ಆ್ಯಪ್ನಗರ

ಇಂದು ಆದಾಯ ತೆರಿಗೆ ದಿನ

ಮದರ್ಸ್‌ ಡೇ, ಫಾದರ್ಸ್‌ ಡೇ, ಪ್ರೇಮಿಗಳ ದಿನ ಸೇರಿದಂತೆ ನಾನಾ ದಿನಗಳನ್ನು ನಾವು ಕೇಳಿದ್ದೇವೆ. ಪ್ರತಿಯೊಂದು ದಿನವೂ ವಿಶೇಷ ಸಂಬಂಧಗಳನ್ನು ಸಂಭ್ರಮಿಸುವಂಥ ಉದ್ದೇಶಗಳನ್ನು ಹೊಂದಿವೆ. ಈ ದಿವಸಗಳ ಮಧ್ಯೆ, ಏನಿದು 'ಆದಾಯ ತೆರಿಗೆ ದಿನ'? ಅನೇಕ ನಾಗರಿಕರು ತೆರಿಗೆ ಪಾವತಿಸುತ್ತಾರೆ, ಇನ್ನೂ ಕೆಲವರು ಒಲ್ಲದ ಮನಸ್ಸಿನಿಂದಲೇ ತೆರಿಗೆ ಕಟ್ಟುತ್ತಾರೆ.

Vijaya Karnataka Web 24 Jul 2018, 6:30 am
ಬೆಂಗಳೂರು: ಮದರ್ಸ್‌ ಡೇ, ಫಾದರ್ಸ್‌ ಡೇ, ಪ್ರೇಮಿಗಳ ದಿನ ಸೇರಿದಂತೆ ನಾನಾ ದಿನಗಳನ್ನು ನಾವು ಕೇಳಿದ್ದೇವೆ. ಪ್ರತಿಯೊಂದು ದಿನವೂ ವಿಶೇಷ ಸಂಬಂಧಗಳನ್ನು ಸಂಭ್ರಮಿಸುವಂಥ ಉದ್ದೇಶಗಳನ್ನು ಹೊಂದಿವೆ. ಈ ದಿವಸಗಳ ಮಧ್ಯೆ, ಏನಿದು 'ಆದಾಯ ತೆರಿಗೆ ದಿನ'? ಅನೇಕ ನಾಗರಿಕರು ತೆರಿಗೆ ಪಾವತಿಸುತ್ತಾರೆ, ಇನ್ನೂ ಕೆಲವರು ಒಲ್ಲದ ಮನಸ್ಸಿನಿಂದಲೇ ತೆರಿಗೆ ಕಟ್ಟುತ್ತಾರೆ. ಆದಾಯ ತೆರಿಗೆ ಅಂದರೆ ಇಷ್ಟು ಮಾತ್ರವಲ್ಲ. ವಿಶ್ವದೆಲ್ಲೆಡೆ ಆದಾಯ ತೆರಿಗೆ ದಿನವನ್ನು 'ತೆರಿಗೆ ದಿನ'(ಟ್ಯಾಕ್ಸ್‌ ಡೇ), 'ತೆರಿಗೆ ಸ್ವಾತಂತ್ರ್ಯದ ದಿನ' ಹೆಸರುಗಳಿಂದ ಆಚರಿಸುತ್ತಾರೆ.
Vijaya Karnataka Web Income tAX


ಆಸಕ್ತಿಯ ವಿಷಯವೆಂದರೆ ಜು. 23ರಂದು ಪ್ರಥಮ ಏಕಾದಶಿ ಬಂದಿದೆ. ಜು. 24ರಂದು ಆದಾಯ ತೆರಿಗೆ ದಿನ, ಜು. 27ರಂದು ಚಂದ್ರ ಗ್ರಹಣ ಬಂದಿದೆ. ಎಲ್ಲವೂ ಆಷಾಡ ಮಾಸದಲ್ಲಿಯೇ ಬಂದಿವೆ. ಈ ಆಷಾಡ ಮಾಸವನ್ನು ಶುಭ ಕೆಲಸ, ಹೊಸ ಯೋಜನೆಗಳ ಆರಂಭಕ್ಕೆ ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ.

ಇದನ್ನು ತೆರಿಗೆಗೆ ಹೊಂದಿಸಿ ಹೇಳುವುದಾದರೆ, ಏಕಾದಶಿಯಂದು ವ್ಯಕ್ತಿ ಉಪವಾಸ ಮಾಡದೇ ಹೋದರೆ ಮತ್ತು ಆದಾಯ ತೆರಿಗೆ ದಿನದಂದು ಸರಿಯಾದ ತೆರಿಗೆ ಪಾವತಿಸದೇ ಹೋದರೆ, ಮುಂದೆ ಗ್ರಹಣವೆನ್ನುವುದು ಕೆಟ್ಟ ಪ್ರಭಾವವನ್ನು ತೋರುತ್ತದೆ. ತಕ್ಷಣದಲ್ಲಿ ಅಥವಾ ಮುಂದಿನ ದಿನಗಳಲ್ಲಿ ಅದರ ಅಡ್ಡ ಪರಿಣಾಮಗಳು ಖಚಿತ!!

1860ರ ಜು. 24ರಂದು ಮೊದಲ ಆದಾಯ ತೆರಿಗೆ ದಿನವನ್ನು ಆಚರಿಸಲಾಯಿತು. ಭಾರತದ ಹಣಕಾಸು ಮಂಡಳಿಯ ಮೊದಲ ಸದಸ್ಯ ಜೇಮ್ಸ್‌ ವಿಲ್ಸನ್‌ ಪರಿಚಯಿಸಿದ ದಿನವಿದು. ನಮ್ಮ ಆದಾಯ ತೆರಿಗೆ ಪದ್ಧತಿಗೆ 2018ಕ್ಕೆ 158 ವರ್ಷಗಳಾಗಿದ್ದು, 2010ರಿಂದ ತೆರಿಗೆ ಇಲಾಖೆಯು ಜು. 24 ಅನ್ನು ಆದಾಯ ತೆರಿಗೆ ದಿನವಾಗಿ ಪ್ರತಿ ವರ್ಷ ಆಚರಿಸುತ್ತಾ ಬಂದಿದೆ.

ಸಾರ್ವಜನಿಕರಲ್ಲಿ ತೆರಿಗೆ ಬಗ್ಗೆ ಜಾಗೃತಿ ಮೂಡಿಸುವುದು, ತೆರಿಗೆ ಪಾವತಿಯಿಂದ ದೇಶಕ್ಕೆ ಆಗುವ ಪ್ರಯೋಜನಗಳನ್ನು ವಿವರಿಸುವುದು ಈ ದಿನದ ವಿಶೇಷ. ನಮ್ಮ ದೇಶದ ಜನಸಂಖ್ಯೆಗೆ ಹೋಲಿಸಿದರೆ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಶೇ.3.5 ಮಾತ್ರ. ಹೆಚ್ಚಿನ ಮೊತ್ತದ ತೆರಿಗೆ ಪಾವತಿದಾರರ ಸಂಖ್ಯೆಯೂ ಕಡಿಮೆ. 2017-18ನೇ ಹಣಕಾಸು ವರ್ಷದಲ್ಲಿ 10.2 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ.

ಜು. 31 ಐಟಿಆರ್‌ ಸಲ್ಲಿಕೆಗೆ ಕಡೆಯ ದಿನ. ಅದನ್ನು ನೆನಪಿಸುವಂತೆಯೇ ಆದಾಯ ತೆರಿಗೆ ದಿನವೂ ಬಂದಿದೆ.
-ಸಿಎ ಎನ್‌. ನಿತ್ಯಾನಂದ, ಚಾರ್ಟರ್ಡ್‌ ಅಕೌಂಟೆಂಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ