ಆ್ಯಪ್ನಗರ

ಅಲ್ಪ ಏರಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆ ಸ್ಥಿರತೆ

ಕಳೆದ ವಾರ ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ಥಿರತೆ ಕಾಯ್ದುಕೊಂಡಿದ್ದವು. ಇಂದಿನ ವಾರದ ಆರಂಭದಿಂದ ಬೆಲೆಯಲ್ಲಿ ಏರಿಕೆ ಆಗುವ ಲಕ್ಷಣ ಕಾಣುತ್ತಿದೆ. ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ.

Vijaya Karnataka Web 14 Oct 2019, 9:12 am
Vijaya Karnataka Web gold rate
ಬೆಂಗಳೂರು: ಕಳೆದ ವಾರದಲ್ಲಿ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಲ್ಪ ಮಟ್ಟದ ಸ್ಥಿರತೆ ಕಾಯ್ದುಕೊಂಡಿದ್ದವು. ಅಂದರೆ, ಸೋಮವಾರ ಚಿನ್ನದ ಬೆಲೆಯಲ್ಲಿ 1 ರೂ. ಏರಿಕೆಯಾಗಿದೆ. ಬೆಳ್ಳಿ ಮೌಲ್ಯ ಸ್ಥಿರತೆಯನ್ನು ಕಾಯ್ದುಕೊಂಡಿದೆ. ದೈನಂದಿನ ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ಇಂದು (ಸೋಮವಾರ ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಆಭರಣ ಚಿನ್ನದ ಬೆಲೆ 3,5710ರೂ. ಮತ್ತು ಒಂದು ಕೆ.ಜಿ. ಬೆಳ್ಳಿ ದರ 48,550 ರೂಪಾಯಿ ಇದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 37,210 ರೂಪಾಯಿ ಮತ್ತು ಒಂದು ಕೆ.ಜಿ. ಬೆಳ್ಳಿ ದರ 48,550 ರೂಪಾಯಿ ಇದೆ.
ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 37,310 ರೂಪಾಯಿ ಮತ್ತು ಒಂದು ಕೆ.ಜಿ. ಬೆಳ್ಳಿ ದರ 48,550 ರೂಪಾಯಿ ಇದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ?
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ 10 ಗ್ರಾಂ ಆಭರರಣ ಚಿನ್ನದ ಬೆಲೆ 37,650 ರೂಪಾಯಿ ಮತ್ತು ಬೆಳ್ಳಿ ದರ 48,550 ರೂಪಾಯಿ ಇದೆ. ತಮಿಳುನಾಡಿನ ಚೆನ್ನೈನಲ್ಲಿ ಚಿನ್ನದ ಬೆಲೆ 36,450 ರೂಪಾಯಿ ಇದ್ದರೆ, ಒಂದು ಕೆ.ಜಿ. ಬೆಳ್ಳಿ ದರ 48,550ರೂಪಾಯಿ ಇದೆ. ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೆ, ಬೆಳ್ಳಿ ದರ ಒಂದೇ ರೀತಿಯಾಗಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ