ಆ್ಯಪ್ನಗರ

ಗುಜರಾತ್‌: 1 ವರ್ಷದಲ್ಲಿ ಹಾಲು ಮಾರಾಟದಿಂದ ಬರೋಬ್ಬರಿ 1 ಕೋಟಿ ಗಳಿಸಿದ 62 ವರ್ಷದ ಮಹಿಳೆ!

ಮನೆಯಲ್ಲಿರುವ ಚಿಕ್ಕ ಫಾರ್ಮ್‌ ಮೂಲಕವೇ 2020ರಲ್ಲಿ ನವಾಲ್‌ಬೆನ್ 1.10 ಕೋಟಿ ಗಳಿಸಿದರು. ​​ಅಂದರೆ ತಿಂಗಳಿಗೆ 3.50 ಲಕ್ಷ ಸಂಪಾದನೆ ಮಾಡಿದ್ದಾರೆ. 2020ರಲ್ಲಿ 87.95 ಲಕ್ಷ ಕೇವಲ ಹಾಲು ಮಾರಾಟದಿಂದ ನವಾಲ್‌ಬೆನ್‌ ಗಳಿಸಿದ್ದಾರೆ. ಕಳೆದ ವರ್ಷ ಮನೆಯಲ್ಲೇ ಡೈರಿ ಆರಂಭಿಸಿದ ನವಾಲ್‌ಬೆನ್ ಬಳಿ ಸದ್ಯ 80 ಎಮ್ಮೆಗಳು ಹಾಗೂ 45 ದನಗಳಿವೆ.

Vijaya Karnataka Web 7 Jan 2021, 1:38 pm
ಗುಜರಾತ್‌: ಛಲ, ಆತ್ಮಸ್ಥೈರ್ಯ, ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಗುಜರಾತಿನ 62 ವರ್ಷದ ನವಾಲ್‌ಬೆನ್ ದಲ್ಸಂಗ್‌ಭಾಯ್ ಚೌಧರಿ ಅವರೇ ಸಾಕ್ಷಿ. ಯಾಕೆಂದರೆ ಇವರು ಮಾಡಿರುವ ಸಾಧನೆ ಅಷ್ಟೇನೂ ಸಣ್ಣದಲ್ಲ. ದೊಡ್ಡ ದೊಡ್ಡ ಉದ್ಯಮಿಗಳಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಗ್ರಾಮೀಣ ಪ್ರದೇಶದ ಮಹಿಳೆ ಹಾಲಿನ ಕ್ರಾಂತಿಯೇ ಸೃಷ್ಟಿಸಿದ್ದಾರೆ. ಈ ವಯಸ್ಸಿನಲ್ಲೂ ಪರಿಶ್ರಮದ ಮೂಲಕ ಕೋಟ್ಯಧಿಪತಿಯಾಗಿದ್ದಾರೆ.
Vijaya Karnataka Web Gujarat women


ಮನೆಯಲ್ಲೇ ಡೈರಿ ಫಾರ್ಮ್‌!
ಹಾಲು ಮಾರಾಟ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಜೀವನಕ್ಕೆ ಬೇಕಾದ ಆದಾಯ ಸಿಗುತ್ತದೆ. ಅದರಲ್ಲೂ ಡೈರಿ ಫಾರ್ಮ್‌ಗಳನ್ನು ಮಾಡಿದರೆ ಉತ್ತಮ ಹಣ ಸಂಪಾದಿಸಬಹುದು. ಆದರೆ ಕೆಲವೊಬ್ಬರಿಗೆ ಈ ವಯಸ್ಸು ಸಮಸ್ಯೆಯಾಗುತ್ತದೆ. ಅಂತಹ ಚಾಲೆಂಜಿಂಗ್‌ ಕೆಲಸಕ್ಕೆ ಕೈ ಹಾಕುವಾಗ ನೂರು ಬಾರಿ ಯೋಚಿಸುತ್ತಾರೆ. ಆದರೆ ಇಂತಹ ಯಾವುದೇ ಸಮಸ್ಯೆ 62 ವರ್ಷದ ನವಾಲ್‌ಬೆನ್ ದಲ್ಸಂಗ್‌ಭಾಯ್ ಚೌಧರಿಗೆ ಕಾಣಿಸಿಲ್ಲ.

ಡೈರಿ ನಿರ್ಮಿಸಬೇಕು ಎಂದು ಕನಸು ಕಂಡಿದ್ದ ನವಾಲ್‌ಬೆನ್ ಕೆಲವೇ ದನ ಹಾಗೂ ಎಮ್ಮೆಗಳನ್ನು ಹೊಂದಿದ್ದರು. ನಂತರ ಮನೆಯಲ್ಲೇ ಸಣ್ಣ ಡೈರಿಯನ್ನು ಆರಂಭಿಸಿ ಹೆಚ್ಚು, ದನಗಳನ್ನು ಖರೀದಿಸಿದರು. ಎಷ್ಟರ ಮಟ್ಟಿಗೆ ಅಂದರೆ ಚಿಕ್ಕ ಡೈರಿ ಮೂಲಕವೇ ಅವರ ಇಡೀ ಗ್ರಾಮಕ್ಕೆ ಹಾಲು ಕೊಡುವಂತಾಯಿತು. ಹೀಗಾಗಿ ನಾಗಾನಾ ಗ್ರಾಮದಲ್ಲಿ ನವಾಲ್‌ಬೆನ್‌ ಫೇಮಸ್‌ ಆಗಿ ಬಿಟ್ಟರು. ನಂತರ ಇಡೀ ಜಿಲ್ಲೆಗೆ ಇವರ ಕೀರ್ತಿ ಹರಡಿತು. ಮನೆಯಲ್ಲಿರುವ ಚಿಕ್ಕ ಫಾರ್ಮ್‌ ಮೂಲಕವೇ 2020ರಲ್ಲಿ ನವಾಲ್‌ಬೆನ್ 1.10 ಕೋಟಿ ಗಳಿಸಿದರು.

ಸತತ ಎರಡನೇ ದಿನವೂ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ; ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆ

ಅಂದರೆ ತಿಂಗಳಿಗೆ 3.50 ಲಕ್ಷ ಸಂಪಾದನೆ ಮಾಡಿದ್ದಾರೆ. 2020ರಲ್ಲಿ 87.95 ಲಕ್ಷ ಕೇವಲ ಹಾಲು ಮಾರಾಟದಿಂದ ನವಾಲ್‌ಬೆನ್‌ ಗಳಿಸಿದ್ದಾರೆ. ಕಳೆದ ವರ್ಷ ಮನೆಯಲ್ಲೇ ಡೈರಿ ಆರಂಭಿಸಿದ ನವಾಲ್‌ಬೆನ್ ಬಳಿ ಸದ್ಯ 80 ಎಮ್ಮೆಗಳು ಹಾಗೂ 45 ದನಗಳಿವೆ. ದಿನ ನಿತ್ಯ ತಾನೇ ಎದ್ದು ಹಾಲು ಕರೆಯುವ ಕೆಲಸವನ್ನು ನವಾಲ್‌ಬೆನ್ ದಲ್ಸಂಗ್‌ಭಾಯ್ ಚೌಧರಿ ಮಾಡುತ್ತಾರೆ. ಉತ್ತಮ ಆದಾಯ ಬಂದಿದ್ದರಿಂದ ಹತ್ತು ಮಂದಿ ಕೆಲಸದವರನ್ನು ಇಟ್ಟುಕೊಂಡಿದ್ದಾರೆ.

ನನ್ನ ಮಕ್ಕಳಿಂದಲೂ ನನಗೆ ಉತ್ತಮ ಆದಾಯ!
ನನ್ನ ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದಾರೆ. ಉತ್ತಮ ಶಿಕ್ಷಣ ಪಡೆದಿದ್ದರಿಂದ ಉತ್ತಮ ವೇತನ ಸಿಗಬೇಕಿತ್ತು. ಆದರೆ ಅವರೆಲ್ಲರಿಗಿಂತಲೂ ತನಗೆ ಉತ್ತಮ ಸಂಬಂಳ ಸಿಗುತ್ತದೆ ಎಂದು ನವಾಲ್‌ಬೆನ್ ತಿಳಿಸಿದ್ದು, ಹೈನುಗಾರಿಕೆಯಿಂದ ಉತ್ತಮ ಯಶಸ್ಸು ಕಂಡಿದ್ದೇನೆ ಎಂದು ಬಣ್ಣಿಸಿದ್ದಾರೆ. ಮಹಿಳೆಯ ಹಾಲಿನ ಕ್ರಾಂತಿ ಗಮನಿಸಿ ಎರಡು ಲಕ್ಷ್ಮಿ ಪ್ರಶಸ್ತಿಗಳು ಮತ್ತು ಮೂರು ಅತ್ಯುತ್ತಮ ಪಶುಪಾಲಕ್ ಪ್ರಶಸ್ತಿ ಜಿಲ್ಲಾಡಳಿತ ನೀಡಿ ಗೌರವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ