ಆ್ಯಪ್ನಗರ

ಮನೆ ಕೆಲಸದವರ ಹಿತ ಕಾಯಲು ರಾಷ್ಟ್ರೀಯ ನೀತಿ

ಮನೆ ಕೆಲಸದ ಕಾರ್ಮಿಕರ ಹಿತ ಕಾಯಲು ರಾಷ್ಟ್ರೀಯ ನೀತಿ ರೂಪಿಸಬೇಕು ಎಂಬ ಬೇಡಿಕೆಯನ್ನು ಸರಕಾರ ಪರಿಗಣಿಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಅವರು ಲೋಕಸಭೆಯಲ್ಲಿ ಸೋಮವಾರ ಹೇಳಿದ್ದಾರೆ. ಇದು ಜಾರಿಗೆ ಬಂದರೆ ದೇಶದಲ್ಲಿನ ಮನೆ ಕೆಲಸದವರು ಮತ್ತು ಚಾಲಕರೂ ಸೇರಿದಂತೆ 50 ಲಕ್ಷ ಮಂದಿಗೆ ಅನುಕೂಲವಾಗಲಿದೆ.

THE ECONOMIC TIMES 25 Jun 2019, 5:00 am
ಹೊಸದಿಲ್ಲಿ: ಮನೆ ಕೆಲಸದ ಕಾರ್ಮಿಕರ ಹಿತ ಕಾಯಲು ರಾಷ್ಟ್ರೀಯ ನೀತಿ ರೂಪಿಸಬೇಕು ಎಂಬ ಬೇಡಿಕೆಯನ್ನು ಸರಕಾರ ಪರಿಗಣಿಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಅವರು ಲೋಕಸಭೆಯಲ್ಲಿ ಸೋಮವಾರ ಹೇಳಿದ್ದಾರೆ. ಇದು ಜಾರಿಗೆ ಬಂದರೆ ದೇಶದಲ್ಲಿನ ಮನೆ ಕೆಲಸದವರು ಮತ್ತು ಚಾಲಕರೂ ಸೇರಿದಂತೆ 50 ಲಕ್ಷ ಮಂದಿಗೆ ಅನುಕೂಲವಾಗಲಿದೆ.
Vijaya Karnataka Web a national policy for domestic workers
ಮನೆ ಕೆಲಸದವರ ಹಿತ ಕಾಯಲು ರಾಷ್ಟ್ರೀಯ ನೀತಿ


ಮನೆ ಕೆಲಸದವರನ್ನು ಗುರ್ತಿಸಲು ಮತ್ತು ಅರ್ಹ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿತ ನೀತಿಯಿಂದ ಸಾಧ್ಯವಾಗಲಿದೆ. ಅವರ ಹಕ್ಕುಗಳನ್ನೂ ರಕ್ಷಿಸಬಹುದು. ''ಮನೆ ಕೆಲಸದವರಿಗೆ ಸಂಬಂಧಿಸಿದ ರಾಷ್ಟ್ರೀಯ ಕರಡು ನೀತಿಯು ಸರಕಾರದ ಪರಿಗಣನೆಯಲ್ಲಿದೆ,'' ಎಂದು ಗಂಗ್ವಾರ್‌ ಹೇಳಿದ್ದಾರೆ.

ಮನೆಗೆಲಸದವರ ಹಿತಾಸಕ್ತಿಗಳನ್ನು ಸಂರಕ್ಷಿಸುವ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರದ ಎನ್‌ಡಿಎ ಸರಕಾರ ಹೊಸ ರಾಷ್ಟ್ರೀಯ ಕಾರ್ಮಿಕ ನೀತಿಯೊಂದನ್ನು ಸಿದ್ಧಪಡಿಸುತ್ತಿದೆ. ಈ ನೀತಿಯಲ್ಲಿ ಪೂರ್ಣಾವಧಿಯ ಮನೆ ಕೆಲಸದವರಿಗೆ ಸಾಮಾಜಿಕ ಭದ್ರತೆ ಒದಗಿಸುವ ಜತೆಗೆ, ಲೈಂಗಿಕ ಕಿರುಕುಳ ಹಾಗೂ 24 ಗಂಟೆಯೂ ಮನೆಯಲ್ಲಿರಿಸಿಕೊಂಡಿರುವ ಕಾರ್ಮಿಕ ಪದ್ಧತಿಯಿಂದ ರಕ್ಷ ಣೆ ಒದಗಿಸುವ ನಿಯಮಗಳನ್ನು ಅಳವಡಿಸಲಾಗುತ್ತಿದೆ.

ರಾಷ್ಟ್ರೀಯ ಕರಡಿನಲ್ಲಿ ಏನಿದೆ?

* ಈಗ ಚಾಲ್ತಿಯಲ್ಲಿರುವ ಕಾರ್ಮಿಕ ಕಾನೂನು ಮತ್ತು ನಿಯಮಾವಳಿಗೆ ಮನೆಗೆಲಸದ ಕಾರ್ಮಿಕರನ್ನೂ ಸೇರಿಸಬೇಕು.

* ನೋಂದಾಯಿತ ಉದ್ಯೋಗಿ/ಕೆಲಸಗಾರನ ಹಕ್ಕುಗಳು ಮನೆಗೆಲಸದ ಕಾರ್ಮಿಕರಿಗೂ ಸಿಗಬೇಕು. ಕೆಲಸಗಾರರಿಗೆ ಸಿಗುವ ಎಲ್ಲ ಹಕ್ಕುಗಳು ಮತ್ತು ಸೌಲಭ್ಯಗಳು ಅನ್ವಯವಾಗುತ್ತವೆ.

* ಮನೆಗೆಲಸದವರು ತಮ್ಮದೇ ಆದ ಸಂಘಟನೆ ಅಥವಾ ಕಾರ್ಮಿಕ ಸಂಘ ಕಟ್ಟಲು ಹಕ್ಕು ಪಡೆಯುತ್ತಾರೆ.

* ಕನಿಷ್ಠ ವೇತನಕ್ಕೂ ಅರ್ಹತೆ ಪಡೆಯುತ್ತಾರೆ. ಸಾಮಾಜಿಕ ಭದ್ರತೆ, ರಕ್ಷಣೆಗೂ ಅರ್ಹರಾಗಲಿದ್ದಾರೆ.

* ಬೈಗುಳ, ಹಿಂಸೆ, ಕಿರುಕುಳದಿಂದ ಮನೆಗೆಲಸದವರಿಗೆ ರಕ್ಷಣೆ.

* ಮನೆಗೆಲಸದವರ ನೇಮಕಕ್ಕೆ ಸಂಬಂಧಿಸಿದ ಪ್ಲೇಸ್‌ಮೆಂಟ್‌ ಏಜೆನ್ಸಿಗಳ ಮೇಲೆ ನಿಯಂತ್ರಣ.

* ಕಾರ್ಮಿಕರ ಕೌಶಲ ಹೆಚ್ಚಳ ಮತ್ತು ಕೋರ್ಟ್‌, ನ್ಯಾಯಮಂಡಳಿಗಳಿಗೆ ದೂರು ನೀಡುವ ವ್ಯವಸ್ಥೆಗೆ ಆದ್ಯತೆ

* ಮನೆಕೆಲಸದವರನ್ನು ನಿರ್ಲಕ್ಷಿಸುವ ಹಾಗೂ ಹೀಗಳೆಯುವಂತಿಲ್ಲ. ಅವರನ್ನು ಉದ್ಯೋಗಿಗಳಂತೆ ಗೌರವಯುತವಾಗಿ ನಡೆಸಿಕೊಳ್ಳಬೇಕು.

ಕನಿಷ್ಠ ವೇತನ 9,000 ರೂ.

ಪೂರ್ಣಾವಧಿಗೆ ಮನೆಗೆಲಸದವರನ್ನು ನೇಮಿಸಿಕೊಂಡರೆ ಅವರಿಗೆ ಮಾಸಿಕ ಕನಿಷ್ಠ 9,000 ರೂ. ವೇತನ, ವಾರ್ಷಿಕ ಕನಿಷ್ಠ 15 ವೇತನ ಸಹಿತ ರಜೆ ಹಾಗೂ ಹೆರಿಗೆ ರಜೆಯ ರಕ್ಷ ಣೆ ನೀಡಬೇಕು ಎಂದು ರಾಷ್ಟ್ರೀಯ ನೀತಿಯ ಕರಡಿನಲ್ಲಿ ಹೇಳಲಾಗಿದೆ.

4. ವಿಶ್ವದ ಎರಡನೇ ದೊಡ್ಡ ಆರ್ಥಿಕತೆ ಎನ್ನುವ ಹೆಗ್ಗಳಿಕೆಯ ಚೀನಾದ ಕೈಗಾರಿಕಾ ಬೆಳವಣಿಗೆ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಮೆರಿಕದೊಂದಿಗಿನ ವಾಣಿಜ್ಯ ಸಂಘರ್ಷದಿಂದಾಗಿ ಉದ್ಯಮಕ್ಕೆ ಪೆಟ್ಟು ಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ