ಆ್ಯಪ್ನಗರ

ಇದು 37 ಶಾಸಕರ ಬಜೆಟ್: ಅನಂತ ಕುಮಾರ್

ಸಮಗ್ರ ಕರ್ನಾಟಕ ರಾಜ್ಯದ ಬಗ್ಗೆ ಯಾವುದೇ ಕಾಳಜಿ ತೋರಿಸದೇ ಇರುವ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಕೇವಲ ಜೆಡಿಎಸ್‌ ಬೆಂಬಲಿತ ಜಿಲ್ಲೆಗಳಿಗೆ ಮುತುವರ್ಜಿ ತೋರಿಸುವ ಮೂಲಕ ರಾಜಕೀಯ ಪ್ರೇರಿತ ಮುಂಗಡಪತ್ರ ಮಂಡಿಸಿದ್ದಾರೆ. ಮುಂಗಡಪತ್ರದ ಗುರಿ ರಾಜ್ಯದ ಆರೂವರೆ ಕೋಟಿ ಜನರ ಅಭಿವೃದ್ದಿ ಮತ್ತು ಏಳಿಗೆ ಆಗದೆ ಕೇವಲ 37 ಶಾಸಕರ ಒತ್ತಾಸೆಯಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka 6 Jul 2018, 8:16 am
ಬೆಂಗಳೂರು: ಸಮಗ್ರ ಕರ್ನಾಟಕ ರಾಜ್ಯದ ಬಗ್ಗೆ ಯಾವುದೇ ಕಾಳಜಿ ತೋರಿಸದೇ ಇರುವ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಕೇವಲ ಜೆಡಿಎಸ್‌ ಬೆಂಬಲಿತ ಜಿಲ್ಲೆಗಳಿಗೆ ಮುತುವರ್ಜಿ ತೋರಿಸುವ ಮೂಲಕ ರಾಜಕೀಯ ಪ್ರೇರಿತ ಮುಂಗಡಪತ್ರ ಮಂಡಿಸಿದ್ದಾರೆ. ಮುಂಗಡಪತ್ರದ ಗುರಿ ರಾಜ್ಯದ ಆರೂವರೆ ಕೋಟಿ ಜನರ ಅಭಿವೃದ್ದಿ ಮತ್ತು ಏಳಿಗೆ ಆಗದೆ ಕೇವಲ 37 ಶಾಸಕರ ಒತ್ತಾಸೆಯಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.
Vijaya Karnataka Web ananth kumar


''ವಿದ್ಯುತ್‌, ಡೀಸೆಲ್‌ ಮತ್ತು ಪೆಟ್ರೋಲ್‌ ಮೇಲಿನ ತೆರಿಗೆ ಹೆಚ್ಚಳ ಮಾಡುವುದರ ಮೂಲಕ ಜನ ಸಾಮಾನ್ಯರ ಹೊರೆ ಹೆಚ್ಚಿಸಲಾಗಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿ ರೈತರ ಕಣ್ಣೊರೆಸುವ ತಂತ್ರ ಅನುಸರಿಸಿದ್ದಾರೆ. ನಾಲ್ಕು ವರ್ಷಗಳ ಕಾಲ ಸರಕಾರ ಉಳಿಯುವ ಭರವಸೆಯೇ ಇಲ್ಲದಿರುವಾಗ, ನಾಲ್ಕು ವರ್ಷಗಳಲ್ಲಿ ಸಾಲಮನ್ನಾದ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡುವುದಾಗಿ ಹೇಳಿದ್ದಾರೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗ, ಮಲೆನಾಡು ಭಾಗದ ಜನತೆಗೆ ಯಾವುದೇ ಯೋಜನೆಗಳನ್ನು ಘೋಷಿಸದೆ ನಿರ್ಲಕ್ಷಿಸಲಾಗಿದೆ,'' ಎಂದು ಟೀಕಿಸಿದ್ದಾರೆ.

''ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತ ಬಲವರ್ಧನೆ ಹಾಗೂ ಎಸಿಬಿ ರದ್ದು ಮಾಡುವುದಾಗಿ ಸ್ವತಃ ತಾವೇ ನೀಡಿದ್ದ ಭರವಸೆಯನ್ನು ತಳ್ಳಿ ಹಾಕುವ ಮೂಲಕ ಮುಖ್ಯಮಂತ್ರಿ ಜಾಣ ಮರೆವು ಪ್ರದರ್ಶಿಸಿದ್ದಾರೆ,'' ಎಂದು ಅನಂತ್‌ ಕುಮಾರ್‌ ವ್ಯಂಗ್ಯವಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ