಟಿದೆ.

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ