ಆ್ಯಪ್ನಗರ

ಅನಿಲ್‌ ಅಂಬಾನಿಯ ಆಸ್ತಿ ಮುಟ್ಟುಗೋಲಿಗೆ ಹೊಂಚು ಹಾಕುತ್ತಿದೆ ಚೀನಾದ 3 ಬ್ಯಾಂಕ್‌ಗಳು!

​​ಚೀನಾ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ , ಚೀನಾ ರಫ್ತು-ಆಮದು ಬ್ಯಾಂಕ್ ಮತ್ತು ಚೀನಾ ಅಭಿವೃದ್ಧಿ ಬ್ಯಾಂಕ್ ಸಾಲವನ್ನು ಮರುಪಡೆಯುವಿಕೆ ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗಿದೆ. ಸಾಲ ಮರುಪಡೆಯುವಿಕೆ ಮಾತ್ರವಲ್ಲದೆ ಈವರೆಗೆ ಆಗಿರುವ ಕಾನೂನು ವೆಚ್ಚಗಳನ್ನು ಮರುಪಡೆಯಲು ಸಜ್ಜಾಗಿದೆ.

Agencies 28 Sep 2020, 11:44 am
ಲಂಡನ್‌: ಉದ್ಯಮಿ ಅನಿಲ್ ಅಂಬಾನಿಯವರ ವಿಶ್ವಾದ್ಯಂತ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಚೀನಾ ಮೂಲದ ಮೂರು ಬ್ಯಾಂಕುಗಳು ಸಜ್ಜಾಗಿದೆ. ಈ ಮೂರು ಬ್ಯಾಂಕುಗಳಲ್ಲಿ ಅನಿಲ್‌ ಅಂಬಾನಿ ಸುಮಾರು 5,300 ಕೋಟಿ ರೂ. ಸಾಲ ಪಡೆದಿದ್ದು ಇದರ ಹಣವನ್ನು ಪಡೆಯುವ ಉದ್ದೇಶದಿಂದ ಚೀನಿ ಬ್ಯಾಂಕುಗಳು ಅನಿಲ್‌ ಅಂಬಾನಿ ಆಸ್ತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಕ್ರಮಕ್ಕೆ ಮುಂದಾಗಿದೆ.
Vijaya Karnataka Web Anil Ambani


ಚೀನಾ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ , ಚೀನಾ ರಫ್ತು-ಆಮದು ಬ್ಯಾಂಕ್ ಮತ್ತು ಚೀನಾ ಅಭಿವೃದ್ಧಿ ಬ್ಯಾಂಕ್ ಸಾಲವನ್ನು ಮರುಪಡೆಯುವಿಕೆ ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗಿದೆ. ಸಾಲ ಮರುಪಡೆಯುವಿಕೆ ಮಾತ್ರವಲ್ಲದೆ ಈವರೆಗೆ ಆಗಿರುವ ಕಾನೂನು ವೆಚ್ಚಗಳನ್ನು ಮರುಪಡೆಯಲು ಸಜ್ಜಾಗಿದೆ.

ಇನ್ನು ಶುಕ್ರವಾರ ಈ ಬಗ್ಗೆ ಲಂಡನ್‌ನ ನ್ಯಾಯಾಲಯದಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ಬಳಿಕ ಚೀನಾದ ಈ ಮೂರು ಬ್ಯಾಂಕ್‌ಗಳು ಅಂಬಾನಿ ವಿರುದ್ಧ ಕ್ರಮ ಜಾರಿಗೊಳಿಸಲು ಮುಂದಾಗಿರುವ ಬಗ್ಗೆ ಘೋಷಿಸಿಕೊಂಡಿದೆ. ಇನ್ನು ಚೀನಿ ಬ್ಯಾಂಕುಗಳ ಪರ ವಕಾಲತ್ತು ವಹಿಸಿದ ವಕೀಲರು, ಅನಿಲ್‌ ಅಂಬಾನಿ ಸಾಲ ಮರುಪಾವತಿ ಮಾಡುವದರಿಂದ ತಪ್ಪಿಸಿಕೊಳ್ಳಲು. ಅತಂತ್ಯ ಪರಿಣಾಮಕಾರಿಯಾಗಿ ವಾದಿಸುತ್ತಿದ್ದಾರೆ. ಹೀಗಾಗಿ ಅವರ ಆಸ್ತಿ ವಿರುದ್ಧ ಕ್ರಮಕೊಳ್ಳುತ್ತೇವೆ ಎಂದು ಘೋಷಿಸಿದ್ದಾರೆ.

ಕಳೆದ ವಾರ ₹2000 ಕುಸಿತ ಕಂಡ ಚಿನ್ನದ ಬೆಲೆ! ಈ ವಾರವೂ ಇಳಿಕೆ ಹಾದಿ ಹಿಡಿಯಲಿದೆಯೇ?

ಅನಿಲ್‌ ಅಂಬಾನಿ ಅವರು ಚೀನಾದ ಮೂರು ಬ್ಯಾಂಕುಗಳಿಗೆ 2020ರ ಜೂನ್‌ 12ರೊಳಗೆ ಬಾಕಿ ಇರುವ 5281 ಕೋಟಿ ರೂಪಾಯಿ ಸಾಲದ ಮೊತ್ತವನ್ನು ಪಾವತಿಸುವಂತೆ ಬ್ರಿಟನ್‌ ಹೈಕೋರ್ಟ್‌ ತಿಳಿಸಿತ್ತು. ಇದರ ಜತೆಗೆ 7 ಕೋಟಿ ರೂಪಾಯಿ ಕಾನೂನು ವೆಚ್ಚವನ್ನು ಪಾವತಿಸುವಂತೆ ಮೇ 22ರಂದು ಆದೇಶಿಸಿತ್ತು.

ಆದರೆ ಅನಿಲ್‌ ಅಂಬಾನಿ ಅವರು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸಲು ವಿಫಲರಾದ ಕಾರಣ, ಚೀನಾ ಬ್ಯಾಂಕುಗಳು ಮತ್ತೆ ಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಅವರ ಮರುಪಾವತಿ ಮಾಡುವುದನ್ನು ಕಾಯಲು ಸಾಧ್ಯವಿಲ್ಲ ನಾವೇ ಅವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ