Please enable javascript.ಬಜೆಟ್‌ ಕುರಿತು ಗರಿಗೆದರಿದ ಕಲ್ಯಾಣದ ನಿರೀಕ್ಷೆ, ಪಕ್ಷ ನೀಡಿದ ವಗ್ದಾನ ಈಡೇರುತ್ತಾ? - expectations of kalyana karnataka given about the budget will the promise given by the party be fulfilled - Vijay Karnataka

ಬಜೆಟ್‌ ಕುರಿತು ಗರಿಗೆದರಿದ ಕಲ್ಯಾಣದ ನಿರೀಕ್ಷೆ, ಪಕ್ಷ ನೀಡಿದ ವಗ್ದಾನ ಈಡೇರುತ್ತಾ?

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 7 Jul 2023, 10:42 am
Subscribe

ಚುನಾವಣಾ ಪೂರ್ವದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿಗೆ ಪ್ರತಿವರ್ಷ 5 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ವಾಗ್ದಾನ ನೀಡಿತ್ತು, ಆದರೆ ಈಗ ಸರ್ಕಾರದ ಮುಂದೆ ಗ್ಯಾರಂಟಿ ಜಾರಿಗೊಳಿಸುವ ಸವಾಲು ಇರುವುದರಿಂದ ಅನುದಾನ ಸಿಗಬಹುದಾ ಎಂಬುದು ಈಗ ಹೇಳುವುದು ಕಷ್ಟ. ಆದರೆ ಹಂತ ಹಂತವಾಗಿ ಎಲ್ಲ ಭರವಸೆಗಳನ್ನೂ ಅಭಿವೃದ್ಧಿಗಳನ್ನೂ ಮಾಡಲಾಗುವುದು ಎಂದು ಈ ಭಾಗದ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಹೈಲೈಟ್ಸ್‌:

  • ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಲಿರುವ ನೂತನ ಸರಕಾರದ ಚೊಚ್ಚಲ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಭರಪೂರ ಕೊಡುಗೆ ಸಿಗಬಹುದಾ ಎಂಬ ನಿರೀಕ್ಷೆಗಳು ಗರಿಗೆದರಿವೆ.
  • ಗ್ಯಾರಂಟಿಗೆ ಹೆಚ್ಚು ಹಣ ಬೇಕಿದ್ದರಿಂದ ಕಲ್ಯಾಣಕ್ಕೆ ಅನುದಾನದ ಕಡಿತ ಆಗಬಹುದಾ ಎಂಬ ಆತಂಕಗಳು ವ್ಯಕ್ತವಾಗಿವೆ.
  • ಗ್ಯಾರಂಟಿ ಯೋಜನೆಯಿಂದ ಇತರ ಯೋಜನೆಗಳಿಗೆ ನಿರೀಕ್ಷಿತ ಅನುದಾನ ಸಿಗಬಹುದಾ ಎನ್ನುವುದು ಈಗ ಹೇಳುವುದು ಕಷ್ಟ. ಆದರೆ ಈ ಭಾಗದ ಅಭಿವೃದ್ಧಿಗೆ ಬದ್ಧವಾಗಿದ್ದು, ಹಂತ ಹಂತವಾಗಿ ಎಲ್ಲ ಭರವಸೆಗಳನ್ನೂ ಈಡೇರಿಸಲಾಗುವುದು ಎಂದ ಸಚಿವ ಪ್ರಿಯಾಂಕ್‌ ಖರ್ಗೆ
kalyana karnataka transport
kalyana karnataka transport
ಕಲಬುರಗಿ: ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಲಿರುವ ನೂತನ ಸರಕಾರದ ಚೊಚ್ಚಲ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಭರಪೂರ ಕೊಡುಗೆ ಸಿಗಬಹುದಾ ಎಂಬ ನಿರೀಕ್ಷೆಗಳು ಗರಿಗೆದರಿವೆ.
ಕೆಕೆಆರ್‌ಡಿಬಿಗೆ ಪ್ರತಿವರ್ಷ 5 ಸಾವಿರ ಕೋಟಿ ರೂ, ನೀಡುವುದಾಗಿ ಚುನಾವಣೆಯಲ್ಲಿ ನೀಡಿದ್ದ ವಾಗ್ದಾನದಂತೆ ಹಣ ಒದಗಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಗ್ಯಾರಂಟಿಗೆ ಹೆಚ್ಚು ಹಣ ಬೇಕಿದ್ದರಿಂದ ಕಲ್ಯಾಣಕ್ಕೆ ಅನುದಾನದ ಕಡಿತ ಆಗಬಹುದಾ ಎಂಬ ಆತಂಕಗಳು ವ್ಯಕ್ತವಾಗಿವೆ.

ಶಕ್ತಿ ಯೋಜನೆ ಹಣ ಮರು ಪಾವತಿ ಆಗಿಲ್ಲ: ಆದ್ರೂ ಕೆಎಸ್‌ಆರ್‌ಟಿಸಿ ನೌಕರರ ಸಂಬಳ ಲೇಟ್ ಆಗಿಲ್ಲ!

ಕಲ್ಯಾಣ ಭಾಗದಲ್ಲಿ ಖಾಲಿ ಇರುವ 32 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ತಿಂಗಳ ಒಳಗಾಗಿ ಆರಂಭಿಸುವುದಾಗಿ ಈ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಆದರೆ ಚುನಾವಣೆಯಲ್ಲಿಎಲ್ಲ ಬಜೆಟ್‌ ಭರವಸೆ ಕೊಚ್ಚಿ ಹೋದವು. ಕಾಂಗ್ರೆಸ್‌ ಸಹ ಚುನಾವಣೆಯಲ್ಲಿಈ ಹುದ್ದೆ ಭರ್ತಿ ಮಾಡುವ ಭರವಸೆ ನೀಡಿದ್ದರಿಂದ ಈ ಬಜೆಟ್‌ನಲ್ಲಿಅನುದಾನ ಮೀಸಲಿಡಬೇಕು ಎಂಬ ಒತ್ತಡವೂ ಬಲವಾಗಿದೆ.

ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಆರ್‌ಡಿಪಿಆರ್‌ ಸಚಿರಾಗಿದ್ದು, ಗ್ರಾಮೀಣ ರಸ್ತೆ, ಪಂಚಾಯಿತಿಗಳಿಗೆ ಬಲ ತುಂಬುವುದು, ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಆದ್ಯತೆ ನೀಡುವುದು ಸೇರಿದಂತೆ ಹಲವು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮೆಡಿಕಲ್‌ ಸಚಿವರಾಗಿರುವ ಡಾ. ಶರಣಪ್ರಕಾಶ್‌ ಪಾಟೀಲ್‌ ಅವರಿಂದಲೂ ಹಲವು ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು, ಹೊಸ ಆಸ್ಪತ್ರೆ, ಮೆಡಿಕಲ್‌ ಕಾಲೇಜು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ವಿಶೇಷ ನೇಮಕ ಅಭಿಯಾನಕ್ಕೆ ಒತ್ತಡ:

ಕಲ್ಯಾಣ ಭಾಗದಲ್ಲಿ ಹೆಚ್ಚು ಹುದ್ದೆ ಖಾಲಿ ಇದ್ದರೂ ಭರ್ತಿಯಾಗುತ್ತಿಲ್ಲ. ಹುದ್ದೆ ಖಾಲಿ ಇರುವುದರಿಂದ ಸರಕಾರಿ ಕೆಲಸಕ್ಕೂ ಪಾರ್ಶ್ವವಾಯು ಬಡಿದಂತಾಗಿದೆ. ಈ ಹಿಂದೆ ಇದೇ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2014 ರ ನವೆಂಬರ್‌ನಲ್ಲಿ ಕಲಬುರಗಿಯಲ್ಲಿ ವಿಶೇಷ ಸಂಪುಟ ಸಭೆ ನಡೆಸಿ 34 ಸಾವಿರ ಹುದ್ದೆ ಖಾಲಿ ಇರುವುದನ್ನು ಗುರುತಿಸಲಾಗಿತ್ತು. ಈ ಹುದ್ದೆಗಳನ್ನು 2015ರ ಒಳಗಾಗಿಯೇ ಭರ್ತಿ ಮಾಡಬೇಕು ಎಂಬ ಡೆಡ್‌ಲೈನ್‌ ಸಹ ಹಾಕಲಾಗಿತ್ತು. ಆದರೆ ಐದು ವರ್ಷಗಳಲ್ಲಿ ಕೇವಲ 14 ಸಾವಿರ ಹುದ್ದೆ ಭರ್ತಿಯಾಗಿವೆ. ಈ ಅವಧಿಯಲ್ಲಿಹುದ್ದೆಗಳೂ ಹೆಚ್ಚು ಖಾಲಿಯಾಗಿವೆ. ಈ ಹುದ್ದೆಗಳ ಬಗ್ಗೆ ಮತ್ತೊಮ್ಮೆ ವರದಿ ತರಿಸಿ ಕಾಲ ಮಿತಿಯೊಳಗೆ ಹುದ್ದೆ ಭರ್ತಿ ಮಾಡಬೇಕು. ಅದಕ್ಕಾಗಿ ವಿಶೇಷ ನೇಮಕಾತಿ ಅಭಿಯಾನ ನಡೆಸಿ ಯುವಕರಿಗೆ ಕೆಲಸ ನೀಡಬೇಕು ಎಂಬ ಒತ್ತಡ ಜೋರಾಗಿದೆ.

ಕರುನಾಡ ಬಜೆಟ್‌ ಮೆರುಗು, ₹21 ಕೋಟಿಯಿಂದ ₹3 ಲಕ್ಷ ಕೋಟಿವರೆಗೆ ಬಂದು ನಿಂತ ಲೆಕ್ಕ!
ಪ್ರಮುಖ ಬೇಡಿಕೆ:
-ತೊಗರಿ ಅಭಿವೃದ್ಧಿ ಮಂಡಳಿಯನ್ನು ಕೆಎಂಎಫ್‌ ಮಾದರಿಯಲ್ಲಿ ಪುನಾರಚಿಸಿ ಹೆಚ್ಚುವರಿ ಅನುದಾನ ನೀಡಬೇಕು
-ಪ್ರತ್ಯೇಕವಾದ ಕೈಗಾರಿಕಾ ನೀತಿ ಜಾರಿಗೊಳಿಸಬೇಕು
-ಘೋಷಣೆಯಾಗಿರುವ ಜವಳಿ ಪಾರ್ಕ್ ಕಲಬುರಗಿಯಲ್ಲಿ, ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್ಗೆ ಚಾಲನೆ ನೀಡಬೇಕು
-ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು
-ಪ್ರವಾಸೋದ್ಯಮ ಸರ್ಕೀಟ್‌ ನಿರ್ಮಾಣ
-ಹಸಿರೀಕರಣಕ್ಕಾಗಿ ಗ್ರೇಟ್‌ ಗ್ರಿನ್‌ ವಾಲ್‌ ನಿರ್ಮಾಣ

ಕಲ್ಯಾಣಕ್ಕಾಗಿ ಕಾಂಗ್ರೆಸ್‌ ನೀಡಿದ್ದ ಚುನಾವಣೆ ದಶ ಅಂಶಗಳಿವು

371ಜೆ ಪೂರ್ಣ ಪ್ರಮಾಣದಲ್ಲಿ ಜಾರಿ
ಮೂಲ ಸೌಕರ್ಯ ಅಭಿವೃದ್ಧಿಗಾಗಿ ಪ್ರತಿ ವರ್ಷ ಕೆಕೆಆರ್‌ಡಿಬಿ 5,000 ಕೋಟಿ ರೂ ಅನುದಾನ
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು
ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕಾ ಕಾರಿಡಾರ್‌ಗಳ ನಿರ್ಮಾಣ. 1 ಲಕ್ಷ ಉದ್ಯೋಗವನ್ನು ಖಾಸಗಿ ವಲಯವೊಂದರಲ್ಲೇ ಸೃಷ್ಟಿಸುವುದು
'ಕೃಷ್ಣಾ' ಮತ್ತು 'ಗೋದಾವರಿ' ಜಲಾನಯನ ಪ್ರದೇಶದ ಎಲ್ಲ ನೀರಾವರಿ ಯೋಜನೆಗಳನ್ನು 24 ತಿಂಗಳೊಳಗೆ ಕಾಮಗಾರಿ ಕೈಗೆತ್ತಿಕೊಳ್ಳುವುದು. ವಿಶೇಷ ಪ್ಯಾಕೇಜ್‌ ನೀಡುವುದು
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಚತುಷ್ಪಥ ರಸ್ತೆ ನಿರ್ಮಾಣ
ಐಐಟಿ, ಐಎಎಂ, ಏಮ್ಸ್‌ ಸ್ಥಾಪಿಸುವುದು
'ಶಿಶು ಮರಣ ಪ್ರಮಾಣ' ಹಾಗೂ 'ಅಪೌಷ್ಟಿಕತೆ'ಯ ಸಮಸ್ಯೆಗಳ ತುರ್ತು ಪರಿಹಾರಕ್ಕಾಗಿ 41 ಕ್ಷೇತ್ರಗಳಲ್ಲಿ ತಲಾ ಒಂದರಂತೆ ತಾಯಿ ಮತ್ತು ಮಕ್ಕಳ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು
ಪ್ರತಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದು
ಹಳ್ಳಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಪ್ರತಿ ಗ್ರಾಪಂಗೆ 1 ಕೋಟಿ ರೂ. ವಿಶೇಷ ಅನುದಾನ

ಬಜೆಟ್‌ನಲ್ಲಿ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಹೆಚ್ಚು ಅನುದಾನ ನೀಡುವಂತೆ ಕೋರಲಾಗಿದೆ. ಗ್ಯಾರಂಟಿ ಯೋಜನೆಯಿಂದ ಇತರ ಯೋಜನೆಗಳಿಗೆ ನಿರೀಕ್ಷಿತ ಅನುದಾನ ಸಿಗಬಹುದಾ ಎನ್ನುವುದು ಈಗ ಹೇಳುವುದು ಕಷ್ಟ. ಆದರೆ ಈ ಭಾಗದ ಅಭಿವೃದ್ಧಿಗೆ ಬದ್ಧವಾಗಿದ್ದು, ಹಂತ ಹಂತವಾಗಿ ಎಲ್ಲ ಭರವಸೆಗಳನ್ನೂ ಈಡೇರಿಸಲಾಗುವುದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಔದ್ಯೋಗಿಕ ಪ್ರಗತಿ ಆಗಬೇಕು. ಅದಕ್ಕಾಗಿ ಪ್ರತ್ಯೇಕ ಕೈಗಾರಿಕಾ ನೀತಿ ಪ್ರಕಟಿಸಬೇಕು. ಕೈಗಾರಿಕಾ ಕಾರಿಡಾರ್‌ ಬೇಕು. ವಿಮಾನ, ರೈಲ್ವೆ, ರಸ್ತೆ ಸಂಪರ್ಕ ಇದೆ. ಈ ಭಾಗಕ್ಕೆ ಸರಕಾರ ಹೆಚ್ಚಿನ ಅನುದಾನ ನೀಡಿ ನಿಗಾ ವಹಿಸಬೇಕು. ಕಲ್ಯಾಣ ಕರ್ನಾಟಕ ಐಟಿ ವಿದ್ಯಾರ್ಥಿಗಳು ವಲಸೆ ಹೋಗುತ್ತಿದ್ದಾರೆ. ಅವರಿಗೆ ಸ್ಥಳೀಯವಾಗಿಯೇ ಕೆಲಸ ಸಿಗುವಂತಾಗಬೇಕು. ಐಟಿ ಹಬ್‌ ಬೇಕು. ಕಿಯೊನಿಕ್ಸ್‌ ಬಲಪಡಿಸಬೇಕು. ಎರಡನೇ ರಿಂಗ್‌ ರಸ್ತೆ ಜಾರಿಗೊಳಿಸಬೇಕು ಎಂದು ಕೆಕೆಸಿಸಿಐ, ಅಧ್ಯಕ್ಷ ಶಶಿಕಾಂತ ಪಾಟೀಲ್‌ ಹೇಳಿದ್ದಾರೆ.

ತೊಗರಿ ಮಂಡಳಿ ಹೆಸರಿಗೆ ಮಾತ್ರ ಆಗಿದೆ. ತೊಗರಿ ಅಭಿವೃದ್ಧಿಗೆ 150 ಕೋಟಿ ರೂ. ನೀಡಬೇಕು. ಸರಕಾರಿ ಆಸ್ಪತ್ರೆಗಳಲ್ಲಿಅಗತ್ಯ ಯಂತ್ರಗಳು ಕಲ್ಪಿಸಬೇಕು. ಜಿಮ್ಸ್‌ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಬೇಕು. ಜಿಲ್ಲೆಬರಪೀಡಿತವೆಂದು ಘೋಷಿಸಿ, ಪರಿಹಾರ ನೀಡಬೇಕು. ಇನ್ಸುರೆನ್ಸ್‌ ಪಾವತಿಸಿದರೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಶರಣಪ್ಪ ಮಮಶೆಟ್ಟಿ ಹೇಳಿದ್ದಾರೆ.
ಸೌಮ್ಯಶ್ರೀ ಮಾರ್ನಾಡ್
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ