ಆ್ಯಪ್ನಗರ

ಆರೋಗ್ಯ ವಿಮೆ ಖರೀದಿಸಿ ತೆರಿಗೆ ಉಳಿಸುವುದು ಹೇಗೆ?

ಆರೋಗ್ಯ ವಿಮೆ ಹೆಸರಿನಲ್ಲಿ ಕಟ್ಟುವ ಪ್ರೀಮಿಯಂಗಳು ಭವಿಷ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಸಹಾಯಕ್ಕೆ ಬರುತ್ತವೆ ಜತೆಗೆ ಆದಾಯ ತೆರಿಗೆಗೆ ವಿನಾಯಿತಿಯೂ ಸಿಗುತ್ತದೆ. ಈ ಪಾಲಿಸಿಗಳಿಗೆ ಕಟ್ಟುವ ಪ್ರೀಮಿಯಂಗಳನ್ನು ತೋರಿಸಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

Vijaya Karnataka 24 Feb 2019, 3:09 pm
ಯಾವುದೇ ತಜ್ಞರನ್ನು ಭೇಟಿ ಮಾಡಿದರೂ ಅವರು ನೀಡುವ ಸಲಹೆ ಆರೋಗ್ಯ ವಿಮೆಯನ್ನು ತಪ್ಪದೇ ಮಾಡಿಸಿ ಎಂದು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅಗತ್ಯವಿರುವಷ್ಟು ಮೊತ್ತದ ಆರೋಗ್ಯ ವಿಮೆಯನ್ನು ಮಾಡಿಸುವುದು ಉತ್ತಮ.
Vijaya Karnataka Web Health Insurnce


ಆರೋಗ್ಯ ವಿಮೆ ಎಂದರೆ ರೋಗ ಎದುರಾದಾಗ ಪರಿಹಾರ ಪಡೆಯುವುದು ಎಂದರ್ಥವಲ್ಲ. ವಿಮೆದಾರರು ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲೂ ವಿಮೆ ಕಂಪನಿಗಳು ಅವಕಾಶ ನೀಡುತ್ತವೆ. ನಿಯಮಿತ ತಪಾಸಣೆಗಳ ಮೂಲಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ. 5,000 ರೂಪಾಯಿ ವರೆಗಿನ ಆರೋಗ್ಯ ತಪಾಸಣೆಗಳು ವಿಮೆದಾರರಿಗೆ ಉಚಿತವಾಗಿ ಲಭ್ಯ, ಪಾವತಿಸುವ ಪ್ರೀಮಿಯಂಗೆ ತಕ್ಕಂತೆ ತಪಾಸಣೆ ಶುಲ್ಕಗಳು ವ್ಯತ್ಯಾಸವಾಗುತ್ತವೆ. ನೀವು 20,000 ರೂ. ವಿಮೆ ಮಾಡಿಸಿದ್ದರೆ, 5,000 ರೂ. ಮೊತ್ತದ ಹೆಲ್ತ್‌ ಚೆಕಪ್‌ ಉಚಿತ.

ಆರೋಗ್ಯ ವಿಮೆಯಲ್ಲಿ ಮೆಡಿಕ್ಲೇಮ್‌, ಫ್ಯಾಮಿಲಿ ಫ್ಲಾಟರ್‌ ಸೇರಿದಂತೆ ಹತ್ತಾರು ಬಗೆ ಇವೆ. ನಷ್ಟ ಪರಿಹಾರ ಮತ್ತು ವ್ಯಾಖ್ಯಾನಿತ ಅನುಕಾಲಗಳಿಗೆ ಸಂಬಂಧಿಸಿದ ಪಾಲಿಸಿಗಳಿವೆ. ಅದೂ ಏನೇ ಇರಲಿ. ಈ ಪಾಲಿಸಿಗಳಿಗೆ ಕಟ್ಟುವ ಪ್ರೀಮಿಯಂಗಳನ್ನು ತೋರಿಸಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ಆನ್‌ಲೈನ್‌ ಪಾವತಿಯೇ ಉತ್ತಮ: ನೀವು ಆರೋಗ್ಯ ವಿಮೆ ಪ್ರೀಮಿಯಂ ಅನ್ನು ನಗದಾಗಿ ಪಾವತಿಸಬಹುದು. ಆಧರೆ, ಅದಕ್ಕೆ ತೆರಿಗೆ ವಿನಾಯಿತಿ ಪಡೆಯಲು ಆದಾಯ ತೆರಿಗೆ ನಿಯಮಗಳು ಅವಕಾಶ ನೀಡುವುದಿಲ್ಲ. ಹೀಗಾಗಿ, ನಗದು ಪಾವತಿಗಿಂತಲೂ ಆನ್‌ಲೈನ್‌ ಪಾವತಿಯೇ ಉತ್ತಮ.

60 ವರ್ಷವಾಗಿದ್ದರೆ, 1 ಲಕ್ಷ ರೂ. ತನಕ ತೆರಿಗೆ ವಿನಾಯಿತಿ
  • ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಡಿ ಅಡಿಯಲ್ಲಿ ಆರೋಗ್ಯ ವಿಮೆ ಪ್ರೀಮಿಯಂ ಅನ್ನು ತೋರಿಸಿ ವಿನಾಯಿತಿ ಪಡೆಯಬಹುದು. ವೈಯಕ್ತಿಕವಾಗಿ, ಸಂಗಾತಿ, ಮಕ್ಕಳು ಮತ್ತು ಪೋಷಕರ ಆರೋಗ್ಯ ವಿಮೆಗೆ ಪಾವತಿಸುವ ಪ್ರೀಮಿಯಂ ನಿಮ್ಮ ತೆರಿಗೆ ವಿನಾಯಿತಿ ವ್ಯಾಪ್ತಿಗೆ ಬರುತ್ತದೆ. ಮಕ್ಕಳು, ಪೋಷಕರು ಸ್ವಾವಲಂಬಿಗಳೇ ಅಥವಾ ನಿಮ್ಮನ್ನು ಅವಲಂಬಿಸಿದ್ದಾರೆಯೇ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ.
  • ವಾರ್ಷಿಕ ಗರಿಷ್ಠ 25,000 ರೂ. ತನಕ ಹೆಲ್ತ್‌ ಇನ್ಷೂರೆನ್ಸ್‌ ಪ್ರೀಮಿಯಂ ಅನ್ನು ತೋರಿಸಿ ತೆರಿಗೆ ವಿನಾಯಿತಿ ಪಡೆಯಬಹುದು. ಒಂದು ವೇಳೆ ಪೋಷಕರು 60 ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದರೆ, ತೆರಿಗೆ ವಿನಾಯಿತಿ ಮೊತ್ತ ಏರಿಕೆಯಾಗುತ್ತದೆ. ನೀವು ಅವರ ಪ್ರೀಮಿಯಂಗೆ ಸಂಬಂಧಿಸಿದಂತೆ ಗರಿಷ್ಠ 50,000 ರೂ. ತನಕ ತೆರಿಗೆ ವಿನಾಯಿತಿ ಪಡೆಯಬಹುದುಯ
  • ತೆರಿಗೆದಾರನು 60 ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದು, ತಮ್ಮ ಪೋಷಕರಿಗೆ ಆರೋಗ್ಯ ವಿಮೆಯ ಪ್ರೀಮಿಯಂ ಪಾವತಿಸಿದರೆ, ಸೆಕ್ಷನ್‌ 80ಡಿ ಅನ್ವಯ 1 ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ