ಆ್ಯಪ್ನಗರ

ಬೆಂಗಳೂರಿನಲ್ಲಿ ಆಗಸ್ಟ್ 28ರಂದು ಚಿನ್ನ, ಬೆಳ್ಳಿ ಧಾರಣೆ

ಚಿನಿವಾರಪೇಟೆಯಲ್ಲಿ ಆಗಸ್ಟ್ 28ರಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 10 ಗ್ರಾಂ ಚಿನ್ನದ ಬೆಲೆ ₹ 150ರಷ್ಟು ಏರಿಕೆಯಾಗಿ ₹ 31,150ರಷ್ಟಾಗಿದೆ.

Vijaya Karnataka Web 28 Aug 2018, 5:31 pm
ಹೊಸದಿಲ್ಲಿ: ಚಿನಿವಾರಪೇಟೆಯಲ್ಲಿ ಆಗಸ್ಟ್ 28ರಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 10 ಗ್ರಾಂ ಚಿನ್ನದ ಬೆಲೆ ₹ 150ರಷ್ಟು ಏರಿಕೆಯಾಗಿ ₹ 31,150ರಷ್ಟಾಗಿದೆ. ಶ್ರಾವಣ ಮಾಸ, ಹಬ್ಬದ ಸೀಸನ್ ಆಗಿರುವುದು ಹಾಗೂ ಸ್ಥಳೀಯ ಚಿನ್ನದ ವ್ಯಾಪಾರಿಗಳಿಂದ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ.
Vijaya Karnataka Web gold


ಕಳೆದ ಮೂರು ದಿನಗಳಿಂದ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹ 380 ಏರಿಕೆಯಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಬೆಳ್ಳಿಯ ಬೆಲೆಯೂ ಕೆ.ಜಿ ₹ 170ರಷ್ಟು ಏರಿಕೆಯಾಗಿ ₹ 38,470ರಷ್ಟಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ 22K ಚಿನ್ನದ ಬೆಲೆ ₹ 28,200ರಷ್ಟಿದ್ದರೆ 24K ಚಿನ್ನದ ಬೆಲೆ ₹ 30,160.43ರಷ್ಟಿದೆ. ಗ್ರಾಂ ಲೆಕ್ಕಾಚಾರದಲ್ಲಿ ಹೇಳುವುದಾದರೆ 22K ಮತ್ತು 24K ಚಿನ್ನದ ಬೆಲೆ ಕ್ರಮವಾಗಿ ₹ 2820 ಹಾಗೂ ₹ 3,016.04ರಷ್ಟಿದೆ. ಹಾಗೆಯೇ ಕೆ.ಜಿ ಬೆಳ್ಳಿ ಬೆಲೆ ₹ 40,000 ರಷ್ಟಿದ್ದು 100 ಗ್ರಾಂಗೆ 4,000ರಷ್ಟಿದೆ.

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ