ಆ್ಯಪ್ನಗರ

ಬಜೆಟ್‌ ಮಂಡನೆ ಮೊದಲೇ ಸಿದ್ದರಾಮಯ್ಯ ಆಕ್ಷೇಪ: ಕಾಂಗ್ರೆಸ್ ಶಾಸಕರ ಸಭಾತ್ಯಾಗ

ಬಿ.ಎಸ್‌. ಯಡಿಯೂರಪ್ಪ ಬಜೆಟ್‌ ಮಂಡನೆಗೆ ಮುಂದಾಗುತ್ತಿದ್ದಂತೆಯೇ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ನೈತಿಕ ಮೌಲ್ಯಗಳಿಲ್ಲದ ಸರಕಾರಕ್ಕೆ ಬಜೆಟ್ ಮಂಡಿಸಲು ಅರ್ಹತೆ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

Vijaya Karnataka Web 8 Mar 2021, 12:31 pm
ಬೆಂಗಳೂರು: ಮುಖ್ಯಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯ ಬಜೆಟ್‌ ಮಂಡನೆಗೆ ಮುಂದಾಗುತ್ತಿದ್ದಂತೆಯೇ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
Vijaya Karnataka Web Siddaramaiah


ಸೋಮವಾರ ಮಧ್ಯಾಹ್ನ 12 ಗಂಟೆಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿ ಬಜೆಟ್‌ ಮಂಡನೆಗೆ ಅನುಮತಿ ನೀಡುತ್ತಿದ್ದಂತೆಯೇ ಸಿದ್ದರಾಮಯ್ಯ ಆಕ್ಷೇಪಿಸಿದರು. ನೈತಿಕ ಮೌಲ್ಯಗಳಿಲ್ಲದ ಸರಕಾರಕ್ಕೆ ಬಜೆಟ್ ಮಂಡಿಸಲು ಹಾಗೂ ಅಧಿಕಾರದಲ್ಲಿರಲು ಅರ್ಹತೆ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ಕರ್ನಾಟಕ ಬಜೆಟ್‌ ಮಂಡನೆ ವೇಳೆ ಸಭಾತ್ಯಾಗ - ಸಿದ್ದರಾಮಯ್ಯ ಘೋಷಣೆ

ಸಿದ್ದರಾಮಯ್ಯ ಅವರ ಆಕ್ಷೇಪಕ್ಕೆ ಸ್ಪೀಕರ್‌ ಪ್ರತಿಕ್ರಿಯಿಸಿ, ಬಜೆಟ್‌ ಮಂಡನೆ ವೇಳೆ ಆಕ್ಷೇಪ ವ್ಯಕ್ತಪಡಿಸಿ, ಬಜೆಟ್‌ ಮಂಡನೆಗೆ ಅಡ್ಡಿಪಡಿಸುವುದು ಸಂಪ್ರದಾಯವಲ್ಲ. ಬಜೆಟ್ ಮಂಡನೆಗೆ ಅವಕಾಶ ಮಾಡಿಕೊಡುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.

ಬಜೆಟ್ ಪ್ರತಿಗೆ ಪೂಜೆ ಸಲ್ಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ: ಉತ್ತಮ ಬಜೆಟ್ ಮಂಡಿಸುವ ವಾಗ್ದಾನ!

ಸಿದ್ದರಾಮಯ್ಯ ಅವರು ಮೊದಲೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದಂತೆ ಕಾಂಗ್ರೆಸ್ ಶಾಸಕರು ಕಪ್ಪು ಪಟ್ಟಿ ಧರಿಸಿ ಸದನಕ್ಕೆ ಆಗಮಿಸಿದ್ದರು. ಬಜೆಟ್ ವಿರುದ್ಧ ಪ್ರತಿಭಟನೆ ನಡೆಸಿ, ಬಜೆಟ್ ಮಂಡನೆ ವೇಳೆ ಸದನವನ್ನು ಬಹಿಷ್ಕರಿಸಿ, ಸಭಾತ್ಯಾಗ ಮಾಡಿದರು. ರಾಜ್ಯ ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಮಂಡನೆ ಸಂದರ್ಭ ವಿರೋಧ ಪಕ್ಷದಿಂದ ಸಭಾತ್ಯಾಗ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ