ಆ್ಯಪ್ನಗರ

GST ಅಡಿ TDS, TCS ಅವಕಾಶ; ಅಕ್ಟೋಬರ್ 1ರಿಂದ ಜಾರಿ

ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಕಂಪೆನಿಗಳನ್ನು ಟಿಡಿಎಸ್ ಮತ್ತು ಟಿಸಿಎಸ್ ವ್ಯಾಪ್ತಿಗೆ ತರಲು ಸರಕಾರ ಸೂಚಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಕಾನೂನಿನಡಿ ಮೂಲದಲ್ಲೇ ತೆರಿಗೆ ಕಡಿತ (TDS) ಮತ್ತು ಮೂಲದಲ್ಲೇ ತೆರಿಗೆ ಸಂಗ್ರಹ (TCS) ಅವಕಾಶಗಳನ್ನು ಅಕ್ಟೋಬರ್ 1ರಿಂದ ಕಾರ್ಯಗತಗೊಳಿಸಲು ಸರಕಾರ ಸೂಚಿಸಿದೆ.

TIMESOFINDIA.COM 14 Sep 2018, 3:05 pm
ಹೊಸದಿಲ್ಲಿ: ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಕಂಪೆನಿಗಳ ಪೂರೈಕೆದಾರರನ್ನು ಟಿಡಿಎಸ್ ಮತ್ತು ಟಿಸಿಎಸ್ ವ್ಯಾಪ್ತಿಗೆ ತರಲಾಗಿದ್ದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಕಾನೂನಿನಡಿ ಮೂಲದಲ್ಲೇ ತೆರಿಗೆ ಕಡಿತ (TDS) ಮತ್ತು ಮೂಲದಲ್ಲೇ ತೆರಿಗೆ ಸಂಗ್ರಹ (TCS) ಅವಕಾಶಗಳನ್ನು ಅಕ್ಟೋಬರ್ 1ರಿಂದ ಕಾರ್ಯಗತಗೊಳಿಸಲು ಸರಕಾರ ಸೂಚಿಸಿದೆ.
Vijaya Karnataka Web gst1


ಸಾಮಾನ್ಯ ಜಿಎಸ್‍ಟಿ (CGST) ಕಾಯಿದೆ ಪ್ರಕಾರ, ಸೂಚಿತ ಘಟಕಗಳ 2.5 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಪಾವತಿಗಳಿಗೆ ಸರಕು ಮತ್ತು ಸೇವಾ ಪೂರೈಕೆದಾರರು ಶೇ.1ರಷ್ಟು , ರಾಜ್ಯ ಕಾನೂನಿನಡಿ ಶೇ.1ರಷ್ಟು ತೆರಿಗೆ ವಸೂಲಿ ಮಾಡಿ ಟಿಡಿಎಸ್ ಸಂಗ್ರಹಿಸಲು ಸೂಚಿಸಿದೆ.

ಇದೀಗ ಇ-ಕಾಮರ್ಸ್ ಕಂಪೆನಿಗಳನ್ನೂ ಈ ಕಾನೂನಿನಡಿ ತರಲಾಗಿದ್ದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಡಿ ಪೂರೈಕೆದಾರರಿಂದ ಶೇ.1ರಷ್ಟು ಟಿಸಿಎಸ್ ಸಂಗ್ರಹಿಸಬಹುದು. ರಾಜ್ಯ ಸರಕಾರಗಳು ಸಹ ಎಸ್‌ಜಿಎಸ್‌ಟಿ ಅಡಿ ಶೇ.1ರಷ್ಟು ತೆರಿಗೆ ವಿಧಿಸಬಹುದಾಗಿದೆ.

ಅಕ್ಟೋಬರ್ 1ರಿಂದ ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಕಂಪೆನಿಗಳ ಮೂಲಕ ಮಾರಾಟ ಮಾಡುವ ಪೂರೈಕೆದಾರರು ಟಿಸಿಎಸ್ ಮತ್ತು ಟಿಡಿಎಸ್ ಸಲ್ಲಿಸಬೇಕಾಗುತ್ತದೆ.

"ಈ ಹೊಸ ನಿಯಮ ಗ್ರಾಹಕರ ಮೇಲೆ ಅಷ್ಟಾಗಿ ಪರಿಣಾಮ ಬೀರಲ್ಲ. ಆದರೆ, ಇ-ಕಾಮರ್ಸ್ ಪೂರೈಕೆದಾರರು ಮತ್ತು ಇ-ಕಾಮರ್ಸ್ ಆಪರೇಟರ್‌ಗಳ ಮೇಲೆ ಪರಿಣಾಮ ಬೀರಲಿದೆ" ಎಂದಿದ್ದಾರೆ ತಜ್ಞರು.

ಅಕ್ಟೋಬರ್ 1ರ ವೇಳೆಗೆ ಟಿಸಿಎಸ್‌ಗಾಗಿ ಇ-ಕಾಮರ್ಸ್ ಕಂಪೆನಿಗಳು ಮತ್ತು ಟಿಡಿಎಸ್‍ಗಾಗಿ ಸರಕಾರಿ ಸ್ವಾಮ್ಯದ ಉದ್ದಿಮೆಗಳು (ಪಿಎಸ್‌ಯು) ತಮ್ಮ ಇಆರ್‌ಪಿ ವ್ಯವಸ್ಥೆ ಹೊಂದಾಣಿಕೆ ಆಗುವಂತೆ ಶೀಘ್ರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಈಗ ನೀಡಿರುವ ಅತ್ಯಂತ ಕಡಿಮೆ ಸಮಯದಲ್ಲಿ ಉದ್ದಿಮೆಗಳು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ" ಎಂದಿದ್ದಾರೆ ಕನ್ಸಲ್ಟೆನ್ಸಿ ಸಂಸ್ಥೆ ಇವೈ ತೆರಿಗೆ ಪಾಲುದಾರರಾದ ಅಭಿಷೇಕ್ ಜೈನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ