ಆ್ಯಪ್ನಗರ

ಕಳೆದ ಒಂದು ವರ್ಷದಲ್ಲಿ 25 ಲಕ್ಷ ಉದ್ಯೋಗ ಸೃಷ್ಟಿ: ಸಿಎಂಐಇ ಸಮೀಕ್ಷಾ ವರದಿ

ಮೇ-ಆಗಸ್ಟ್‌ ಅವಧಿಯಲ್ಲಿ ಭಾರತದಲ್ಲಿ40.49 ಕೋಟಿ ಉದ್ಯೋಗಿಗಳಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ40.24 ಉದ್ಯೋಗಿಗಳಿದ್ದರು. ಅಂದರೆ, ಈ ಮೇ-ಆಗಸ್ಟ್‌ ಅವಧಿಯಲ್ಲಿ ಸುಮಾರು 25 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸಿಎಂಐಇ ಸಮೀಕ್ಷೆಯಲ್ಲಿ ಹೇಳಲಾಗಿದೆ.

Vijaya Karnataka Web 31 Oct 2019, 12:02 am
ಟಿಎನ್‌ಎನ್‌ ಹೊಸದಿಲ್ಲಿ : ಮೇ-ಆಗಸ್ಟ್‌ ಅವಧಿಯಲ್ಲಿ ಭಾರತದಲ್ಲಿ40.49 ಕೋಟಿ ಉದ್ಯೋಗಿಗಳಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ40.24 ಉದ್ಯೋಗಿಗಳಿದ್ದರು. ಅಂದರೆ, ಈ ಮೇ-ಆಗಸ್ಟ್‌ ಅವಧಿಯಲ್ಲಿಸುಮಾರು 25 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ(ಸಿಎಂಐಇ) ಸಮೀಕ್ಷೆಯಲ್ಲಿ ಹೇಳಲಾಗಿದೆ.
Vijaya Karnataka Web employment


1,75,000 ಕುಟುಂಬಗಳು ಅಥವಾ 7 ಲಕ್ಷ ಜನರನ್ನು ಸಮೀಕ್ಷೆಯು ಒಳಗೊಂಡಿದೆ. ಕಾಶ್ಮೀರದಿಂದ ತಮಿಳುನಾಡು ತನಕ, ಅಸ್ಸಾಂನಿಂದ ಗುಜರಾತ್‌ ತನಕ ಭಾರತದ ಎಲ್ಲಭಾಗಗಳನ್ನೂ ಸಮೀಕ್ಷೆಯು ವ್ಯಾಪಿಸಿದೆ ಎಂದು ಸಿಎಂಐಇ ಹೇಳಿದೆ.

ಮೈಸೂರು ದಸರಾದಿಂದ ಸೃಷ್ಟಿಯಾಗಿದ್ದು 20 ಸಾವಿರಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗ!

''ಭಾರತದ ಜನಸಂಖ್ಯೆ 100 ಕೋಟಿಗೂ ಅಧಿಕವಿದ್ದರೂ, ಉದ್ಯೋಗಸ್ಥರ ಸಂಖ್ಯೆ 40.5 ಕೋಟಿಯಷ್ಟಿದೆ. ಶೇ.50ರಷ್ಟು ಮಂದಿ ಉದ್ಯೋಗದಲ್ಲಿದ್ದಾರೆ ಎಂದು ಅಂದಾಜು ಮಾಡಿದರೂ, ಅನೇಕರು ಅನೌಪಚಾರಿಕ ಉದ್ಯೋಗ ವಲಯದಲ್ಲಿಇದ್ದಾರೆ. ಸಣ್ಣ ಕೈಗಾರಿಕೆಗಳ ವಲಯ ಮತ್ತು ಕೃಷಿಯಲ್ಲಿಹೆಚ್ಚಿನವರು ಇದ್ದಾರೆ. ಐಟಿ ಕಂಪನಿಗಳು, ಸರಕಾರಿ ಉದ್ಯೋಗ ಅಥವಾ ಖಾಸಗಿ ವಲಯದಲ್ಲಿನ ದೊಡ್ಡ ಕಂಪನಿಗಳಲ್ಲಿನ ಉದ್ಯೋಗಿಗಳ ಸಂಖ್ಯೆ ಬಹಳ ಕಡಿಮೆ ಇದೆ,'' ಎಂದು ಸಿಎಂಐಇ ಸಿಇಒ ಮತ್ತು ಎಂಡಿ ಮಹೇಶ್‌ ವ್ಯಾಸ್‌ ಹೇಳಿದ್ದಾರೆ.

2021 ರಿಂದ ಜಾರಿ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಕೆಲಸವಿಲ್ಲ

ವ್ಯಾಸ್‌ ಅವರ ಪ್ರಕಾರ, 2018ರಲ್ಲಿ1 ಕೋಟಿ ಉದ್ಯೋಗಗಳು ನಷ್ಟವಾಗಿವೆ. ನೋಟು ಅಮಾನ್ಯತೆ ಮತ್ತು ಜಿಎಸ್‌ಟಿಯಿಂದಾಗಿ ಉದ್ಯೋಗ ನಷ್ಟ ಸಂಭವಿಸಿದೆ. ''ಒಂದು ಅವಧಿಯಲ್ಲಿ41.1 ಕೋಟಿ ಉದ್ಯೋಗಿಗಳನ್ನು ದೇಶ ಹೊಂದಿತ್ತು. ಬಳಿಕ ಉದ್ಯೋಗಿಗಳ ಸಂಖ್ಯೆಯು 40.1 ಕೋಟಿಗೆ ಕುಸಿಯಿತು. ಈಗ 40.5 ಕೋಟಿಗೆ ಮರಳಿದೆ,'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  • * ಕೃಷಿ ವಲಯದಲ್ಲಿಉದ್ಯೋಗಗಳ ಸಂಖ್ಯೆ 84 ಲಕ್ಷಕ್ಕೆ ಏರಿಕೆ
  • * ಉತ್ಪಾದನೆ, ಐಟಿ, ಹಣಕಾಸು ವಲಯದಲ್ಲಿಉದ್ಯೋಗಗಳು ಕುಸಿತ
  • * ಕೋಳಿ ಸಾಗಣೆ, ಪಶುಪಾಲನೆಯಲ್ಲಿಉದ್ಯೋಗಗಳ ಸಂಖ್ಯೆ 18 ಲಕ್ಷದಿಂದ 43 ಲಕ್ಷಕ್ಕೆ ಹೆಚ್ಚಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ