ಆ್ಯಪ್ನಗರ

ಶುಕ್ರವಾರದ ಚಿನ್ನದ ಬೆಲೆಯೂ ಏರಿಕೆ , ಬೆಳ್ಳಿ ಬೆಲೆಯೂ ಏರಿಕೆ

ದೇಶದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆಯಾಗಿ, ಒಂದು ಗ್ರಾಂ ಚಿನ್ನದ ಬೆಲೆ 3,753 ರೂ ಇದೆ. ಬೆಳ್ಳಿ ಬೆಲೆ ಕೆಜಿಗೆ 110 ರೂ ಏರಿಕೆಯಾಗಿ 48,950 ರೂ ದಾಖಲಾಗಿದೆ. ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.

Vijaya Karnataka Web 15 Nov 2019, 12:29 pm
ಬೆಂಗಳೂರು: ದೇಶದ ಇಂದಿನ ಚಿನ್ನದ ಬೆಲೆ 10 ಗ್ರಾಂಗೆ ಚಿನ್ನದ ಬೆಲೆಯು 37,160 ಇದ್ದು, ಬೆಳ್ಳಿ ಬೆಲೆಯು ಕೆಜಿ ಗೆ 48950 ಇದೆ.
Vijaya Karnataka Web today gold and silver price at bangalore 15th november 2019
ಶುಕ್ರವಾರದ ಚಿನ್ನದ ಬೆಲೆಯೂ ಏರಿಕೆ , ಬೆಳ್ಳಿ ಬೆಲೆಯೂ ಏರಿಕೆ


ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ 35,960 ಇದೆ. ಕೆಜಿ ಬೆಳ್ಳಿ ಬೆಲೆ 48950 ರೂ ಇದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ರಾಂ ಚಿನ್ನದ ಬೆಲೆ 1 ರೂ ಏರಿಕೆ ಕಂಡು ಕಂಡು 10 ಗ್ರಾಂಗೆ 37,410
ರೂಪಾಯಿ ಮತ್ತು ಒಂದು ಕೆ.ಜಿ. ಬೆಳ್ಳಿ ದರ 48950ರೂಪಾಯಿ ಇದೆ.

ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆ ಕಂಡು 37,530 ರೂಪಾಯಿ ದಾಖಲಾಗಿದೆ. ಮತ್ತು ಒಂದು ಕೆ.ಜಿ. ಬೆಳ್ಳಿ ದರ 48950 ರೂಪಾಯಿ ಇದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ?
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಗ್ರಾಂ ಗೆ 1 ರೂ ಏರಿಕೆ ಕಂಡು 10 ಗ್ರಾಂ ಆಭರಣದ ಬೆಲೆ 37,500 ರೂಪಾಯಿ ಮತ್ತು ಬೆಳ್ಳಿ ದರ 48950 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆಯಲ್ಲಿ ಗ್ರಾಂ ಗೆ 1 ರೂ ಏರಿಕೆಯಾಗಿ 36,630 ರೂ ಇದೆ ಒಂದು ಕೆ.ಜಿ. ಬೆಳ್ಳಿ ದರ 48950 ರೂಪಾಯಿ ಇದೆ.

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಇದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ