ಆ್ಯಪ್ನಗರ

ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ವಿವರ ಇಲ್ಲಿದೆ

ದೇಶದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಆಯಾಯ ರಾಜ್ಯಕ್ಕೆ ಅನುಸಾರವಾಗಿ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ದೇಶದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 3,715ರೂ ಇದೆ. ಬೆಳ್ಳಿ ಬೆಲೆ ಕೆಜಿಗೆ 20 ರೂ ಏರಿಕೆಯಾಗಿ 48,770 ರೂ ದಾಖಲಾಗಿದೆ. ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.

Vijaya Karnataka Web 13 Nov 2019, 1:26 pm
ಬೆಂಗಳೂರು: ದೇಶದ ಇಂದಿನ ಚಿನ್ನದ ಬೆಲೆ 10 ಗ್ರಾಂಗೆ ಚಿನ್ನದ ಬೆಲೆಯು 37,160 ಇದ್ದು, ಬೆಳ್ಳಿ ಬೆಲೆಯು ಕೆಜಿಗೆ 20 ರೂ ಏರಿಕೆಯಾಗಿ 48,770 ಇದೆ.
Vijaya Karnataka Web gold


ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಚಿನ್ನದ ಬೆಲೆ ಗ್ರಾಂ ಗೆ 15 ರೂ ಏರಿಕೆಯಾಗಿ, 10 ಗ್ರಾಂ 35,700 ಇದೆ. ಕೆಜಿ ಬೆಳ್ಳಿ ಬೆಲೆ 48,750 ರೂ ಇದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ರಾಂ ಚಿನ್ನದ ಬೆಲೆ 1 ರೂ ಏರಿಕೆ ಕಂಡು 10 ಗ್ರಾಂಗೆ 37,010
ರೂಪಾಯಿ ಮತ್ತು ಬೆಳ್ಳಿ ಬೆಲೆಯಲ್ಲಿ ಒಂದು ಕೆ.ಜಿ ಗೆ 20 ರೂ ಏರಿಕೆಯಾಗಿ, ಕೆ ಜಿ ಬೆಳ್ಳಿ ದರ 48,770ರೂಪಾಯಿ ಇದೆ.

ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 37,150 ರೂಪಾಯಿ ದಾಖಲಾಗಿದೆ. ಮತ್ತು ಒಂದು ಕೆ.ಜಿ ಬೆಳ್ಳಿಗೆ 20 ರೂ ಏರಿಕೆಯಾಗಿ, 48,770 ರೂಪಾಯಿ ಇದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ?
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಗ್ರಾಂ ಗೆ 14 ರೂ ಏರಿಕೆ ಕಂಡು 10 ಗ್ರಾಂ ಆಭರಣದ ಬೆಲೆ 37,490 ರೂಪಾಯಿ ಮತ್ತು ಒಂದು ಕೆ.ಜಿ ಬೆಳ್ಳಿಗೆ 20 ರೂ ಏರಿಕೆಯಾಗಿ, 48,770 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆಯಲ್ಲಿ ಗ್ರಾಂ ಗೆ 12 ಏರಿಕೆಯಾಗಿ 36,340 ರೂ ಇದೆ ಒಂದು ಕೆ.ಜಿ ಬೆಳ್ಳಿಗೆ 20 ರೂ ಏರಿಕೆಯಾಗಿ, 48,770 ರೂಪಾಯಿ ಇದೆ.

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಇದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ