ಆ್ಯಪ್ನಗರ

ಗ್ರಾಮಗಳೆಡೆಗೆ ಬಿಎಸ್ ವೈ ನಡಿಗೆ: ಪಂಚಾಯ್ತಿ ಬಲಕ್ಕೆ ಅಚಲ ನಿರ್ಧಾರ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಅಭಿವೃದ್ಧಿಗೆ ಹಲವು ಹೊಸ ಯೋಜನೆಗಳನ್ನು ಘೋಷಿಸಿರುವ ಬಿಎಸ್ ಯಡಿಯೂರಪ್ಪ, ಗ್ರಾಮೀಣ ಕರ್ನಾಟಕದ ಸರ್ವಾಂಗೀಣ ಅಭೀವೃದ್ಧಿಗೆ ಪಣ ತೊಟ್ಟಿದ್ದಾರೆ. ಬೆಂಗಳೂರು1 ಮಾದರಿಯಲ್ಲಿ ಗ್ರಾಮ-1 ಕೇಂದ್ರಗಳ ಸ್ಥಾಪನೆಗೆ ಮುಂದಡಿ ಇಟ್ಟಿರುವ ಯಡಿಯೂರಪ್ಪ ಸರ್ಕಾರ, ಜನಸಾಮಾನ್ಯರಿಗೆ ಎಲ್ಲಾ ಆಡಳಿತ ಸೇವೆ ಒದಗಿಸುವತ್ತ ದೃಷ್ಟಿ ನೆಟ್ಟಿದೆ.

Vijaya Karnataka Web 5 Mar 2020, 2:46 pm
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ 2020-21 ಸಾಲಿನ ಬಜೆಟ್ ಮಂಡಿಸಿದ್ದು, ಒಟ್ಟು 2,37,893 ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ್ದಾರೆ.
Vijaya Karnataka Web BS Yediyurappa
ಪ್ರಸಕ್ತ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ.


ಅದರಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಅಭಿವೃದ್ಧಿಗೆ ಹಲವು ಹೊಸ ಯೋಜನೆಗಳನ್ನು ಘೋಷಿಸಿರುವ ಬಿಎಸ್ ಯಡಿಯೂರಪ್ಪ, ಗ್ರಾಮೀಣ ಕರ್ನಾಟಕದ ಸರ್ವಾಂಗೀಣ ಅಭೀವೃದ್ಧಿಗೆ ಪಣ ತೊಟ್ಟಿದ್ದಾರೆ.

ಬೆಂಗಳೂರು1 ಮಾದರಿಯಲ್ಲಿ ಗ್ರಾಮ-1 ಕೇಂದ್ರಗಳ ಸ್ಥಾಪನೆಗೆ ಮುಂದಡಿ ಇಟ್ಟಿರುವ ಯಡಿಯೂರಪ್ಪ ಸರ್ಕಾರ, ಜನಸಾಮಾನ್ಯರಿಗೆ ಎಲ್ಲಾ ಆಡಳಿತ ಸೇವೆ ಒದಗಿಸುವತ್ತ ದೃಷ್ಟಿ ನೆಟ್ಟಿದೆ.

ಹೊಟ್ಟೆಗೆಷ್ಟು ಕೊಟ್ಟರು ಯಡಿಯೂರಪ್ಪ?: ಆಹಾರ ಆಹಾಕಾರಕ್ಕೆ ಅವಕಾಶವಿಲ್ಲ

ಈ ಮೂಲಕ ಪಂಚಾಯ್ತಿಗಳಿಗೆ ಮತ್ತಷ್ಟು ಬಲ ತುಂಬುವ ಇರಾದೆ ಸರ್ಕಾರಕ್ಕಿದ್ದು, ಗ್ರಾಮ-೧ ಕೇಂದ್ರಗಳ ಸ್ಥಾಪನೆಯ ಮೂಲಕ ಪಾರದರ್ಶಕ ಆಡಳಿತಕ್ಕೂ ಮುನ್ನುಡಿ ಬರೆಯಲಾಗಿದೆ.

ಇನ್ನು ಗ್ರಾಮೀಣ ರಸ್ತೆಗಳ ಅಭಿವೃದ್ದಧಿಗಾಗಿ ಗ್ರಾಮೀಣ ಸುಮಾರ್ಗ ಯೋಜನೆ ಘೋಷಿಸಿರುವ ರಾಜ್ಯ ಸರ್ಕಾರ, ಈ ಯೋಜನೆಯಡಿಯಲ್ಲಿ ೨೦,೦೦೦ ಕಿಮೀ ನಿರ್ಮಣ ಮಾಡುವ ಗುರಿ ಹೊಂದಿದೆ.

ರಾಜ್ಯದ ಕಂದಾಯ: ಬಿಎಸ್‌ವೈ ಲೆಕ್ಕದಲ್ಲಿದೆ ವೆಚ್ಚ ಮತ್ತು ಆದಾಯ

ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸದೃಢಗೊಳಿಸುವ ಮೂಲಕ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಚುರುಕು ಮುಟ್ಟಿಸಲು ಸರ್ಕಾರ ನಿರ್ಧರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ