ಆ್ಯಪ್ನಗರ

ಇಳಿಕೆ ಕಂಡ ಚಿನ್ನದ ಬೆಲೆ , ಬೆಂಗಳೂರಿನಲ್ಲಿ ಗ್ರಾಂ ಚಿನ್ನಕ್ಕೆ 3,936ರೂ

ದೇಶದ ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆಸಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.

Vijaya Karnataka Web 14 Mar 2020, 2:06 pm
ಬೆಂಗಳೂರು: ಮಾರ್ಚ್ ತಿಂಗಳಲ್ಲಿ ಮತ್ತೆ ಚಿನ್ನದ ಬೆಲೆ ಅಲ್ಪ ಏರಿಕೆ ಹಾದಿಗೆ ತಿರುಗಿದೆ. ಶನಿವಾರ ಬೆಲೆಯಲ್ಲಿ 19 ರೂ ಇಳಿಕೆ ಕಂಡಿದ್ದು, ದೇಶದ 1 ಗ್ರಾಂ ಚಿನ್ನದ ಬೆಲೆ , 4,121ರೂ. ಆಗಿದೆ. ಇನ್ನು, ಬೆಂಗಳೂರಿನಲ್ಲಿ ಗ್ರಾಂ ಚಿನ್ನದ ದರ 3,936ರೂ. ಆಗುವ ಮೂಲಕ ಅಲ್ಪ ಏರಿಕೆ ಕಂಡಿದೆ. ಇದೇ ರೀತಿ ಕೆಜಿ ಬೆಳ್ಳಿ ಬೆಲೆ 40,950 ರೂ ದಾಖಲಾಗಿದೆ.
Vijaya Karnataka Web jewellery


ರಾಜಧಾನಿ ದಿಲ್ಲಿಯಲ್ಲಿ ಶುದ್ಧ ಚಿನ್ನದ ದರವು 10 ಗ್ರಾಮ್‌ಗೆ 41,060 ರೂ. ಮುಟ್ಟಿದೆ. ಬೆಳ್ಳಿ ದರವು 49,950 ರೂ.ಗೆ ತಲುಪಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 39,360 ರೂ. ದಾಖಲಾಗಿದೆ. ಇನ್ನು, ಇದೇ ರೀತಿ 1 ಕೆಜಿ ಬೆಳ್ಳಿ ಬೆಲೆ 49,950 ರೂ. ಆಗಿದೆ.

ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 41,210 ರೂಪಾಯಿ ದಾಖಲಾಗಿದೆ. ಇನ್ನು, ಒಂದು ಕೆ.ಜಿ. ಬೆಳ್ಳಿ ದರ 49,950ರೂಪಾಯಿ ಇದೆ.

ದೇಶದ ಇತರೆ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ?
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಇಂದು 10 ಗ್ರಾಂ ಆಭರಣದ ಬೆಲೆ 41,320 ರೂಪಾಯಿ ದಾಖಲಾಗಿದೆ. ಬೆಳ್ಳಿ ದರ 49,950 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ 10 ಗ್ರಾಂಗೆ 40,130ರೂ ದಾಖಲಾಗಿದೆ. ಒಂದು ಕೆ.ಜಿ. ಬೆಳ್ಳಿ ದರ 49,950 ರೂಪಾಯಿ ಇದೆ.

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಇದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ