ಆ್ಯಪ್ನಗರ

ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದರೆ ಏನು ಮಾಡಬೇಕು?

ಆದಾಯ ತೆರಿಗೆ ಕಾಯಿದೆಯಲ್ಲಿನ ಸೆಕ್ಷನ್ 143(1)(a) ಪ್ರಕಾರ ನಿಮಗೆ ನೋಟಿಸ್ ಬಂದಿದೆಯೇ? ಆದಾಯ ತೆರಿಗೆ ಕಾಯಿದೆಯ ಇತ್ತೀಚೆಗಿನ ತಿದ್ದುಪಡಿ ಪ್ರಕಾರ 143(1)(a) ಎಂಬ ಹೊಸ ಸೆಕ್ಷನ್ ಜಾರಿಗೊಳಿಸಿದೆ.

TNN 20 Jul 2018, 6:44 pm
ಆದಾಯ ತೆರಿಗೆ ಕಾಯಿದೆಯಲ್ಲಿನ ಸೆಕ್ಷನ್ 143(1)(a) ಪ್ರಕಾರ ನಿಮಗೆ ನೋಟಿಸ್ ಬಂದಿದೆಯೇ? ಆದಾಯ ತೆರಿಗೆ ಕಾಯಿದೆಯ ಇತ್ತೀಚೆಗಿನ ತಿದ್ದುಪಡಿ ಪ್ರಕಾರ 143(1)(a) ಎಂಬ ಹೊಸ ಸೆಕ್ಷನ್ ಜಾರಿಗೊಳಿಸಿದೆ. ಇದರ ಪ್ರಕಾರ 2018-19ನೇ ಹಣಕಾಸು ವರ್ಷದ ಐಟಿ ರಿಟರ್ನ್ಸ್‌ಗೆ ಈ ನಿಯಮ ಅನ್ವಯಿಸುತ್ತದೆ. ಈ ನೋಟಿಸ್‌ಗೆ 30 ದಿನಗಳ ಒಳಗೆ ಉತ್ತರ ನೀಡಬೇಕಾಗುತ್ತದೆ. ಆ ನೋಟಿಸ್ ಯಾಕೆ ಬಂತು ಎಂಬುದನ್ನು ಈಗ ನೋಡೋಣ.
Vijaya Karnataka Web income-tax


ಈ ನೋಟಿಸ್ ಯಾವಾಗ ಜಾರಿಯಾಗುತ್ತದೆ?
ಆದಾಯ ತೆರಿಗೆ ಕಾಯಿದೆ 1961 ಸೆಕ್ಷನ್ 143(1)(a) ಪ್ರಕಾರ ನಿಮಗೆ ನೋಟಿಸ್ ಬಂದಿದೆ ಎಂದರೆ ನೀವು ಐಟಿ ರಿಟರ್ನ್ಸ್ ಸಮಯದಲ್ಲಿ ಏನೋ ತಪ್ಪು ಮಾಡಿದ್ದೀರಿ ಎಂದರ್ಥ. ತಪ್ಪಾಗಿ ರಿಟರ್ನ್ಸ್ ಸಲ್ಲಿಸಿದ್ದರೂ, ವಿನಾಯಿತಿ, ಕಡಿತದ ವಿವರಗಳನ್ನು ತಪ್ಪಾಗಿ ನೀಡಿದ್ದರೂ ಈ ಸೆಕ್ಷನ್ ಪ್ರಕಾರ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುತ್ತದೆ.

  • ಫಾರಂ 16, ಫಾರಂ 16A, ಫಾರಂ 26ASನಲ್ಲಿ ಇರುವ ಆದಾಯ, ನೀವು ರಿಟರ್ನ್ ಸಮಯದಲ್ಲಿ ಘೋಷಿಸಿರುವ ಆದಾಯದಲ್ಲಿ ವ್ಯತ್ಯಾಸ ಇದ್ದರೆ ಈ ನೋಟಿಸ್ ಕಳುಹಿಸಲಾಗುತ್ತದೆ.
  • ವ್ಯಾಪಾರ ಅಥವಾ ವೃತ್ತಿ ಮೂಲಕ ಬರುವ ಆದಾಯದ ವಿಷಯದಲ್ಲಿ ಫಾರಂನಲ್ಲಿ ತೋರಿಸುವುದು ತಾಳೆಯಾಗದಿದ್ದರೆ.
  • ಲಾಭ ನಷ್ಟಗಳಲ್ಲಿ ಏನಾದರೂ ವ್ಯತ್ಯಾಸ ಇದ್ದರೆ.
  • ಐಟಿಆರ್ ಸಲ್ಲಿಸುವ ಸಮಯದಲ್ಲಿ ಮಾಡಿರುವ ಕ್ಲೇಮ್‌ಗಳು ಫಾರಂ 16ರಲ್ಲಿ ಇಲ್ಲದಿದ್ದರೆ.
  • ಕಳೆದ ವರ್ಷಕ್ಕೆ ಸಂಬಂಧಿಸಿದ ಆದಾಯ, ಟಿಡಿಎಸ್ ಕ್ಲೇಮ್‌ಗಳಂತಹ ವಿಷಯಗಳಲ್ಲಿ ಸಹ ನೋಟಿಸ್ ಕಳುಹಿಸಲಾಗುತ್ತದೆ.
ನೋಟಿಸ್ ಬಂದರೆ ಏನು ಮಾಡಬೇಕು?
  • ಆನ್‍ಲೈನ್ ಮೂಲಕ ಆದಾಯ ತೆರಿಗೆ ಇಲಾಖೆಗೆ ನಿಮಗೆ ಬಂದ ನೋಟಿಸ್‌ಗೆ ಉತ್ತರ ನೀಡಬಹುದು.
  • ಫಾರಂ 16A, 26AS ಫಾರಂ, ನೋಟಿಸ್ ಕಳುಹಿಸಿರುವ ಕಾರಣಗಳನ್ನು ಮೊದಲು ತಿಳಿದುಕೊಳ್ಳುವುದು ಅಗತ್ಯ.
  • ಅದಕ್ಕೆ 'e-Proceeding’ ಸೆಕ್ಷನ್‌ಗೆ ಹೋಗಿ 'e-Assessment' ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು.
  • ‘adjustments under section 143(1)(a)’ ಮೇಲೆ ಕ್ಲಿಕ್ ಮಾಡಬೇಕು.
  • ಅಲ್ಲಿ ನೀವು ಬದಲಾವಣೆಗಳನ್ನು ಮಾಡಲು ಅಂಗೀಕರಿಸಬೇಕು.
  • ಬಳಿಕ ತಿದ್ದುಪಡಿ ಮಾಡುವುದೋ ಅಥವಾ ರಿಟರ್ನ್‌ನಲ್ಲಿ ಏನಾದರೂ ತಪ್ಪಾಗಿದ್ದರೆ ಉಳಿದ ತೆರಿಗೆಯನ್ನು ಕಟ್ಟಲು ಅಂಗೀಕರಿಸುತ್ತೀರಾ ಇಲ್ಲವೆ ತಿಳಿಸಬೇಕು.
  • ಅಂಗೀಕರಿಸದಿದ್ದರೆ ಯಾಕೆ ಎಂಬುದಕ್ಕೆ ಕಾರಣ ನೀಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ