ಆ್ಯಪ್ನಗರ

ಬಜೆಟ್ ನಲ್ಲಿ ಚಾಮುಂಡೇಶ್ವರಿಗೆ ಚಿನ್ನದ ರಥ ಘೋಷಣೆ: ಸೋಮಣ್ಣ ವಿಶ್ವಾಸ

2020ನೇ ಕರ್ನಾಟಕ ಬಜೆಟ್ ನಲ್ಲಿ ಮೈಸೂರು ಚಾಮುಂಡೇಶ್ವರಿ ದೇಗುಲಕ್ಕೆ ಚಿನ್ನದ ರಥದ ನಿರ್ಮಾಣದ ಬಗ್ಗೆ ಯಡಿಯೂರಪ್ಪ ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ ಎಂದು ಸಚಿವ ವಿ ಸೋಮಣ್ಣ ಹೇಳಿಕೆ ನೀಡಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಲು ಬಂದಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ.

Vijaya Karnataka Web 28 Feb 2020, 4:42 pm
ಮೈಸೂರು: ಕರ್ನಾಟಕ ಬಜೆಟ್ 2020 ರಲ್ಲಿ ಮೈಸೂರು ಚಾಮುಂಡೇಶ್ವರಿ ದೇವಾಲಯಕ್ಕೆ ಚಿನ್ನದ ರಥದ ನಿರ್ಮಾಣದ ಕುರಿತು ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಭರವಸೆ ನೀಡಿದ್ದಾರೆ.
Vijaya Karnataka Web somanna


ಚಾಮುಂಡಿಬೆಟ್ಟದ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚಿನ್ನದ ರಥ ಬಹುದಿನದ ಕನಸು. ಹಾಗಾಗಿ ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ನಿರ್ಧಾರವಾಗುವ ವಿಶ್ವಾಸ ಇದೆ. ನಾನು ಮುಜರಾಯಿ ಇಲಾಖೆ ಸಚಿವರ ಜೊತೆ ಈಗಾಗಲೇ ಮಾತನಾಡಿದ್ದೇನೆ‌. ಚಿನ್ನದ ರಥ ನಿರ್ಮಾಣ ಮಾಡುವ ಬಜೆಟ್ ಅನುದಾನ ಕೊಡಿಸುವ ಭರವಸೆ ಸಹ ನೀಡಿದ್ದಾರೆ. ಅಲ್ಲದೇ ಸಪ್ತಪದಿ ಯೋಜನೆಯನ್ನು ಚಾಮುಂಡಿಬೆಟ್ಟದಲ್ಲಿ ಅನುಷ್ಠಾನಕ್ಕೆ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದರು.

ಬೆಟ್ಟದಲ್ಲಿ ನಡೆಯುತ್ತಿರುವ ಬಹುಮಹಡಿ ಪಾರ್ಕಿಂಗ್‌ ಕಾಮಗಾರಿ ಕುರಿತು ಪ್ರತಿಕ್ರಿಯಿಸಿ, ಇನ್ನೊಂದು ತಿಂಗಳಲ್ಲಿ ಚಾಮುಂಡಿಬೆಟ್ಟ ಕಾಮಗಾರಿ ಪೂರ್ಣವಾಗಲಿದೆ. ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನೀಡುತ್ತೇವೆ. ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ವ್ಯವಸ್ಥೆ ಮಾಡುತ್ತಿದ್ದೇವೆ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದರು.

ಇನ್ನು ನೆರೆ ಸಂತ್ರಸ್ತರಿಗೆ ಮನೆ ವಿತರಣೆ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ರಾಜ್ಯದಲ್ಲಿ 3.5 ಲಕ್ಷ ಮನೆ ವಿತರಣೆಗೆ ಸಕಲ ಸಿದ್ದತೆ ನಡೆದಿದೆ. ಮೊದಲು 15 ಲಕ್ಷ ಮನೆ ವಿತರಣೆ ಅರ್ಜಿ ಬಂದಿತ್ತು. ಆಧಾರ್, ಬಿಪಿಎಲ್, ಎಪಿಎಲ್ ಕಾರ್ಡುಗಳನ್ನ ಲಿಂಕ್ ಮಾಡಿದ ಬಳಿಕ ಆ ಸಂಖ್ಯೆ 15 ಲಕ್ಷದಿಂದ 6 ಲಕ್ಷಕ್ಕೆ ಇಳಿಕೆಯಾಯಿತು. ಇದೀಗ 3.5 ಲಕ್ಷ ನಿಜವಾದ ಸಂತ್ರಸ್ತರಿಗೆ ಮನೆ ವಿತರಣೆಗೆ ಸಿದ್ದತೆ ನಡೆದಿದೆ‌. ಜೂನ್ ಅಂತ್ಯದ ಒಳಗೆ ಮನೆ ವಿತರಣೆ ನಡೆಯಲಿದೆ ಎಂದರು.

ಯಡಿಯೂರಪ್ಪನವರ ಜನ್ಮದಿನದ ಕಾರ್ಯಕ್ರಮದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಂದಿದ್ದರು. ಇದು ಕರ್ನಾಟಕದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದೆ. ಎಲ್ಲರೂ ಒಟ್ಟಾಗಿ ಸಿಎಂಗೆ ಶುಭ ಕೋರಿದ್ದಾರೆ. ಹಾಗೇಯೆ ಎಲ್ಲರೂ ಒಟ್ಟಾಗಿ ರಾಜ್ಯದ ಅಭಿವೃದ್ಧಿ ಮಾಡುತ್ತೇವೆ. ಎಲ್ಲರೂ ಪಕ್ಷಭೇದ ಮರೆತು ಸಿಎಂಗೆ ಶುಭಕೋರಿದ್ದು ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ