ಆ್ಯಪ್ನಗರ

ಚಿನ್ನದಲ್ಲಿ ಅಲ್ಪ, ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ

ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.

Agencies 6 Aug 2019, 3:29 pm
ಬೆಂಗಳೂರು: ಚಿನ್ನದ ದರದಲ್ಲಿ ಏರಿಳಿತ ಸಾಮಾನ್ಯ. ಒಂದು ದಿನ ಸ್ವಲ್ಪ ಇಳಿಕೆ ಕಂಡರೆ ಮತ್ತೊಂದು ದಿನ ರೂಪಾಯಿಗಳ ಲೆಕ್ಕದಲ್ಲಿ ಏರಿಕೆಯಾಗಿರುತ್ತದೆ. ಇಂದು ಹಳದಿ ಲೋಹ ಮತ್ತು ಬೆಳ್ಳಿ , ಎರಡು ಕೂಡ ಏರಿಕೆ ಕಂಡಿವೆ.
Vijaya Karnataka Web Gold price


22 ಕ್ಯಾರೆಟ್ ಚಿನ್ನದ ಬೆಲೆ ಸೋಮವಾರ 33,900ಕ್ಕೆ ಇತ್ತು. ಮತ್ತಿಂದು 34,150ಕ್ಕೆ ಏರಿಕೆಯಾಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 36,524 ರೂ ಇದೆ. ಬೆಳ್ಳಿ ಬೆಲೆ ಕೆಜಿಗೆ ₹ 40,800 ಇದಿದ್ದು, 45,700ಕ್ಕೇ ಏರಿದೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುಎಸ್ ಮತ್ತು ಇರಾನ್ ನಡುವಿನ ಮುಸುಕಿನ ಗುದ್ದಾಟ ಚಿನ್ನದ ಬೆಲೆಯಲ್ಲಿ ಏರುಪೇರಾಗಲು ಒಂದು ಕಾರಣವಾಗಿದೆ.

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ.

ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ