ಆ್ಯಪ್ನಗರ

ಮುಂಬಯಿ ರೈಲ್ವೆ ನಿಲ್ದಾಣದ ನಿರ್ಮಾಣ ಗುತ್ತಿಗೆಗೆ ಜಿಎಂಆರ್, ಅದಾನಿ, ಗೋದ್ರೆಜ್‌ ನಡುವೆ ಭಾರಿ ಪೈಪೋಟಿ

ಜಿಎಂಆರ್‌ ಎಂಟರ್‌ಪ್ರೈಸಸ್‌ ಪ್ರೈ.ಲಿ., ಅದಾನಿ ರೈಲ್ವೇ ಟ್ರಾನ್ಸ್‌ಪೋರ್ಟ್‌ ಲಿ., ಗೋದ್ರೆಜ್‌ ಪ್ರಾಪರ್ಟೀಸ್‌ ಲಿ. ಸೇರಿ 10 ಪ್ರಮುಖ ಕಂಪನಿಗಳು ಮುಂಬಯಿ ನಗರದ ರೈಲ್ವೆ ನಿಲ್ದಾಣ ‘ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌’ ಮರು ನಿರ್ಮಾಣಕ್ಕೆ ಬಿಡ್‌ ಸಲ್ಲಿಸಿವೆ.

Agencies 16 Jan 2021, 1:26 pm
ಮುಂಬಯಿ: ನಗರದ ರೈಲ್ವೆ ನಿಲ್ದಾಣ ‘ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ (ಸಿಎಸ್‌ಟಿ)’ ಮರು ನಿರ್ಮಾಣಕ್ಕೆ 10 ಸಂಸ್ಥೆಗಳಿಂದ ಪ್ರಸ್ತಾವನೆಗಳು ಬಂದಿವೆ ಎಂದು ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮ ನಿ. ಜನವರಿ 15ರಂದು ಹೇಳಿದೆ.
Vijaya Karnataka Web mumbai


ಈ 10 ಪ್ರಮುಖ ಕಂಪನಿಗಳಲ್ಲಿ ಜಿಎಂಆರ್‌ ಎಂಟರ್‌ಪ್ರೈಸಸ್‌ ಪ್ರೈ.ಲಿ., ಅದಾನಿ ರೈಲ್ವೇ ಟ್ರಾನ್ಸ್‌ಪೋರ್ಟ್‌ ಲಿ., ಗೋದ್ರೆಜ್‌ ಪ್ರಾಪರ್ಟೀಸ್‌ ಲಿ., ಒಬೆರಾಯ್‌ ಪ್ರಾಪರ್ಟಿಸ್‌ ಲಿ., ಐಎಸ್‌ಕ್ಯೂ ಏಷಿಯಾ ಇನ್‌ಪ್ರಾಸ್ಟ್ರಕ್ಚರ್‌, ಕಲ್ಪತರು ಪವರ್‌ ಟ್ರಾನ್ಸ್‌ಮಿಷನ್‌ ಲಿ. ಸೇರಿ ಹಲವು ಕಂಪನಿಗಳು ಆಸಕ್ತಿ ತೋರಿವೆ.

ಇತ್ತೀಚಿನ ದಿನಗಳಲ್ಲಿ ನಿಲ್ದಾಣವೊಂದರ ಮರು ನಿರ್ಮಾಣ ಸಂಬಂಧ ವ್ಯಕ್ತವಾದ ಅತ್ಯುತ್ತಮ ಭಾಗವಹಿಸುವಿಕೆ ಇದು ಎಂದು ರೈಲ್ವೇ ನಿಗಮ ಹೇಳಿದೆ. ದಿಲ್ಲಿ ವಿಮಾನ ನಿಲ್ದಾಣ, ಮುಂಬಯಿ ಏರ್‌ಪೋರ್ಟ್‌, ನವಿ ಮುಂಬಯಿ ವಿಮಾನ ನಿಲ್ದಾಣ, ಗೋವಾ ಮೊಪ ಏರ್‌ಪೋರ್ಟ್‌, ಜೆವರ್‌ ವಿಮಾನ ನಿಲ್ದಾಣ ಹಾಗೂ ಜೈಪುರ, ಅಹಮದಾಬಾದ್‌, ಲಕ್ನೋ, ಗುವಾಹಟಿ, ಮಂಗಳೂರು, ತಿರುನಂತಪುರಂ ವಿಮಾನ ನಿಲ್ದಾಣಗಳು ಸೇರಿದಂತೆ ಯಾವುದೇ ರೈಲ್ವೆ ನಿಲ್ದಾಣಗಳ ನಿರ್ಮಾಣಕ್ಕೂ ಇಷ್ಟೊಂದು ಪ್ರಸ್ತಾವನೆಗಳು ಬಂದಿಲ್ಲ.

ಸಿಎಸ್‌ಟಿಯ ಮರು ನಿರ್ಮಾಣ ಸಂಬಂಧ ಆಗಸ್ಟ್‌ನಲ್ಲಿ ರೈಲ್ವೆ ನಿಗಮ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಈ ನಿಲ್ದಾಣ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅಂತಿಮವಾಗಿ ಯಾರು ಬಿಡ್‌ ಗೆಲ್ಲಲಿದ್ದಾರೆ ಎಂಬುದು ಇನ್ನಷ್ಟೆ ತಿಳಿದು ಬರಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ