ಆ್ಯಪ್ನಗರ

ಚಿನ್ನ, ಬೆಳ್ಳಿ ದರ ಏರಿಕೆ: ಬೆಂಗಳೂರಿನ ದರಪಟ್ಟಿ ನೋಡಿ

ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹ 3170ರಷ್ಟಾಗುತ್ತದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ₹ 43600ರಷ್ಟಿದೆ.

Vijaya Karnataka Web 20 Feb 2019, 3:05 pm
ಹೊಸದಿಲ್ಲಿ: ಜಾಗತಿಕವಾಗಿ, ಸ್ಥಳೀಯ ವರ್ತಕರಿಂದ ಹಾಗೂ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ಮೇಲಿನ ಹೂಡಿಕೆಗೆ ಆರೋಗ್ಯಕರ ಸ್ಪರ್ಧೆ ಉಂಟಾದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ತುಸು ಏರಿಕೆ ಕಂಡಿದೆ. ಯುಎಸ್ ಫೆಡರಲ್ ರಿಸರ್ವ್ ಸಭೆ ಹಿನ್ನೆಲೆಯಲ್ಲಿ ಡಾಲರ್ ದುರ್ಬಲಗೊಂಡಿದ್ದು ಚಿನ್ನದ ಬೆಲೆ ಏರಿಕೆಯಾಗಿದೆ. ಕಳೆದ 10 ತಿಂಗಳಲ್ಲೇ ಅತಿ ಹೆಚ್ಚು ಏರಿಕೆ ಕಂಡಿದೆ.
Vijaya Karnataka Web gold2


ಕೈಗಾರಿಕಾ ಘಟಕಗಳಿಂದ ಹಾಗೂ ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಾದ ಕಾರಣ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) 10 ಗ್ರಾಂ ಚಿನ್ನದ ಬೆಲೆ ₹ 37ರಷ್ಟು ಏರಿಕೆಯಾಗಿ ₹ 33,936ರಷ್ಟಾಗಿದೆ. ಅದೇ ರೀತಿ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ 1 ಕೆಜಿ ಬೆಳ್ಳಿ ಬೆಲೆ ₹ 75ರಷ್ಟು ಏರಿಕೆಯಾಗಿ ₹ 40,632ಗಳಷ್ಟಾಗಿದೆ.

ಬೆಂಗಳೂರಿನಲ್ಲಿ 22 ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ ₹ 31700 ಹಾಗೂ ₹ 33903.74ರಷ್ಟಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹ 3170ರಷ್ಟಾಗುತ್ತದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ₹ 43600ರಷ್ಟಿದೆ.

Gold Rates - Spot & Futures (.995 purity)(MCX)

DateGold Spot Price Rs/10 Grms (Ahmedabad)Gold Future Price Rs/10 Grms Expiry: 05-Apr-2019
20-02-201933519.033894.0
19-02-201933519.033903.0
18-02-201933371.033619.0
15-02-201933193.033398.0
12-02-201932891.032840.0
11-02-201932913.033073.0
08-02-201933043.033226.0
07-02-201933000.033089.0
06-02-201933210.033386.0
05-02-201933281.033410.0
01-02-201933262.033426.0
31-01-201933209.033070.0
30-01-201933000.032929.0
29-01-201932862.032961.0
28-01-201932691.032623.0

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ