ಆ್ಯಪ್ನಗರ

ಮಹೀಂದ್ರಾ ಮುಖ್ಯಸ್ಥರಿಗೆ ಟ್ರಾಫಿಕ್‌ನಲ್ಲಿ ಹಾರ್ನ್‌ ಕಿರಿಕಿರಿ ತಡೆಗೆ ಅದ್ಭುತ ಐಡಿಯಾ ಕೊಟ್ಟ 11 ವರ್ಷದ ಹುಡುಗಿ

11 ವರ್ಷದ ಹುಡುಗಿ ಎತ್ತಿದ ಶಬ್ಧ ಮಾಲಿನ್ಯ ಸಮಸ್ಯೆಗೆ ಆನಂದ್‌ ಮಹೀಂದ್ರಾ ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬ ಮುನ್ಸೂಚನೆ ಅವರ ಟ್ವೀಟ್‌ನಲ್ಲಿ ಕಂಡು ಬರುತ್ತಿದೆ.

Vijaya Karnataka Web 7 Apr 2019, 9:29 am
ಮುಂಬಯಿ: ರಸ್ತೆಯಲ್ಲಿ ಸಂಚರಿಸುವಾಗ ವಾಹನ ದಟ್ಟಣೆಗಿಂತಲೂ ಹಾರ್ನ್‌ ದಟ್ಟಣೆ ಮಿತಿಮೀರುತ್ತದೆ. ಸಿಗ್ನಲ್‌ ಬಿದ್ದಿದ್ದರೂ ಹಾರ್ನ್‌ ಒತ್ತುತ್ತ ಕಿರಿಕಿರಿಯನ್ನುಂಟು ಮಾಡುವುದು ಸರ್ವೇ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಸುಖಾ ಸುಮ್ಮನೆ ಹಾರ್ನ್‌ ಒತ್ತಿ ಶಬ್ದ ಮಾಲಿನ್ಯ ಮಾಡುವವರಿಂದ ಸಿಕ್ಕಾಪಟ್ಟೆ ಹರಟೆ ಎಂದೆನಿಸಿದರು ಹಲವರು ಅಲ್ಲಿಗೆ ಬಿಟ್ಟುಬಿಡುತ್ತಾರೆ.
Vijaya Karnataka Web Honking problem


ಆದರೆ ಟ್ರಾಫಿಕ್‌ನಲ್ಲಿ ಹಾರ್ನ್‌ ಸಮಸ್ಯೆ ನಿವಾರಿಸಲು ಮುಂಬಯಿನ 11 ವರ್ಷದ ಹುಡುಗಿ ಮೋಹಿಕಾ ಮಿಶ್ರಾ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್‌ ಮಹೀಂದ್ರಾಗೆ ಪತ್ರದ ಮೂಲಕ ಸಲಹೆ ನೀಡಿದ್ದಾಳೆ.

11 ವರ್ಷದ ಹುಡುಗಿಯ ಪತ್ರವನ್ನು ಟ್ವೀಟ್‌ ಮೂಲಕ ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದಾರೆ. ಬಹಳ ಆಯಾಸಗೊಂಡು ದಿನಾಂತ್ಯಕ್ಕೆ ಸಮೀಪಿಸಿದಾಗ ಇಂತಹ ವಿಶೇಷ ಮೈಲ್‌ ಗಮನಿಸಿದಾಗ ದಣಿವು ನೀಗುತ್ತದೆ. ನನಗೆ ಗೊತ್ತು, ಉತ್ತಮ ಮತ್ತು ನಿಶಬ್ದದ ಜಗತ್ತಿಗಾಗಿ ಬಯಸುವ ಆ ಹುಡುಗಿಯಂತಹ ಜನರಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಕಾರುಗಳಿಗೆ 10 ನಿಮಿಷದಲ್ಲಿ 5 ಬಾರಿ ಮಾತ್ರ ಹಾರ್ನ್‌ ಮಾಡುವಂತಿರಬೇಕು. ಒಂದು ಹಾರ್ನ್‌ನ ಶಬ್ದ ವ್ಯಪ್ತಿ 3 ಸೆಕೆಂಡುಗಳಾಗಿರಬೇಕು ಎಂಬ ಸಲಹೆಯನ್ನು ನೀಡಿರುವ ಮೋಹಿಕಾ ಇದರಿಂದ ಲಾಭಗಳೇನು ಎಂಬುದನ್ನು ವಿವರಿಸಿದ್ದಾಳೆ. ಕಾರಿನಲ್ಲಿ ಹಾರ್ನ್‌ಗೆ ಮಿತಿ ಹೇರುವುದರಿಂದ ಕೇವಲ ಚಾಲಕನ ಶಕ್ತಿಯ ಉಳಿತಾಯ ಮಾತ್ರವಲ್ಲ, ಶಬ್ದ ಮಾಲಿನ್ಯವು ಕಡಿಮೆಯಾಗುತ್ತದೆ ಎಂದು ವಿವರಿಸಿದ್ದಾಳೆ.

ನನ್ನ ಪತ್ರಕ್ಕೆ ಪ್ರತಿಕ್ರಿಯಿಸಿದರೆ ಖುಷಿಯಾಗುತ್ತದೆ ಎಂದು ಕೊನೆಗೆ ಒಂದು ವಾಕ್ಯವನ್ನು ಸೇರಿಸಿದ್ದಳು. ಇದೀಗ ಆನಂದ್‌ ಮಹೀಂದ್ರಾ ಅವರು ಟ್ವೀಟ್‌ ಮೂಲಕ ಹಂಚಿಕೊಂಡಿರುವುದು ಆಕೆಗೆ ಅಧಿಕ ಖುಷಿ ನೀಡಿರಬಹುದು.

11 ವರ್ಷದ ಹುಡುಗಿ ಎತ್ತಿದ ಶಬ್ದ ಮಾಲಿನ್ಯ ಸಮಸ್ಯೆಗೆ ಆನಂದ್‌ ಮಹೀಂದ್ರಾ ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬ ಮುನ್ಸೂಚನೆ ಅವರ ಟ್ವೀಟ್‌ನಲ್ಲಿ ಕಂಡು ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ