ಆ್ಯಪ್ನಗರ

ಮತ್ತೆ ಏರಿದ ಚಿನ್ನದ ಬೆಲೆ! ಬೆಂಗಳೂರಿನಲ್ಲಿ ಇಂದು ಬಂಗಾರದ ಬೆಲೆ ಎಷ್ಟಿದೆ?

ದೇಶದ ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆಸಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.

Vijaya Karnataka Web 25 Jan 2020, 10:54 am
ಬೆಂಗಳೂರು: ದೇಶದ ಚಿನ್ನ, ಬೆಳ್ಳಿ ದರ ಮತ್ತೆ ಏರಿಕೆಯತ್ತ ಮುಖಮಾಡಿದೆ. ಶುಕ್ರವಾರ ದೇಶದ ಗ್ರಾಂ ಚಿನ್ನಕ್ಕೆ 3,930 ಇದ್ದರೆ. ಬೆಂಗಳೂರಿನಲ್ಲಿ ಗ್ರಾಂ ಚಿನ್ನಕ್ಕೆ 40 ರೂ ಏರಿಕೆಯಾಗಿ 3,756 ರೂ ದಾಖಲಾಗಿದೆ. ಅದೇ ರೀತಿ ಕೆಜಿ ಬೆಳ್ಳಿ ಬೆಲೆ 49,060 ರೂ ದಾಖಲಾಗಿದೆ.
Vijaya Karnataka Web today gold and silver price at bengaluru 25th january 2020
ಮತ್ತೆ ಏರಿದ ಚಿನ್ನದ ಬೆಲೆ! ಬೆಂಗಳೂರಿನಲ್ಲಿ ಇಂದು ಬಂಗಾರದ ಬೆಲೆ ಎಷ್ಟಿದೆ?


ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಏರಿಕೆ ಕಂಡು 37,560 ರೂ. ಇದೆ. ಇನ್ನು, ಇದೇ ರೀತಿ 1 ಕೆಜಿ ಬೆಳ್ಳಿ ಬೆಲೆ 49,060 ರೂ. ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 39,010 ರೂಪಾಯಿ ತಲುಪಿದೆ. ಒಂದು ಕೆ.ಜಿ. ಬೆಳ್ಳಿ ದರ 49,060 ರೂಪಾಯಿ ಇದೆ.

ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 39,300 ರೂಪಾಯಿ ದಾಖಲಾಗಿದೆ. ಇನ್ನು, ಒಂದು ಕೆ.ಜಿ. ಬೆಳ್ಳಿ ದರ 49,060ರೂಪಾಯಿ ಇದೆ.

ದೇಶದ ಇತರೆ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ?
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಇಂದು 10 ಗ್ರಾಂ ಆಭರಣದ ಬೆಲೆ 39,470 ರೂಪಾಯಿ ಮತ್ತು ಬೆಳ್ಳಿ ದರ 49,060 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ 10 ಗ್ರಾಂಗೆ 38,200 ರೂ ದಾಖಲಾಗಿದ್ದರೆ ಒಂದು ಕೆ.ಜಿ. ಬೆಳ್ಳಿ ದರ 49,060 ರೂಪಾಯಿ ಇದೆ.

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಇದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ