Please enable javascript.ಹೊಸ ಬ್ಯಾಂಕ್ ಪರವಾನಗಿ ವಿಳಂಬ ಸಾಧ್ಯತೆ - ಹೊಸ ಬ್ಯಾಂಕ್ ಪರವಾನಗಿ ವಿಳಂಬ ಸಾಧ್ಯತೆ - Vijay Karnataka

ಹೊಸ ಬ್ಯಾಂಕ್ ಪರವಾನಗಿ ವಿಳಂಬ ಸಾಧ್ಯತೆ

ಏಜೆನ್ಸೀಸ್ 6 Aug 2013, 4:21 am
Subscribe

ಹೊಸ ಬ್ಯಾಂಕ್‌ಗಳ ಸ್ಥಾಪನೆಗೆ ಸಂಬಂಧಿಸಿ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಇದು ಪೂರ್ಣಗೊಳ್ಳಲು ಸ್ವಲ್ಪ ಸಮಯದ ಅಗತ್ಯ ಇದೆ ಎಂದು ಆರ್‌ಬಿಐ ಹೇಳಿದೆ.

ಹೊಸ ಬ್ಯಾಂಕ್ ಪರವಾನಗಿ ವಿಳಂಬ ಸಾಧ್ಯತೆ
ಮುಂಬಯಿ: ಹೊಸ ಬ್ಯಾಂಕ್‌ಗಳ ಸ್ಥಾಪನೆಗೆ ಸಂಬಂಧಿಸಿ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಇದು ಪೂರ್ಣಗೊಳ್ಳಲು ಸ್ವಲ್ಪ ಸಮಯದ ಅಗತ್ಯ ಇದೆ ಎಂದು ಆರ್‌ಬಿಐ ಹೇಳಿದೆ.

‘ಅರ್ಜಿಗಳ ಪರಿಶೀಲನೆಯನ್ನು ನಾವು ಆರಂಭಿಸಿದ್ದೇವೆ. ನಾವೀಗ ಕಾರ್ಪೊರೇಟ್ ಸಮೂಹಗಳಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸುತ್ತಿದ್ದೇವೆ. ಇದಕ್ಕಾಗಿ ಆಳವಾದ ಅಧ್ಯಯನ ನಡೆಸಲಾಗುತ್ತಿದ್ದು, ಭಾರಿ ಕೆಲಸದ ಒತ್ತಡವಿರುವುದರಿಂದ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ’ ಎಂದು ಡೆಪ್ಯುಟಿ ಗವರ್ನರ್ ಆನಂದ್ ಸಿನ್ಹಾ ತಿಳಿಸಿದ್ದಾರೆ. ಫಿಕ್ಕಿಯ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಅವರು ಈ ವಿಷಯ ತಿಳಿಸಿದರು.

ಆರ್‌ಬಿಐ 26 ಅರ್ಜಿಗಳನ್ನು ಸ್ವೀಕರಿಸಿದೆ. ಟಾಟಾ ಕ್ಯಾಪಿಟಲ್, ರಿಲಯನ್ಸ್ ಕ್ಯಾಪಿಟಲ್, ಬಿರ್ಲಾ, ಎಲ್‌ಆಂಡ್‌ಎಫ್ ಫೈನಾನ್ಸ್, ಬಜಾಜ್ ಸಮೂಹ ಮತ್ತು ಭಾರತೀಯ ಅಂಚೆ ಇಲಾಖೆ ಅರ್ಜಿ ಸಲ್ಲಿಸಿವೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ